ಶಿಬರೂರು ನದಿಯಲ್ಲಿ ಯುವಕನ ಶವ ಪತ್ತೆ; ಕೊಲೆ ಶಂಕೆ
ಮಂಗಳೂರು: ಸೂರಿಂಜೆ ಶಿಬರೂರು ದೇವಸ್ಥಾನದ ಬಳಿಯ ನದಿಯಲ್ಲಿ 22 ವರ್ಷ ವಯಸ್ಸಿನ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕನ್ನು ಕೃಷ್ಣಾಪುರದ ನಿವಾಸಿ ಫಯಾಝ್ ಎಂಬವರ ಪುತ್ರ ಮಕ್ಸೂದ್ (22) ಎಂದು ಗುರುತಿಸಲಾಗಿದೆ. ಮೃತ ಯುವಕ ಎಮ್.ಆರ್.ಪಿ.ಎಲ್ ಕಂಪೆನಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಂಗಳವಾರ ಮಕ್ಸೂದ್ ತನ್ನ ಇತರ ಗೆಳೆಯರ ತಂಡದೊಂದಿಗೆ ಶಿಬರೂರು ದೇವಸ್ಥಾನದ ಬಳಿ ತೆರಳಿದ್ದು, ವಾಪಾಸು ಮನೆಗೆ ಬರುವಾಗ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಮಕ್ಸೂದ್ ಸಾವಿನ ಕುರಿತು ಮನೆಯವರು ಸಂಶಯ ವ್ಯಕ್ತಪಡಿಸಿದ್ದು, ಆತನ ತಂಡದೊಂದಿಗೆ ತೆರಳಿದ್ದವರು ಮಕ್ಸೂದ್ ನನ್ನು ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುರತ್ಕಲ್ ಪೋಲಿಸರು ತನಿಕೆ ನಡೆಸುತ್ತಿದ್ದು ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.