ಶಾಸಕ ಮೊಹಿದಿನ್ ಬಾವರವರ ಬ್ಯಾನರ್ ವಿರೂಪಗೊಳಿಸಿದ್ದರ ವಿರುದ್ದ ದೂರು ದಾಖಲು
ಮಂಗಳೂರು: ಮಂಗಳೂರು ಉತ್ತರ ಶಾಸಕ ಬಿ ಮೊಹಿದಿನ್ ಬಾವರವರ ಫ್ಲೆಕ್ಸ್ (ಬ್ಯಾನರ್)ವಿರೂಪಗೊಳಿಸಿ ಹರಿದು ಹಾಕಿರುವ ಕಿಡಿಗೇಡಿಗಳ ವಿರುದ್ದ ಪೋಲಿಸರಿಗೆ ದೂರು ನೀಡಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಕೆ.ಐ.ಎ.ಡಿ.ಬಿ ) ಕಾಂಕ್ರೀಟ್ ರಸ್ತೆಗೆ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ಕಾಮಗಾರಿಗೆ ಶಾಸಕರ ವಿಶೇಷ ಮುತವರ್ಜಿಯಿಂದ ಪಡೆದ ಅನುದಾನದಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಸ್ಥಳೀಯ ನಾಗರಿಕರು ಹಾಗೂ ಶಾಸಕ ಮೊಹಿದಿನ್ ಬಾವರವರ ಅಭಿಮಾನಿಗಳು/ ಕೈಗಾರಿಕೋದ್ಯಮಿಗಳು ಶಾಸಕ ಬಿ ಮೊಹಿದಿನ್ ಬಾವರವರಿಗೆ ಅಭಿನಂದನೆ ಸಲ್ಲಿಸಿ ಹಾಕಲಾಗಿದ್ದ 4 ಫ್ಲೆಕ್ಸ್ ಬೋರ್ಡ್ ಗಳನ್ನು ಕಿಡಿಗೆಡಿಗಳು ಹರಿದು ಹಾಕಿದ್ಪಲ್ಲದೇ ಪದೆ ಪದೇ ಬ್ಯಾನರ್ ವಿರೂಪ ಗೊಳಿಸಿ ಹರಿದು ಹಾಕುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂದಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಶಾಸಕ ಮೊಹಿದಿನ್ ಬಾವರವರ ನಿರ್ದೇಶದಂತೆ ಶಾಸಕರ ಆಪ್ತ ಹಾರಿಸ್ ಬೈಕಂಪಾಡಿ ಯವರು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.