ಶಾರ್ಜಾ: 12ನೇ ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನ, 60ನೇ ಕರ್ನಾಟಕ ರಾಜ್ಯೋತ್ಸವ, 13ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ ಅಲ್ ಬೂಮ್ ಟೂರಿಸ್ಟ್ ವಿಲೇಜ್ ಆವರಣದಲಿ ನಡೆಯಿತು.
ಸಮ್ಮೇಳನಾಧ್ಯಕ್ಷ ಪ್ರೊ ಎಸ್.ಜಿ. ಸಿದ್ಧರಾಮಯ್ಯ ಸಮ್ಮೇಳನವನ್ನು ಹಿಂಗಾರ ಅರಳಿಸಿ ಉದ್ಘಾಟಿಸಿದರು. ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ ಮುಖ್ಯ ಅತಿಥಿಗಳಾದ ಮಂಗಳೂರು ಉತ್ತರದ ಶಾಸಕ ಮೊಯ್ದಿನ್ ಬಾವ, , ಹರೀಶ್ ಶೇರಿಗಾರ್, ಹಾಸ್ಯ ನಟ ಸಾಧುಕೋಕಿಲಾ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮಲೆಯ ಶಾಂತಮುನಿ ಸ್ವಾಮಿಜಿ, ಪಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್‍ನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮ್ಮೇಳನಾ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರು ಸತೀಶ್ ವೆಂಕಟರಮಣ ಸ್ವಾಗತಿಸಿದರು.
ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದ ಪ್ರೆÇ. ಎಸ್.ಜಿ., ಸಿದ್ಧರಾಮಯ್ಯನವರು ಇತಿಹಾಸ ಪುಟಗಳನ್ನು ತೆರೆದು ನೋಡಿದಾಗ ಅತಿಶಯ ಮತ್ತು ಅಚ್ಚರಿಗಳು ಕಂಡುಬರುತ್ತವೆ. ಕೆಳಸ್ತರದ ಸಮುದಾಯದ ಪ್ರತಿಭೆಯನ್ನು ಮೇಲ್‍ಸ್ತರದವರು ಹತ್ತಿಕ್ಕುತ್ತಿದ್ದರೆ, ಅದೇ ಮೇಲ್‍ಸ್ತರದ ಕೆಲವು ಮಹಾನಿಯರುಗಳು ದಮನಿ³Ð ಪ್ರತಿಭೆಗೆ ಬೆಂಗಾವಲಾಗಿ ನಿಲ್ಲುತ್ತಾರೆ. ಇದು ಎಲ್ಲಾ ಕಾಲಘಟ್ಟದಲ್ಲೂ ಮತ್ತು ಪ್ರಪಂಚದ ಎಲ್ಲಾ ಭಾಗಗಳಲ್ಲೂ ನಡೆದಿರುವ ಬಗ್ಗೆ ನಾವು ನಿದರ್ಶನಗಳನ್ನು ಕಾಣುತ್ತೇವೆ. ಅಂತ ಹೃದಯ ವೈಶಾಲ್ಯದಿಂದಾಗಿ ನಾವು ವಿದೇಶಿ ನೆಲದಲ್ಲಿ ಇಷ್ಟೊಂದು ಅದ್ಭುತವಾದ ಕಾರ್ಯಕ್ರಮವನ್ನು ನೋಡಲು ಸಾಧ್ಯವಾಯಿತು ಎನ್ನುವುದು ನನ್ನ ಭಾವನೆ. ಸಾಧನ ಸಾಮಥ್ರ್ಯ ಹೊಂದಿದವರಿಗೆ ಯಾವುದೇ ಗಡಿ ರೇಖೆಗಳ ನಿರ್ಭಂದ ಇರುವುದಿಲ್ಲ. ಒಂದು ವೇಳೆ ಇದ್ದರೂ ಆ ಗಡಿ ರೇಖೆಯನ್ನು ವಿಸ್ತರಿಸುವ ಕೌಶಲ್ಯ ಆ ಪ್ರತಿಭೆಗಿರುತ್ತದೆ ಎಂದರು.
ಮುಖ್ಯ ಅತಿಥಿಗಳಿಂದ ಮೊಯಿದ್ದೀನ್ ಬಾವ ಅವರು ನಮ್ಮ ಕರ್ನಾಟಕ ಸರಕಾರದ ಸಾಂಸ್ಕøತಿಕ ನೀತಿ ಕಲಾವಿದರನ್ನು ಪ್ರೆÇೀತ್ಸಾಹಿತ್ತಾ ಬರುತ್ತಿದೆ. ಈ ಅಪೂರ್ವ ಕಾರ್ಯಕ್ರಮದ ಮಾಹಿತಿಯನ್ನು ನಾನು ಖುದ್ದಾಗಿ ಮುಖ್ಯ ಮಂತ್ರಿಗಳಿಗೆ ನೀಡುತ್ತೇನೆ.” ಎಂದರು
ಪ್ರಾಸ್ತಾವಿಕ ಭಾಷಣ ಮಾಡಿದ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ವಿವಿಧ ದೇಶಗಳ ಕನ್ನಡ ಸಂಘಗಳ ಸಂಪೂರ್ಣ ಸಹಕಾರದಿಂದ ನಾವು ನಿರಂತರವಾಗಿ ಹನ್ನೆರಡು ವರ್ಷಗಳ ಕಾಲ ಹನ್ನೆರಡು ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನಗಳನ್ನು ಆಯೋಜಿಸಲು ಸಾಧ್ಯವಾಯಿತು. ಅದಕ್ಕಾಗಿ ಪ್ರಪಂಚದಾದ್ಯಂತ ಇರುವ ಅನಿವಾಸಿ ಕನ್ನಡಿಗರಿಗೆ ಈ ವೇದಿಕೆಯ ಮೂಲಕ ಧನ್ಯವಾದ ತಿಳಿಸಲು ಹೆಮ್ಮೆ ಎನಿಸುತ್ತಿದೆ. ನಮ್ಮ ಸಂಘಟನೆಯನ್ನು ವಿಶ್ವ ಕನ್ನಡಿಗರ ವೇದಿಕೆಯನ್ನಾಗಿ ರೂಪುಗೊಳಿಸಲು ಸಾಕಷ್ಟು ಶ್ರಮಿಸುತ್ತಿದ್ದೇನೆ. ಇದಕ್ಕೆ ಪ್ರತಿಯೊಬ್ಬ ಕನ್ನಡಿಗನ ಪ್ರೆÇೀತ್ಸಾಹ ಅತ್ಯಗತ್ಯ” ಎಂದರು.
ಸಮ್ಮೇಳನಾಧ್ಯಕ್ಷ ಪ್ರೆÇ ಎಸ್.ಜಿ. ಸಿದ್ಧರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಿದರು. ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ ಮುಖ್ಯ ಅತಿಥಿಗಳಾದ ಮಂಗಳೂರು ಉತ್ತರದ ಶಾಸಕ ಮೊಯ್ದಿನ್ ಬಾವ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರು ಸತೀಶ್ ವೆಂಕಟರಮಣ, ಹರೀಶ್ ಶೇರಿಗಾರ್, ಹಾಸ್ಯ ನಟ ಸಾಧುಕೋಕಿಲಾ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮಲೆಯ ಶಾಂತಮುನಿ ಸ್ವಾಮಿಜಿ, ಪಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್‍ನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮ್ಮೇಳನಾ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಸ್ವಾಗತಿಸಿದರು.
ಹನಿಗವನ ಗೋಷ್ಠಿ : ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್ ರಾವ್‍ರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಇರ್ಷಾದ್ ಮೂಡುಬಿದಿರೆ, ಆರತಿ ಘಾಟಿಕಾರ್, ಬಿಂಡಿಗನವಿಲೆ ಭಗವಾನ್ ಬೆಂಗಳೂರು, ಪ್ರಿಯಾ ಹರೀಶ್, ಯಾಕೂಬ್ ಖಾದರ್ ಹನಿಗವನ ವಾಚಿಸಿದರು. ಟಿವಿ 9 ವಾಹಿನಿ ತಂಡದ ಕಲಾವಿದರಿಂದ ಹಳ್ಳಿಕಟ್ಟೆ ಹಾಸ್ತ ಪ್ರಹಸನದೊಂದಿಗೆ ಮೊದಲ ದಿನದ ಸಮಾರೋಪ ಸಮಾರಂಭ ನಡೆಯಿತು.
ಅಲ್ ಬೂಮ್ ಟೂರಿಸ್ಟ್ ವಿಲೇಜ್ ಆವರಣದಲ್ಲಿ ಶಾರ್ಜಾದಲ್ಲಿ 12ನೇ ವಿಶ್ವಕನ್ನಡ ಸಂಸ್ಕøತಿ ಸಮ್ಮೇಳನ, 60ನೇ ಕರ್ನಾಟಕ ರಾಜ್ಯೋತ್ಸವ, 13ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭದ 2ನೇ ದಿನ ಶುಕ್ರವಾರದ ಕಾರ್ಯಕ್ರಮದ ಉದ್ಘಾಟನೆ ಕನ್ನಡ ಧ್ವಜಾರೋಹಣದ ಮೂಲಕ ಪ್ರೆÇ. ಎಸ್.ಜಿ. ಸಿದ್ಧರಾಮಯ್ಯನವರು ನೆರವೇರಿಸಿದರು.
ಅನಿವಾಸಿ ಕನ್ನಡಿಗರ ನಾಡ ಹಬ್ಬ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ
ಖ್ಯಾತ ಗಾಯಕ, ರಚನೆಗಾರ, ನಿರೂಪಕಿ ಗೋ ನಾ. ಸ್ವಾಮಿಯವರ ಸುಮಧುರ ಗಾಯನದೊಂದಿಗೆ ನಿರರ್ಗಳ ನಿರೂಪಣೆಯೊಂದಿಗೆ ಕನ್ನಡ ಹಬ್ಬಕ್ಕೆ ಚಾಲನೆ ದೊರೆಯಿತು. ರೋಹಿಣಿ ಅನಂತ್ ನಿರ್ದೇಶನದಲ್ಲಿ ಪುಟಾಣಿಗಳಿಂದ ಸ್ವಾಗತ ನೃತ್ಯ ನಡೆಯಿತು. ಮತ್ತು ಮಕ್ಕಳಿಗೆ ಕೆ.ಪಿ. ಮಂಜುನಾಥ್ ಸಾಗರ್ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕರ್ನಾಟಕ ಮಹಿಳಾ ಕಲಾವಿದರಿಂದ ಕೋಲಾಟ ನೃತ್ಯ ನಡೆಯಿತು. ಪುಷ್ಪ ಆರಾಧ್ಯ ಮತ್ತು ಗೋ. ನಾ, ಸ್ವಾಮಿಯ ನಾಡಗೀತೆ, ದೇಶಭಕ್ತಿಗೀತೆ ಮತ್ತು ಚಲನಚಿತ್ರ ಗೀತೆಗಳು ಸಭಿಕರನ್ನು ರಂಜಿಸಿತು.
ಸಮ್ಮೇಳನ ಕವಿಗೋಷ್ಠಿ : ಪ್ರೆÇ. ಎಂ.ಬಿ. ಕುದರಿ ಅಧ್ಯಕ್ಷತೆಯಲ್ಲಿ ನಡೆದ ಕವಿ ಗೋಷ್ಠಿಯಲ್ಲಿ ಪ್ರಭಾ ಸುವರ್ಣ ಮುಂಬೈ, ಪ್ರಕಾಶ್ ರಾವ್ ಪಯ್ಯಾರ್ ದುಬೈ, ಗೋಪಿನಾಥ್ ರಾವ್ ಯು.ಎ.ಇ. ಈರಣ್ಣ ಮಾಲಿಮನಿ ದುಬೈ, ಮನೋಹರ್ ಮೇಲ್ಮನೆ ಶಿರಸಿ, ಮತ್ತು ಎಂ.ಇ. ಮಾಳೂರು ಭಾಗವಹಿಸಿ ಕವನ ವಾಚಿಸಿದರು. ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ವೆಂಕಟರಮಣ ಕವಿಗಳನ್ನು ಸನ್ಮಾನಿಸಿ ಗೌರವಿಸಿದರು.
ಮಾಧ್ಯಮ ಗೋಷ್ಠಿ : ಮಾಧ್ಯಮ ಮತ್ತು ಉದ್ಯೋಗ
ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಯು.ಎ.ಇ.ಯಲ್ಲಿರುವ ಉದ್ಯೋಗವಕಾಶಗಳ ಬಗ್ಗೆ ನಮ್ಮ ಮಾಧ್ಯಮಗಳು ಬೆಳಕು ಚೆಲ್ಲುವ ಮೂಲಕ ಅತ್ಯಧಿಕ ಕನ್ನಡಿಗರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು. ಕೇರಳಿಗರ ಒಗ್ಗಟ್ಟು ಮತ್ತು ಕಾಳಜಿಯಂತೆ ನಾವೆಲ್ಲ ಕನ್ನಡಿಗರು ನಮ್ಮ ಬಳಿ ಉದ್ಯೋಗ ಅರಸಿ ಬರುವ ಯುವಕರಿಗೆ ಅವಕಾಶ ನೀಡಲು ಶ್ರಮಿಸಬೇಕೆಂದು ಉದ್ಯೋಗಪತಿಗಳಿಗೆ ಕರೆ ನೀಡಿದರು. ಕೆ.ಪಿ. ಮಂಜುನಾಥ್ ಸಾಗರ್ ಪಿ.ವಿ. ನಾಗರಾಜ್, ವೀರೇಂದ್ರ ಬಾಬುರಾಜ್ ಮತ್ತು ಅನಂತ್ ಪ್ರಭು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ಸಿದ್ಧರಾಮಯ್ಯನವರು ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ದುಬೈ ಉಧ್ಯಮಿ, ಕನ್ನಡಿಗ ಹವ್ಯಾಸಿ ಗಾಯಕರಾದ ಹರೀಶ್ ಶೇರಿಗಾರ್ ಮತ್ತು ಅಕ್ಷತಾ ರಾವ್‍ರವರಿಂದ ಹಲವು ಕನ್ನಡ ಹಳೆ ಚಿತ್ರಗೀತೆಗಳನ್ನು ಹಾಡಿ ಸಭಿಕರನ್ನು ರೋಮಾಂಚನಗೊಳಿಸಿದರು. ಮಂಗಳ ಮಹಿಮ ನೃತ್ಯ ಸಂಘದ ತಂಡದ ಮಹಿಳೆಯರಿಂದ ಜನಪದ ನೃತ್ಯ ಮತ್ತು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಖ್ಯಾತಿಯ ಬಾಲಕಿ ಪ್ರೀಹಾಲಿ ಹರೀಶರಿಂದ ಮನಸೆಳೆಯುವ ಕೊರವಂಜಿ ನೃತ್ಯ ಪ್ರದರ್ಶನ ನಡೆಯಿತು.
ಮಯೂರ ಪ್ರಶಸ್ತಿ ಪುರಸ್ಕಾರ : ಕಲಶವನ್ನೊತ್ತ ಕರ್ನಾಟಕ ಸಂಘ ಶಾರ್ಜಾದ ಮಹಿಳಾ ಸದಸ್ಯರು. ಕನ್ನಡ ಧ್ವಜವನ್ನೊತ್ತ ಪುಟಾಣಿಗಳೊಂದಿಗೆ ಸಾಂಸ್ಕøತಿಕ ವಾದ್ಯ, ಚೆಂಡೆ ಬಡಿತದೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣವನ್ನು ಪ್ರವೇಶಿಸಿದ ಪ್ರವೀಣ್ ಕುಮಾರ್ ಶೆಟ್ಟಿಯನ್ನು ಸಂಘಟಕರು ಮತ್ತು ಗಣ್ಯ ಅತಿಥಿಗಳು ಬರಮಾಡಿಕೊಂಡು ಕನ್ನಡಾಂಬೆಯ ರಥ ಪ್ರದಕ್ಷಿಣೆಯೊಂದಿಗೆ ವೇದಿಕೆಯನ್ನು ಪ್ರವೇಶಿಸಿದರು.
ಪ್ರೆÇ.ಜಿ.ಎಸ್. ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಆರಂಭವಾದ ಸಭಾ ಕಾರ್ಯಕ್ರಮವನ್ನುಪದ್ಮಶ್ರೀ ಬಿ.ಆರ್.ಶೆಟ್ಟಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರದ ಶಾಸಕರಾದ ಮೊಯ್ದಿನ್ ಬಾವ, ಸತೀಶ್ ವೆಂಕಟರಮನ್, ಸರ್ವೋತ್ತಮ ಶೆಟ್ಟಿ, ಹಾಸ್ಯ ನಟ ಸಾಧು ಕೋಕಿಲ, ಜಫಾರುಲ್ಲಖಾನ್, ಹರೀಶ್ ಶೇರಿಗಾರ್, ಕೆ.ಪಿ. ಮಂಜುನಾಥ್ ಸಾಗರ್ , ಮಲೆಯ ಶಾಂತಮುನಿ ಸ್ವಾಮಿಜಿ, ಮಾರ್ಕ್ ಡೆನ್ನಿಸ್ ಉದ್ಘಾಟಿಸಿದರು.
ಪ್ರವೀಣ್ ಶೆಟ್ಟಿ, ದಂಪತಿಗಳಿಗೆ ಪದ್ಮಶ್ರೀ ಡಾ.ಬಿ.ಆರ್. ಶೆಟ್ಟಿ ಶಾಲು ಹೊದಿಸಿದರು. ಮೊಯ್ದಿನ್ ಬಾವ ಕಿರೀಟ ತೊಡಿಸಿದರು.
ಸತೀಶ್ ವೆಂಕಟರಮನ್ ಸನ್ಮಾನ ಪತ್ರವನ್ನು ನೀಡಿ ಆಧರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಸದಸ್ಯ ಬಸಂತ್ ಬೇಕಲ್ ದಂಪತಿಯನ್ನು ಸನ್ಮಾನಿಸಿದರು.
ವಿಶ್ವಮಾನ್ಯ ಪ್ರಶಸ್ತಿ ಪುರಸ್ಕಾರ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕನ್ನಡಿಗರಾದ ಶಿಕ್ಷಣ ತಜ್ಞ ಎನ್.ಎ. ಮಗದುಮ್ ಚಿಕ್ಕೋಡಿ, ಸಮಾಜ ಸೇವಕ ಮೆಟ್ರೊ ಮುಹಮ್ಮದ್, ಬೆಂಗಳೂರಿನ ಶಿಕ್ಷಣ ತಜ್ಞ ಎ.ಎಫ್. ಕುದ್ರೋಳಿ, ಕನ್ನಡ ಸೇವೆಗಾಗಿ ಗಣೇಶ್ ರೈ ಶಾರ್ಜಾ, ಮಾರುತಿ ಶೆಗೆಣ್ಸೆ, ರಾಜೇಶ್ ವರ್ಣೆಕರ್, ಎಂ. ನವೀನ್ ಪ್ರಸಾದ್, ವೈದ್ಯಕೀಯ ಸೇವೆಗಾಗಿ ಡಿ.ಕೆ. ರಮೇಶ್ ಇವರಿಗೆ ವಿಶ್ವಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ : ಕರ್ನಾಟಕ ಸಂಘ ಶಾರ್ಜದ ವತಿಯಿಂದ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದ ಹರಿಕಾಶಾರ್ಜಾ ಕನ್ನಡಿಗರ ಮನಸೂರೆಗೊಂಡ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನರ ಡಾ. ಐಕಳಬಾವ ದೇವಿಪ್ರಸಾದ ಶೆಟ್ಟಿ, ದಾವುದ್ ಅಬೂಬಕರ್, ಅಣ್ಣೆ ಗೌಡ, ಡಾ.ವಿ. ನಾಗರಾಜ್ ನಾಯಕ್, ಭರತನಾಟ್ಯ ಕಲಾವಿದೆ ಜಯಲಕ್ಷ್ಮೀ ಇವರಿಗೆ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ಹಿರಿಮೆ ಪ್ರಶಸ್ತಿ : ಕನ್ನಡಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸಿ ಮಾರ್ಕ್ ಡೆನಿಸ್ ಡಿಸೋಜಾ, ಪ್ರಭಾಕರ ಅಂಬಲತೆರೆ, ನೋವೆಲ್ ಡಿ ಅಲ್ಮೇಡಾ, ಸತೀಶ್ ಪೂಜಾರಿ, ಶಾಂತಾರಾಂ ಆಚಾರರಿಗೆ ಕರ್ನಾಟಕ ಹಿರಿಮೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ.ಬಿ.ಆರ್.ಶೆಟ್ಟಿ ಸಭಿಕರನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಜೀವನದ ಕಷ್ಟ ಕಾಲದಲ್ಲಿ ಪಟ್ಟ ನಿರಂತರ ಶ್ರಮ ಮತ್ತು ತನ್ನ ಉದ್ಯಮ ಸಾಮ್ರಾಜ್ಯವನ್ನು ಪ್ರಪಂಚದೆಲ್ಲೆಡೆ ಪಸರಿಸಿದ ಬಗೆಯನ್ನು ವಿವರಿಸಿದರು. ಜಫಾರುಲ್ಲ ಖಾನ್ ಮಾತನಾಡಿದರು. ಶಾಂತಮುನಿ ಸ್ವಾಮೀಜಿ ಶಾರ್ಜಾದಲ್ಲಿ ಒಂದು ಕನ್ನಡ ಭವನದ ಶೀಘ್ರವೇ ನಿರ್ಮಾಣವಾಗಲಿ ಎಂದು ಹಾರೈಸಿದರು.
ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ವೆಂಕಟರಮಣ ಮತ್ತು ಗೊ.ನಾ.ಸ್ವಾಮಿ ವಂದಿಸಿದರು. ವಿಶ್ವಮಾನ್ಯ ಪ್ರಶ್ತಿ ವಿಜೇತ ಬಿ.ಕೆ. ಗಣೇಶ್ ರೈ ತಮ್ಮ ವಿಶಿಷ್ಟ ಶೈಲಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದರು.