ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ, ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಗೈರು!

Spread the love

ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ, ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಗೈರು!

ಶಿವಮೊಗ್ಗ: ಭಾರತೀಯ ಜನತಾ ಪಕ್ಷ ಹಾಗೂ ಇತರ ಹಿಂದೂ ಸಂಘಟನೆಗಳ ವಿರೋಧದ ಹೊರತಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಬೇಕಾಗಿದ್ದು ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

image013tippu-jayanti-shivamogga-mangalorean-com-20161110-013image001tippu-jayanti-shivamogga-mangalorean-com-20161110-001 image002tippu-jayanti-shivamogga-mangalorean-com-20161110-002 image003tippu-jayanti-shivamogga-mangalorean-com-20161110-003 image004tippu-jayanti-shivamogga-mangalorean-com-20161110-004 image005tippu-jayanti-shivamogga-mangalorean-com-20161110-005 image006tippu-jayanti-shivamogga-mangalorean-com-20161110-006 image007tippu-jayanti-shivamogga-mangalorean-com-20161110-007 image008tippu-jayanti-shivamogga-mangalorean-com-20161110-008 image009tippu-jayanti-shivamogga-mangalorean-com-20161110-009 image010tippu-jayanti-shivamogga-mangalorean-com-20161110-010 image011tippu-jayanti-shivamogga-mangalorean-com-20161110-011 image012tippu-jayanti-shivamogga-mangalorean-com-20161110-012

ಪ್ರಮುಖ ಭಾಷಣಕಾರರಾಗಿ ಆಗಮಿಸಿದಿ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕಿ ಡಾ ಶುಭಾ ಮರವಂತೆ ಮಾತನಾಡಿ, ಟಿಪ್ಪು ನಾಡು ಕಂಡ ಅಪ್ರತಿಮ ದೇಶ ಭಕ್ತ. ಕಳೆದ 2 ವರುಷಗಳಿಂದ ಮಹಾನ್ ಮಾನವತಾವಾದಿ ಟಿಪ್ಪು ಜಯಂತಿಯನ್ನು ರಾಜ್ಯ ಸರಕಾರ ಆಚರಿಸುತ್ತಿರುವುದು ಶ್ಲಾಘನೀಯ. ಈ ದಿನವನ್ನು ಟಪ್ಪು ಅವರ ವ್ಯಕ್ತಿತ್ವ ಹಾಗೂ ಆಡಳಿತಾತ್ಮಕ ದೃಷ್ಟಿಯನ್ನು ಪರಿಗಣಿಸಿ ಸಾಂಸ್ಕೃತಿಕ ಸೌಹಾರ್ದ ದಿನವನ್ನಾಗಿ ಆಚರಿಸಬೇಕು. ಟಿಪ್ಪು ಅಂದಿನ ದಿನಗಳಲ್ಲಿ ಎಲ್ಲಾ ಜಾತಿ ವರ್ಗ ಧರ್ಮಗಳಿಗೆ ನೀಡಿದ್ದ ಪ್ರಾಶಸ್ತ್ಯಗಳನ್ನು ಪರಿಗಣಿಸಬೇಕಾಗಿದೆ.  ಅಂತೆಯೇ ಸಾಂಸ್ಕೃತಿಕ ನೆಲೆಗಟ್ಟನ್ನು ಅವಲೋಕಿಸಿ ಈ ದಿನಾಚರಣೆಯನ್ನು ಆಚರಿಸಬೇಕಾಗಿದೆ ಎಂದರು.

ಶಿವಮೊಗ್ಗ ಶಾಸಕ ಕೆ ಬಿ ಪ್ರಸನ್ನ ಕುಮಾರ್ ಮಾತನಾಡಿದ ಟಿಪ್ಪು ಸುಲ್ತಾನ್ ರಾಜ್ಯವನ್ನು ಉಳಿಸಲು ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇಟ್ಟಿದ್ದನು. ಮಕ್ಕಳು ಶಾಲೆಯಿಂದ ಬರುವುದು ತಡವಾದರೆ ಪೋಷಕರು ಆತಂಕಪಡುತ್ತಾರೆ.  ಅಂತಹ ಸಂದರ್ಭದಲ್ಲಿ ರಾಜ್ಯ ಉಳಿಸಲು ತನ್ನ ಮಕ್ಕಳನ್ನೇ ಅಡವಿಟ್ಟಿದ್ದ ಟಿಪ್ಪು ದೇಶಪ್ರೇಮಿಯೇ ಅಥವಾ ದೇಶದ್ರೋಹಿಯೇ ಎಂಬುದನ್ನು ಜನರೇ ನಿರ್ಧರಿಸಲಿ ಎಂದರು. ಕೆಲವರಿಗೆ ಟಿಪ್ಪು ಬೇಕಾದಾಗ ದೇಶಪ್ರೇಮಿಯಾಗುತ್ತಾನೆ, ಬೇಡವಾದಾಗ ದೇಶದ್ರೋಹಿಯಾಗುತ್ತಾನೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಹಜರತ್ ಟಿಪ್ಪು ಸುಲ್ತಾನ್ ಅಭಿಮಾನಿ ಬಳಗದ ಅಧ್ಯಕ್ಷ ಅಫ್ತಾಬ್ ಪರ್ವಿನ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಪರ್ವಿನ್ ಅಹಮ್ಮದ್, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಎಸ್ ಅಭಿನವ್ ಖರೆ, ಐಜಿ ನಂಜುಂಡಪ್ಪ ಹಾಗೂ ಇತರರು ಉಪಸ್ಥಿತರಿದ್ದರು.


Spread the love