Home Mangalorean News Kannada News ಶಾಲಾ ಬಸ್ಸಿನಿಂದ ಹೊರಕ್ಕೆ ಬಿದ್ದು ವಿದ್ಯಾರ್ಥಿ ಸಾವು

ಶಾಲಾ ಬಸ್ಸಿನಿಂದ ಹೊರಕ್ಕೆ ಬಿದ್ದು ವಿದ್ಯಾರ್ಥಿ ಸಾವು

Spread the love

ಶಾಲಾ ಬಸ್ಸಿನಿಂದ ಹೊರಕ್ಕೆ ಬಿದ್ದು ವಿದ್ಯಾರ್ಥಿ ಸಾವು

ಪುತ್ತೂರು : ಶಾಲಾ ಬಸ್ಸಿನಿಂದ ಹೊರಕ್ಕೆ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಪುತ್ತೂರಿನಲ್ಲಿ ಶನಿವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಪುತ್ತೂರು ಬಡಗನ್ನೂರು ನಿಆಸಿ ಜಗನ್ನಾಥ ಆಳ್ವರ ಗಗನ್ ಆಳ್ವಾ ಎಂದು ಗುರುತಿಸಲಾಗಿದೆ.

ನವೆಂಬರ್ 10 ರಂದು ಗಗನ್ ಆಳ್ವ ಈಶ್ವರಮಂಗಲದ ಗಜಾನನ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸದ್ರಿ ಶಾಲೆಯ ಬಸ್ಸಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದನು. ಅದರಂತೆಯೇ ಈದಿನ ಸದ್ರಿ ಶಾಲೆಯ ಬಸ್ಸು ನಂ.KA15 M 2802 ರಲ್ಲಿ ಮನೆಯ ಕಡೆಗೆ ಬರುತ್ತಾ ಮಧ್ಯಾಹ್ನ 1.20 ಗಂಟೆಗೆ ಪಡುವನ್ನೂರು ಗ್ರಾಮದ ಪುಂಡಿಕಾಯಿ ಎಂಬಲ್ಲಿಗೆ ತಲುಪಿದಾಗ ಸದ್ರಿ ಬಸ್ಸಿನ ಚಾಲಕ ಶ್ರೀಧರ ಆಚಾರ್ಯ ಎಂಬವರು ನಿರ್ಲಕ್ಷತನದಿಂದ ಬ್ರೇಕ್ ಹಾಕಿದಾಗ ಗಗನ್ ಆಳ್ವ ಬಸ್ಸಿನಿಂದ ಹೊರಕ್ಕೆ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದು, ಸದ್ರಿಯವನು ಶಾಲಾ ಬಸ್ಸಿನಲ್ಲಿ ಹೋಗುತ್ತಿದ್ದ ಸಮಯ ಬಸ್ಸಿನ ಡೋರ್ ಸರಿ ಇಲ್ಲ. ಅದಕ್ಕೆ ಚಿಲಕ ಇಲ್ಲ, ಬೈರಾಸಿನಲ್ಲಿ ಕಟ್ಟುತ್ತಾರೆ ಎಂದು ಹೇಳುತ್ತಿದ್ದು, ಇದೇ ಕಾರಣದಿಂದ ಈ ಅಪಘಾತ ಸಂಭವಿಸಿದ್ದು, ಈ ಅಪಘಾತಕ್ಕೆ ಶಾಲಾ ಆಡಳಿತ ಮಂಡಳಿಯವರು ಬಸ್ಸಿಗೆ ಸರಿಯಾದ ವ್ಯವಸ್ಥೆ ಮಾಡದೇ ನಿರ್ಲಕ್ಷತನ ವಹಿಸಿರುವುದರಿಂದ ಹಾಗೂ ಬಸ್ದು ಚಾಲಕನ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಠಾಣಾ ಅ.ಕ್ರ.167/18 u s 279 304(a) l P C ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.


Spread the love

Exit mobile version