Home Mangalorean News Kannada News ಶಿಕ್ಷಕರ ವರ್ಗಾವಣೆ ಕೌನ್ಸಿಲ್‍ಗೆ ತಡೆ

ಶಿಕ್ಷಕರ ವರ್ಗಾವಣೆ ಕೌನ್ಸಿಲ್‍ಗೆ ತಡೆ

Spread the love

ಶಿಕ್ಷಕರ ವರ್ಗಾವಣೆ ಕೌನ್ಸಿಲ್‍ಗೆ ತಡೆ

ಬಂಟ್ವಾಳ : ರಾಜ್ಯ ಸರಕಾರವು ಹೆಚ್ಚುವರಿ ಶಿಕ್ಷಕರು ಎನ್ನುವ ನೆಪವೊಡ್ಡಿ ಸರ್ಕಾರಿ ಶಾಲಾ ಶಿಕ್ಷಕರನ್ನು ಕಡಿತ ಮಾಡಲು ಆದೇಶಿಸಿದ್ದು ಬಂಟ್ವಾಳ ತಾಲೂಕುನಲ್ಲಿ ಈ ಬಗ್ಗೆ ಶಿಕ್ಷಕರ ವರ್ಗಾವಣೆಗೆ ಇಂದು ಕೌನ್ಸೆಲಿಂಗ್ ನಡೆಯುವ ಸಂದರ್ಭ SFI ನೇತೃತ್ವದಲ್ಲಿ SDMC ಸಮಿತಿಯ ಮುಖಂಡರ ಬೆಂಬಲದೊಂದಿಗೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಡ್ಡಿಪಡಿಸಲಾಯಿತು.

sfi-councilling

ಹಾಗೂ ಕೌನ್ಸೆಲಿಂಗ್ ನಿಲ್ಲಿಸುವಂತೆ ಒತ್ತಾಯಿಸಿ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭ SFI ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಕಾರ್ಯದರ್ಶಿ ಚರಣ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ತುಳಸಿದಾಸ್, ಸಲೀಂ DYFI ಮುಖಂಡರಾದ ರಝಾಕ್ ಮೊಂಟೆಪದವು, ಅನಿಲ್ ಡಿಸೋಜ, ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, SDMC ಸಮಿತಿಯ ಸುಲೈಮಾನ್ ಅಮ್ಮೆಮಾರ್, ವಿಶಾಲಾಕ್ಷಿ ಕುಮೇಲು, ಬಶೀರ್, ಹನೀಫ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಪ್ರತಿಭಟನೆಗೆ ಕರೆ : ದಿನಾಂಕ 08-08-2016 ಸೋಮವಾರ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಮುಂದೆ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ ನಡೆಯಲಿದ್ದು ಈ ಪ್ರತಿಭಟನೆಗೆ ಬಂಟ್ವಾಳ ತಾಲೂಕಿನ ಎಲ್ಲಾ SDMC ಸಮಿತಿ ಮುಖಂಡರು, ಪೋಷಕರು, ಶಿಕ್ಷಣ ಪ್ರೇಮಿಗಳು ಭಾಗವಹಿಸುವಂತೆ SFI ಕರೆ ನೀಡಿದೆ.


Spread the love

Exit mobile version