Home Mangalorean News Kannada News ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ಗಾಯಕ, ನಟ , ಸಮಾಜ ಸೇವಕ ಶ್ರೀ...

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ಗಾಯಕ, ನಟ , ಸಮಾಜ ಸೇವಕ ಶ್ರೀ ಜೋಸೆಫ್ ಮಥಿಯಸ್ ಮಡಿಲಿಗೆ

Spread the love

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ “ಮಯೂರ ಪ್ರಶಸ್ತಿ” ಗಾಯಕ, ನಟ, ಸಮಾಜ ಸೇವಕ ಶ್ರೀ ಜೋಸೆಫ್ ಮಥಿಯಸ್ ಮಡಿಲಿಗೆ

ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾ ವಿಭಾಗದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ನಡೆಸಿಕೊಂಡು ಬರುತಿರುವ ಶಾರ್ಜಾ ಕರ್ನಾಟಕ ಸಂಘ ಯು.ಎ.ಇ.ಯಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಆಯ್ಕೆಮಾಡಿ ಪ್ರತಿಷ್ಠಿತ “ಮಯೂರ ಪ್ರಶಸ್ತಿ”ಯನ್ನು ಪ್ರದಾನಿಸಿ ಗೌರವಿಸಿಕೊಂಡು ಬರುತಿದೆ. ಈ ಬಾರಿ ಶ್ರೀ ಜೋಸೆಫ್‍ ಮಥಿಯಸ್‍ ರವರಿಗೆ ನೀಡಿಗೌರವಿಸಲಾಗುತಿದೆ. ಶ್ರೀಯುತರು ಸುಮಧು ಅರ ಕಂಠಸಿರಿಯ ಗಾಯಕರಾಗಿ, ನಟರಾಗಿ, ಸಮಾಜ ಸೇವಕರಾಗಿ,  ಯು.ಎ.ಇ. ಯಲ್ಲಿ ನಡೆಯುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಪೊತ್ಸಾಹ, ಪ್ರಾಯೋಜಕತ್ವ ನೀಡಿಗಲ್ಫ್ ನಾಡಿನಲ್ಲಿ ಕರ್ನಾಟಕದ ಕಲೆ, ಭಾಷೆ, ಸಂಸ್ಕೃತಿ ಸದಾ ವಿಜೃಂಭಿಸುವಲ್ಲಿ ನೀಡಿರುವ ಕೊಡುಗೆ ಅಪಾರವಾಗಿದೆ.

joseph-mathias-mangalorean-com-20161112

ಶ್ರೀ ಜೋಸೆಫ್‍ಮಥಿಯಸ್‍ರವರ ಹೆಜ್ಜೆಗುರುತು…..

ಸುಂದರ ಕರ್ನಾಟಕದ ಕಡಲ ತೀರದ ಮಂಗಳೂರಿನ ಬಳಿಯಿರುವ ಕುಪ್ಪೆಪದವು ಶ್ರೀ ಲಾರೆನ್ಸ್ ಮಥಿಯಸ್ ಮತ್ತು ಶ್ರೀಮತಿ ಮೇರಿ ಮಥಿಯಸ್ ದಂಪತಿಗಳ ಮಗನಾಗಿ ಜೋಸೆಫ್ ಮಥಿಯಸ್ ಜನಿಸಿದರು. ನಯನ ಮನೋಹರ ಪ್ರಕೃತಿಯ ನಡುವಿನಲ್ಲಿ ಬೆಳೆಯವ ಸಂದರ್ಭದಲ್ಲಿ ಹಕ್ಕಿಗಳ ಚಿಲಿಪಿಲಿ ಗಾನ, ಮನೆಯ ಸುತ್ತಮುತ್ತಲಿನ ಸಾಕುಪ್ರಾಣಿಗಳ ಕೂಗು ಮನಕ್ಕೆ ಮುದನೀಡುವ ಅಂದಿನ ಆ ಸಮಯದಲ್ಲಿ ಪ್ರಾಥಮಿಕ ಹಂತದ ವಿದ್ಯಾರ್ಥಿಯಾಗಿರುವಾಗಲೇ ತಮ್ಮ ತಾಯಿಯವರಿಂದ ಪ್ರಥಮ ಬಾರಿಗೆ ಪದ್ಯ, ಹಾಡುಗಳನ್ನು ಸುಸ್ರಾವ್ಯವಾಗಿ ಹಾಡುವುದನ್ನುಕಲಿಯುತ್ತಾ ಬೆಳೆದು ಬಂದರು. ಪ್ರೌಢಶಾಲಾ ಹಂತ ಕಾಲೇಜು ಹಂತದವರೆಗೆ ತಮ್ಮ ಕಲಿಯುವಿಕೆಯೊಂದಿಗೆ ತಮ್ಮಲ್ಲಿದ ಗಾಯನ ಪ್ರತಿಭೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

ಶಾಲಾ ಹಂತದಲ್ಲಿ ಗಾಯನ ಸ್ಪರ್ಧೆಯಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೋಳ್ಳುತಿದ್ದರು. ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಇವರ ಅಪ್ರತಿಮ ಗಾಯನ ಕಲೆಯನ್ನು ಗುರುತಿಸಿದ ಬೆಂದೂರ್‍ಚರ್ಚ್‍ನ ಗಾಯನ ಮಂಡಳಿ (ಕ್ವಯಾರ್) ಯಲ್ಲಿ ಸದಸ್ಯತ್ವ ನೀಡಿ ಪ್ರೊಫೆಸರ್‍ ಅಲ್ಬಾನ್‍ ಕ್ಯಾಸ್ಟಲಿನೋ ಗಾಯನದಲ್ಲಿ ಸಮರ್ಪಕವಾದ ತರಭೇತಿ ನೀಡಿಗಾಯನ ಪ್ರತಿಭೆಗೆ ತಕ್ಕ ಪುರಸ್ಕಾರ ದೊರೆಯುವಂತೆ ಅವಕಾಶ ಕಲ್ಪಿಸಿದರು. ನಂತರದ ದಿನಗಳು ಜೋಸೆಫ್ ಮಥಿಯಸ್‍ರವರಿಗೆ ಬಹಳ ಅಮೂಲ್ಯ ದಿನಗಳಾದವು. ಇಂಟರ್ ಪ್ಯಾರಿಶ್‍ಗಾಯನ ಸ್ಪರ್ಧೆಯಲ್ಲಿ ಜಯಗಳಿಸುತ್ತಾ ಜನಮನದಲ್ಲಿ ತಮ್ಮ ಕಂಠಸಿರಿಯ ಬಗ್ಗೆ ಮೆಚ್ಚುಗೆಯನ್ನು ಪಡೆಯುತ್ತಾ ಪ್ರಸಿದ್ದಿಯನ್ನು ಪಡೆದರು.

ಮೂಡಬಿದರಿ ವಾರಾಡೊದಲ್ಲಿ ನಡೆದಗಾಯನ ಸ್ಪರ್ಧೆಯಲ್ಲಿಜೋಡಿ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದರು. ಮಂಗಳೂರು ಕೊಂಕಣ್ ನಾಟಕ ಸಭಾ ಮತ್ತು ಕಲಾ ಸಂಪತ್‍ಗಾಯನ ಸ್ಪರ್ಧೆ, ಬೆಂದೂರ್ ಪ್ಯಾರಿಶ್‍ಗಾಯನ ಸ್ಪರ್ಧೆಗಳಲ್ಲಿ ತಮ್ಮಗಾಯನ ಪ್ರತಿಭೆಗೆ ಸೂಕ್ತ ಪುರಸ್ಕಾರದೊರೆಯಿತು.

ಬದುಕಿನ ಬಂಡಿ ಸಾಗಲು ದುಡಿಮೆಗೆಒಂದು ವೃತ್ತಿ ಬೇಕಾಗಿತ್ತು. ಕೆಲಸಕ್ಕಾಗಿ ಮುಂಬೈಯತ್ತ ಪಯಣ 1988ರಲ್ಲಿ ಚರ್ಚ್‍ಗೇಟ್ ಸರಹದ್ಧಿನಲ್ಲಿ ಶಿಪ್ಪಿಂಗ್ ಕಂಪೆನಿಯಲ್ಲಿ ಕಸ್ಟಮ್ಸ್‍ ಕ್ಲರ್ಕ್‍ ಉದ್ಯೋಗಐದು ವರ್ಷಗಳ ಕಾಲ ದುಡಿದು ಅಪಾರ ಅನುಭವ ಪಡೆದ ಸಂದರ್ಭದಲ್ಲಿ ಒಂದು ದಿನ ಟೈಮ್ಸ್‍ ಆಫ್‍ ಇಂಡಿಯಾದಲ್ಲಿ ಗಲ್ಫ್‍ರಾಷ್ಟ್ರದಲ್ಲಿ ಉದ್ಯೋಗಕ್ಕೆ ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ಜಾಹಿರಾತು ನೋಡಿದ ಜೋಸೆಫ್‍ರವರು ಸಂದರ್ಶನದಲ್ಲಿ ಭಾಗವಹಿಸಿದರು. ತಮ್ಮ ಅನುಭವದ ಆಧಾರದ ಮೇಲೆ ಆಯ್ಕೆಯಾಗಿ ಗಲ್ಫ್‍ ರಾಷ್ಟ್ರಕ್ಕೆ ಹೋಗುವ ಅವಕಾಶ ದೊರೆಯಿತು.

ಗಲ್ಫಿನತ್ತ ಪಯಣ….

ಹುಟ್ಟೂರಿನಿಂದ… ಮುಂಬೈ…1997ರಲ್ಲಿ ಮುಂಬಯಿನಿಂದ ಗಲ್ಫ್‍ನತ್ತ ಪಯಣ ದುಬಾಯಿಯಲ್ಲಿ ಕಸ್ಟಂಸ್‍ಕ್ಲರ್ಕ್‍ ಉದ್ಯೋಗದೊರೆಯಿತು ಅತೀ ಶಿಘ್ರದಲ್ಲೆ ಕಂಪೆನಿ ಮುಚ್ಚಿ ಹೋಯಿತು. ನಂತರ ತೆಗೆದುಕೊಂಡ ನಿರ್ಧಾರ ಸ್ವಂತ ಉಧ್ಯಮ ಸ್ಥಾಪಿಸುವುದು. ಸ್ನೇಹಿತರ ಸಹಕಾರ ಪಡೆದು1997ರಲ್ಲಿ ಸ್ಥಾಪಿಸಿದ ಸಂಸ್ಥೆ ಮೆರಿಟ್ ಫ್ರೈಟ್‍ಸಿಸ್ಟಂಸ್‍ ಕ್ರಮೇಣ ಅಭಿವೃದ್ಧಿಯತ್ತ ನಡೆದು2002ರಲ್ಲಿ ಸ್ವತಂತ್ರ ಉದ್ಯಮಿಯಾದರು.

ಮರಳುನಾಡಿನ ಗಾಯನಲೋಕದಲ್ಲಿ ಹೊರಹೊಮ್ಮಿದ ನಾದಮಾಧುರ್ಯ

20 ದೀರ್ಘ ವರ್ಷಗಳ ನಂತರ ಸ್ವದೇಶದಗಾಯನ ಸೇವೆ 2006 ರಿಂದ ವಿದೇಶದ ಮಣ್ಣಿನಲ್ಲಿ ಪ್ರತಿಧ್ವನಿಸ ತೊಡಗಿತು2008 ರಲ್ಲಿದುಬಾಯಿಯಲ್ಲಿಕೊಂಕಣಿ ಸಂಘಟನೆಆಯೋಜಿಸಿದ ಸಂಗೀತ ಸಂಜೆಯಲ್ಲಿಜೊಸೆಫ್ ಮಥಿಯಸ್‍ರವರಅಪೂರ್ವ ಕಂಠಸಿರಿಗೆ ಕೊಲ್ಲಿನಾಡಿನ ಅಭಿಮಾನಿಗಳು ಮೆಚ್ಚಿಕೊಂಡರು. ಹಲವಾರುರಸಮಂಜರಿ ಕಾರ್ಯಕ್ರಮಗಳಲ್ಲಿ ಜೋಸೆಫರಗಾಯನದಚಿತ್ರ ಮೆಚ್ಚುಗೆಯ ಲೇಖನದೊಂದಿಗೆ ಹಲವಾರು ಮಾಧ್ಯಮಗಳಲ್ಲಿ ಪ್ರಕಟವಾಗಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು.

ಪ್ರಸಿದ್ದ ಇನ್ನೊರ್ವ ಕೊಂಕಣಿ ಗಾಯಕ ಹಾಗೂ ಗೀತೆ ರಚನಕಾರ ಲ್ಯಾನ್ಸಿ ನೊರೋನ್ಹಾರವರ27 ವರ್ಷದ ಕನಸು ಮೇ 2011ರಲ್ಲಿದುಬಾಯಿಯಲ್ಲಿ ನನಸಾಯಿತು.ಲ್ಯಾನಿ ನೈಟ್‍ದುಬಾಯಿಯಲ್ಲಿ ಏಳು ಎಂಟು ಬಾರಿ ದುಬಾಯಿ ಮತ್ತು ಮಂಗಳೂರಿನಲ್ಲಿ ಜಯಭೇರಿ ಬಾರಿಸಿದೆ. ಲ್ಯಾನ್ಸಿ ನೊರೋನ್ಹಾರವರಿಗೆ ಕಾರ್ಯಕ್ರಮ ಆಯೋಜಿಸುವ ಅವಕಾಶ ಕಲ್ಪಿಸಿ, ಬೆಂಬಲ, ಪ್ರೋತ್ಸಾಹ ನೀಡಿದ ತೃಪಿ ಜೋಸೆಫ್‍ರವರ ಒಂದು ಕಿರುನಗುವಿನಲ್ಲಿ ಕಾಣಬಹುದಾಗಿದೆ.

ಜೋಸೆಫ್ ಮಥಿಯಸ್‍ರವರು ಭಾಗವಹಿಸಿರುವ ಸಂಗೀತ ಸಂಜೆಗಳಲ್ಲಿ ಪ್ರಮುಖವಾದುದು ಲ್ಯಾನ್ಸಿ ನೈಟ್‍ದುಬಾಯಿ – 2006.ಡಾನ್ ಬಾಸ್ಕೊ ಹಾಲ್ ಮಂಗಳೂರು -2011, ಕಿರೆಮ್‍ಚರ್ಚ್ ಮೈದಾನ–2011, ಸೈಂಟ್‍ಆಂಥೊನಿ ಅಶ್ರಮ ಮಂಗಳೂರು – 2011, ಜೆ.ಎಸ್.ಎಸ್. ಸ್ಕೂಲ್‍ಅಲ್ ಸಫಾದುಬಾಯಿ2013,ಎಮಿರೇಟ್ಸ್ ಇಂಗ್ಲೀಷ್ ಸ್ಪೀಕಿಂಗ್ ಸ್ಕೂಲ್‍ದುಬಾಯಿ – 2014 ಹಾಗೂ ವಿಲ್ಸನ್ ಒಲಿವೆರಾ ನೈಟ್‍ದುಬಾಯಿ, ಮಂಗಳೂರು, ಕುಂದಾಪುರ, ಸ್ಟಾನ್ ನೈಟ್ – ಡಾನ್ ಬಾಸ್ಕೋ ಹಾಲ್ ಮಂಗಳೂರು 2010, ಸೈಂಟ್‍ಅಗ್ನೇಸ್ ಸ್ಪೆಶಲ್ ಸ್ಕೂಲ್ ಮೈದಾನ ಮಂಗಳೂರು- 2012, ಅಲ್ ನಾಸರ್ ಲೀಸರ್ ಲ್ಯಾಂಡ್2012, ಲಂಡನ್ ಎ ಹಿಸ್ಟಾರಿಕಲ್ ಮೈಡನ್ ನೈಟ್ – 2013, ಕೊಂಕಣಿ ಸುಪ್ರಸಿದ್ದ ಗಾಯಕ ಹೆನ್ರಿಡಿಸೋಜಾರೊಂದಿಗೆದಾಯಿಜಿದುಬಾಯಿ10ನೇ ವಾರ್ಷಿಕೋತ್ಸವದಲ್ಲಿ – ಮಂಗ್ಳುರ್‍ಕೊಂಕಣ್ಸ್ ನಾಟಕ – ದುಬಾಯಿ2014 ಸುದೀರ್ಘ ವೈವಿದ್ಯಮಯರಸಮಂಜರಿಯಲ್ಲಿಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಜೋಸೆಫ್ ಮಥಿಯಸ್‍ರವರುತಮಗೆ ಅಕಕಾಶ ನೀಡಿರುವ ಸಂಘ ಸಂಸ್ಥೆಗಳಿಗೆ ಸದಾಚಿರಋಣಿಯಾಗಿದ್ದಾರೆ.ಅವುಗಳಲ್ಲಿ ಪ್ರಮುಖವಾದುದು ಮಿಲಾಗ್ರಿಯನ್ಸ್, ಫೆರಾರಿಯೆಟ್ಸ್- ಉಡುಪಿ, ಉದೆಂಟಿಚಿ ನೆಕೆಟ್ರ, ಉದ್ಯಾವರೈಟ್ಸ್, ಲಿಟ್ಟ್ಲ್ ಫ್ಲವರ್-ಮುಕಾಮರ್, ಎಮಿರೇಟ್ಸ್ ಪಾಂಗಲೇಟ್ಸ್, ಉಸ್ವಾಸ್ ಶಿರ್ವಾ, ಬೆಳ್ಮನ್ಚಿ ಬೆಕ್ತಾತಿ, ವಾಮಂಜೂರಿಯನ್ಸ್, ಪೆರ್ನಾಲಿಟ್ಸ್, ಬೈಂದೂರಿಯನ್ಸ್ ಮತ್ತು ಸೈಂಟ್ ಮೇರಿಸ್‍ಚರ್ಚ್, ಜೆಬೆಲ್ ಆಲಿ ಚರ್ಚ್‍ಕ್ಯಾಯಿರ್.

ಬಿಡುಗಡೆಯಾಗಿರುವ ಸಂಗೀತಅಲ್ಬಂ ನಲ್ಲಿಗಾಯನ

ಹಲವಾರುಜನಪ್ರಿಯಧ್ವನಿ ಸುರುಳಿಯಲ್ಲಿ ತಮ್ಮ ಕಂಠಸಿರಿಯನ್ನು ಮೂಡಿಸಿರುವ “ಮೊಗ ಸಗೊರ್”, ಮೊಗಾಚಿ ಲಾಹ್ರ, ಪನಿ ಪನಿ ಬರ್ಸ, ಕಲಿಜಂತಿ ಬೋಗ್ನಾ, ಆಶಾವಾದಿ, ಹಲೋ ದೇವಾ, ಮೊಗಾ ನಾದ ಮೆಚ್ಚುಗೆ ಪಡೆದಿದೆ.

ಜನಪ್ರಿಯಗಾಯಕ, ಗಾಯಕಿಯರಜೊತೆಯಲ್ಲಿತಮ್ಮ ಕಂಠಸಿರಿಯನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಪ್ರಮುಖರಾದವರು ಲ್ಯಾನ್ಸಿ ನೊರೋನ್ಹಾ, ಅನಿತಾಡಿಸೋಜಾ, ಪ್ರೇಮ್‍ಕುಮಾರ್, ಡಾ.ಪ್ರಶಾಂತ್‍ರಾಜ್, ರೋನಿ ಕ್ರಾಸ್ತಾ, ಪ್ರೀಮಾರಾಡ್ರಿಗಸ್, ವಿಲ್ಸನ್ ಒಲಿವೆರಾ, ಸ್ಟಾನಿ ಮೆಂಡೊನ್ಸಾ, ಕ್ಲಾಡ್ ಡಿ’ಸೋಜಾ, ವಿನ್ಸೆಂಟ್ ಫೆರ್ನಾಂಡಿಸ್‍ಇವರೆಲ್ಲರೂಜೋಸೆಪ್ ಮಥಿಯಸ್‍ರವರ ಮೆಚ್ಚಿನಗಾಯಕಗಾಯಕಿಯರು.

ತಮ್ಮ ಸಂಸ್ಥೆ ಮೆರಿಟ್ ಫ್ರೈಟ್‍ಸಿಸ್ಟಂಸ್‍ಹಲವಾರು ಉದ್ಯೋಗಿಗಳು ಹಾಗೂ ಹಲವಾರು ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಜನ್ಮಭೂಮಿಯಲ್ಲಿ ಹಲವಾರು ಕಷ್ಟದಲ್ಲಿ, ನೋವಿನಲ್ಲಿರುವರಿಗೆ ಸದಾ ನೆರವಿನ ಹಸ್ತ ನೀಡುತ್ತಾ ಎಲ್ಲಿಯೂ ಹೇಳಿಕೊಳ್ಳದ ಮಹಾದಾನಿಯಾಗಿದ್ದಾರೆ. ಗಲ್ಫ್ ನಾಡಿನಲ್ಲಿಯೂ ಸಹ   ಸಂಕಷ್ಟದಲ್ಲಿರುವರ ನೆರವಿಗೆ ಸದಾ ಸ್ಪಂದಿಸುತಿರು ವಜೋಸೆಪ್ ಮಥಿಯಸ್‍ರವರು ಯು.ಎ.ಇ.ಯಲ್ಲಿ ನಡೆಯುವ ಎಲ್ಲ ಕರ್ನಾಟಕ ಪರ ಸಾಂಸ್ಕೃತಿಕ,ಕ್ರೀಡೆ ಅಥವಾ ಇನ್ನಿತರ ಯಾವುದೇ ಸಮ್ಮೇಳನ ಸಮಾರಂಭಕ್ಕೆ ಸದಾ ಬೆಂಬಲ, ಪ್ರೋತ್ಸಾಹ, ಪ್ರಾಯೋಜಕತ್ವ ನೀಡುತ್ತಾ ಬಂದಿರುವ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ.

ಸುಮಧುರ ಕಂಠಸಿರಿಯ ಗಾಯಕರಾಗಿ, ಚಲನ ಚಿತ್ರ ನಟರಾಗಿ, ಸಮಾಜ ಸೇವಕರಾಗಿ, ಉಧ್ಯಮಿಯಾಗಿರು ವಜೋಸೆಪ್ ಮಥಿಯಸ್ ಯಶಸ್ಸಿನ ಹಿಂದಿರುವ ಶಕ್ತಿ ಅವರ ಬಾಳಾಸಂಗಾತಿ ಫ್ಲೆವಿಯಾ ಹಾಗೂ ಮುದ್ದಾದ ಮಕ್ಕಳು ಟಿಶಾ, ಟಿಯನ್ನ ಸದಾಚೈತನ್ಯದ ಚಿಲುಮೆಗಳು.

ಅಧ್ವಿತೀಯಾ ಸಾಧನೆ ಮಾಡಿರುವ ಜೋಸೆಪ್ ಮಥಿಯಸ್‍ರವರಿಗೆ ಶಾರ್ಜಾಕರ್ನಾಟಕ ಸಂಘ ಪ್ರದಾನಿಸಲಿರುವ ಪ್ರತಿಷ್ಠಿತ “ಮಯೂರ ಪ್ರಶಸ್ತಿ” ಸಮಾರಂಭಕ್ಕೆ ಹಾಗೂ ಸನ್ಮಾನಿತರಿಗೆ ಸಮಸ್ಥ ಕರ್ನಾಟಕ, ಭಾರತೀಯರ ಪರವಾಗಿ ಹಾರ್ದಿಕ ಅಭಿನಂದನೆಗಳು.

ಬಿ. ಕೆ.ಗಣೇಶ್‍ರೈ – ಯು.ಎ.ಇ.


Spread the love

Exit mobile version