Home Mangalorean News Kannada News ಶಿಥಿಲಗೊಂಡ ಕೆ.ಪಿ.ಟಿ ಕಟ್ಟಡ ದುರಸ್ತಿಗೆ ಆಗ್ರಹಿಸಿ ಬೀದಿಗಿಳಿದ ಎಬಿವಿಪಿ

ಶಿಥಿಲಗೊಂಡ ಕೆ.ಪಿ.ಟಿ ಕಟ್ಟಡ ದುರಸ್ತಿಗೆ ಆಗ್ರಹಿಸಿ ಬೀದಿಗಿಳಿದ ಎಬಿವಿಪಿ

Spread the love

ಶಿಥಿಲಗೊಂಡ ಕೆ.ಪಿ.ಟಿ ಕಟ್ಟಡ ದುರಸ್ತಿಗೆ ಆಗ್ರಹಿಸಿ ಬೀದಿಗಿಳಿದ ಎಬಿವಿಪಿ

ಮಂಗಳೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೆ.ಪಿ.ಟಿ ಘಟಕದ ವತಿಯಿಂದ ಕೆ.ಪಿ.ಟಿ ಡಿಪೆÇ್ಲೀಮಾ ಕಾಲೇಜಿನ ಸಮಸ್ಯೆಯನ್ನು ಸರಿಪಡಿಸುವ ಕುರಿತು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸರ್ವಕಾಲೇಜು ಎಬಿವಿಪಿ ಅಧ್ಯಕ್ಷ ವಚನ್ ಕುಮಾರ್ ಮಾತನಾಡಿ ಅನೇಕ ಬಾರಿ ಕೆ.ಪಿ.ಟಿ ಕಾಲೇಜಿನ ಪಾಲಿಮರ್, ಕೆಮಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗದ ಕಟ್ಟಡವು ಶಿಥಿಲಗೊಂಡಿದ್ದು ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಕಾಲೇಜಿನ ಪ್ರಾಂಶುಪಾಲರನ್ನು ಮನವಿ ಮಾಡಿದ್ದು, ಈ ವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ. 1975ರಲ್ಲಿ ನಿರ್ಮಾಣವಾದ ಈ ಕಟ್ಟಡದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಅಲ್ಲದೆ ವಿದ್ಯಾರ್ಥಿಗಳು ಭಯಬೀತರಾಗಿ ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ಬಂದಿದೆ ಎಂದರು. ಈ ವೇಳೆ ಪ್ರತಿಭಟನೆಯಲ್ಲಿ ಕಾಲೇಜಿನ ಸುಮಾರು 800 ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಎಬಿವಿಪಿಯ ಆಗ್ರಹದಂತೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ| ವೈ ಭರತ್ ಶೆಟ್ಟಿಯವರು ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಿ ಕಟ್ಟಡವನ್ನು ಪರಿಶೀಲಿಸಿ ಪ್ರಾಂಶುಪಾಲರೊಂದಿಗೆ ಮಾತನಾಡಿ ಸದ್ಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಬೇರೆ ಕಟ್ಟಡದಲ್ಲಿ ತರಗತಿ ನಡೆಸಲು ತಿಳಿಸಿದರು ಹಾಗೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೆ.ಪಿ.ಟಿ ಸಹಿತ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮಸ್ಯೆಗಳು ಈ ಎ.ಬಿ.ವಿ.ಪಿ ಯ ಪ್ರತಿಭಟನೆಯಿಂದ ಗಮನಕ್ಕೆ ಬಂದಿದ್ದು ಅದನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎತ್ತಿರುವ ಧ್ವನಿಗೆ ನ್ಯಾಯ ಸಿಗಲು ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಶಾಸಕನ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಶೀತಲ್ ಕುಮಾರ್ ಜೈನ್, ವಿಕಾಸ್ ಕಾಟಿಪಳ್ಳ, ಜಿಲ್ಲಾ ಸಂಚಾಲಕ್ ಸಂದೇಶ್ ರೈ ಮಜಕ್ಕಾರ್, ನಗರ ಸಂಘಟನಾ ಕಾರ್ಯದರ್ಶಿ ವೀರೇಶ್ ಅಜ್ಜಣ್ಣನವರು, ನಗರ ಕಾರ್ಯದರ್ಶಿ ಮಣಿಕಂಠ ಕಳಸ, ಸಹ ಕಾರ್ಯದರ್ಶಿ ನಿಶಾನ್ ಆಳ್ವ, ಶ್ರೇಯಸ್, ಅಕ್ಷಯ್ ಕಾಮಾಜೆ, ಘಟಕ ಅಧ್ಯಕ್ಷ ರೋನಕ್, ಘಟಕ ಕಾರ್ಯದರ್ಶಿ ಗುರುಪ್ರಸಾದ್, ಸರ್ವಕಾಲೇಜು ಪ್ರಮುಖರಾದ ವಚನ್ ಕುಮಾರ್, ದೀಕ್ಷಿತ್, ಧನುಷ್ ಸುವರ್ಣ, ಲಿಖಿತ್, ಧನುಷ್ ಶೆಟ್ಟಿ, ಚೇತನ್, ಆದರ್ಶ್, ಶ್ರೇಯಸ್, ಆದಿತ್ಯ, ವಿದ್ಯಾರ್ಥಿನಿ ಪ್ರಮುಖರಾದ ಅಶ್ವಿನಿ, ವಾಣಿಶ್ರೀ, ಸುಶ್ಮಾ, ಹೇಮ, ಲಿಖಿತ, ರಿಷಿಕ, ತೃಪ್ತಿ ಮುಂತಾದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

Exit mobile version