ಮಂಗಳೂರು: ಶಾಸಕರಾದ ಜೆ. ಆರ್. ಲೋಬೊ ಮತ್ತು ನಗರ ಪಾಲಿಕೆಯ ಮಹಾಪೌರರದ ಜೆಸಿಂತಾ ಆಲ್ಫ್ರೇಡ್ರವರು ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಸುಮಾರು 29 ಲಕ್ಷ ರೂಪಾಯಿ ವೆಚ್ಚದಲ್ಲಿ ಆಭಿವೃದ್ಧಿಗೊಂಡ 26ನೇ ದೇರೆಬೈಲ್ ವಾರ್ಡಿನ ಉರ್ವಾ ಕಲ್ಲಾವು ಒಳರಸ್ತೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ರಾಧಕೃಷ್ಣ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬಿ.ಜಿ. ಸುವರ್ಣ, ಸ್ಥಳಿಯರಾದ ಪುರುಷೂತ್ತಮ್, ಬಾಬು ಆಲಂಗಾರ್, ಪಿ.ಟಿ. ಹರೀಶ್ ಕುಮಾರ್, ಗಣೇಶ್ ಕುಮಾರ್, ರವಿ ಉರ್ವಾ, ಉಮೇಶ್ ಕೊಟ್ಯಾನ್, ಗೋವಾರ್ಧನ್, ಟಿ.ಕೆ. ಸುಧೀರ್ ಮುಂತಾದವರು ಉಪಸ್ಥಿತರಿದ್ದರು.