ಶಿರೂರು ಜ್ಯುವೆಲರಿ ಕಳ್ಳತನ ; 5 ನೇಪಾಳಿಗರ ಬಂಧನ – 3 ಕೆ.ಜಿ ಆಭರಣಗಳ ವಶ

Spread the love

ಶಿರೂರು ಜ್ಯುವೆಲರಿ ಕಳ್ಳತನ ; 5 ನೇಪಾಳಿಗರ ಬಂಧನ – 3 ಕೆ.ಜಿ ಆಭರಣಗಳ ವಶ

ಉಡುಪಿ: ಬೈಂದೂರು ಪೋಲಿಸ್ ಠಾಣಾ ವ್ಯಾಪ್ತಿಯ ಶಿರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಡಿಸಿಐಬಿ ಪೋಲಿಸರು ಐವರು ನೇಪಾಳಿಗರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಿವಾಸಿಂಗ್ ಬಹದ್ದೂರ್@ಶಿವ@ಪ್ರೇಮ್ , ಕಮರ್ ಸಿಂಗ್ ಸೌದ್@ದುಕಿಯಾ,ರಮೇಶ ಸಿಂಗ್ ಪಾರ್ಕಿ , ಹರ್ಕ್‌ ಬಹದ್ದೂರ್ ಸೌದ್ , ಪ್ರೇಮ್ ಬಹಾದ್ದೂರ್ ಸೌದ್@ಚಕರ್ ಬಹಾದ್ದೂರ್ ಸೌದ್ ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ| ಸಂಜೀವ್ ಎಂ.ಪಾಟೀಲ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪ್ರವೀಣ್ ಹೆಚ್.ನಾಯಕ್‌ರವರ ಮಾರ್ಗದರ್ಶನದಲ್ಲಿ, ಉಡುಪಿ ಡಿ.ಸಿ.ಐ.ಬಿ ಪೊಲೀಸ್ ಇನ್‌ಸ್ಪೆಕ್ಟರ್ ಸಂಪತ್ ಕುಮಾರ್ ಎ.ರವರು ಡಿ.ಸಿ.ಐ.ಬಿ ಸಿಬ್ಬಂದಿಯವರೊಂದಿಗೆ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿ ಅಂಗಡಿಯಲ್ಲಿ 2017 ಎಪ್ರೀಲ್ 2  ರಂದು ಕಳ್ಳತನ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು  ದಸ್ತಗಿರಿ ಮಾಡಿ ಅವರುಗಳು ಶಿರೂರು ಗೋಲ್ಡ್ ಪ್ಯಾಲೇಸ್ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಸ್ವತ್ತುಗಳಲ್ಲಿ 3 ಕೆ.ಜಿ ತೂಕದ ಬೆಳ್ಳಿಯ ಕಾಲುಚೈನ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದು. ಇದರ ಮೌಲ್ಯ 1,80,000/- ರೂಪಾಯಿ ಆಗಿರುತ್ತದೆ. ಆರೋಪಿತರು ಗೂರ್ಖಾ ಕೆಲಸ ಹಾಗೂ ಫಾಸ್ಟ್ ಫುಡ್ ಕೆಲಸ ಮಾಡಿಕೊಂಡಿದ್ದು, ತಾವು ಕೆಲಸ ಮಾಡುವ ಸ್ಥಳದಲ್ಲಿರುವ ಚಿನ್ನದ ಅಂಗಡಿಯನ್ನು ಗುರಿಯಾಗಿಸಿ ತನ್ನ ತಂಡದೊಂದಿಗೆ ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿರುವುದಾಗಿದೆ. ಆರೋಪಿಗಳನ್ನು ಹಾಗೂ ಸ್ವಾಧೀನಪಡಿಸಿಕೊಂಡ ಸ್ವೊತ್ತುಗಳನ್ನು ಬೈಂದೂರು ಠಾಣೆಗೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಡಿ.ಸಿ.ಐ.ಬಿ ಘಟಕದ ಎಎಸ್‌ಐ ರವರಾದ ರೊಸಾರಿಯೋ ಡಿ’ಸೋಜ ಹಾಗೂ ರವಿಚಂದ್ರ ಮತ್ತು ಸಿಬ್ಬಂದಿಯವರಾದ ಸುರೇಶ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಸಂತೋಷ ಕುಂದರ್, ಪ್ರವೀಣ, ರಾಜ್‌ಕುಮಾರ್ ಬೈಂದೂರು, ದಯಾನಂದ ಪ್ರಭು,  ಶಿವಾನಂದ ಹಾಗೂ ಚಾಲಕ ರಾಘವೇಂದ್ರ ರವರು ಸಹಕರಿಸಿರುತ್ತಾರೆ.


Spread the love