ಶರತ್ ಶವಯಾತ್ರೆ ಕಲ್ಲುತೂರಾಟ ಪ್ರಕರಣ; ಶರಣ್ ಪಂಪ್ ವೆಲ್ ಸೇರಿದಂತೆ ಐವರಿಗೆ ಜಾಮೀನು
ಮಂಗಳೂರು: ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಶವ ಯಾತ್ರೆಯ ವೇಳೆ ಬಿಸಿರೋಡಿನಲ್ಲಿ ಕಲ್ಲು ತೂರಾಟಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಗಳ ನಾಯಕರು ಹಾಗೂ ಬಿಜೆಪಿಯ ನಾಯಕರು ಸೇರಿದಂತೆ ಐದು ಮಂದಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬಜರಂಗದಳದ ಶರಣ್ ಪಂಪ್ ವೆಲ್, ಹಿಂದೂ ಜಾಗರಣ ವೇದಿಕೆಯ ಮುಖಂಡ ಹಾಗೂ ಬಿಜೆಪಿ ಪದಾಧಿಕಾರಿ ಸತ್ಯಜಿತ್ ಸುರತ್ಕಲ್, ಹಾಗೂ ಹರೀಶ್ ಪೂಂಜಾ, ಮುರಳಿ ಹಂಸತಡ್ಕ ಮತ್ತು ಪ್ರದೀಪ್ ಪಂಪ್ ವೆಲ್ ವಿರುದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಸೆಕ್ಷನ್ 308 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಜುಲೈ 8 ರಿಂದ ಐವರು ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಬುಧವಾರ ನ್ಯಾಯಲಯ ಕೊನೆಗೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.