Home Mangalorean News Kannada News ಶಿವಮೊಗ್ಗ ಚುನಾವಣೆ ರಾಜಕೀಯ ದಿಕ್ಸೂಚಿ; ಆಸ್ಕರ್ ಫರ್ನಾಂಡಿಸ್ 

ಶಿವಮೊಗ್ಗ ಚುನಾವಣೆ ರಾಜಕೀಯ ದಿಕ್ಸೂಚಿ; ಆಸ್ಕರ್ ಫರ್ನಾಂಡಿಸ್ 

Spread the love

ಶಿವಮೊಗ್ಗ ಚುನಾವಣೆ ರಾಜಕೀಯ ದಿಕ್ಸೂಚಿ; ಆಸ್ಕರ್ ಫರ್ನಾಂಡಿಸ್ 

ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧಿಸುತ್ತಿದ್ದು, ಪರಂಪರಾಗತ ಕಾಂಗ್ರೆಸ್ ಮತಗಳನ್ನು ಕ್ರೋಡೀಕರಿಸಿದರೆ ಗೆಲುವು ನಮ್ಮದಾಗಬಹುದು. ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅಗತ್ಯ. ಈ ಚುನಾವಣೆಯ ಗೆಲುವು ದೇಶದ ರಾಜಕೀಯದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು.

ಚುನಾವಣೆ ಪೂರ್ವಭಾವಿಯಾಗಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಬೈಂದೂರು ವಿಧಾನಸಭಾ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಬೂತ್‌ಮಟ್ಟಕ್ಕೆ ಜಿಲ್ಲಾ ಸಮಿತಿಯಿಂದ ವೀಕ್ಷಕರನ್ನು ನೇಮಿಸಿ ಪ್ರತಿದಿನ ಚುನಾವಣೆಯ ಆಗು-ಹೋಗುಗಳನ್ನು ಅವಲೋಕಿಸಬೇಕು. ಯಾವುದೇ ಕಾರಣಕ್ಕೆ ಯಾವ ಮನೆಯೂ ಕೂಡ ನಮ್ಮ ಕಾರ್ಯಕರ್ತರ ಭೇಟಿಯಿಂದ ತಪ್ಪಿಹೋಗದಂತೆ ಯೋಜನೆ ಹಾಕಿಕೊಳ್ಳಬೇಕು ಎಂದರು.

ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಗೋಪಾಲ ಭಂಡಾರಿ, ಬೈಂದೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಎಂ.ಎಸ್. ಮಹಮ್ಮದ್, ಕೆ.ಎಂ.ಡಿ.ಸಿ. ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ದನ ತೋನ್ಸೆ ಅಧ್ಯಕ್ಷತೆ ವಹಿಸಿದ್ದರು.

ಕೆಪಿಸಿಸಿ ಕಾರ್ಯದರ್ಶಿಗಳಾದ ದೇವಿಪ್ರಸಾದ್ ಶೆಟ್ಟಿ, ಇಂದ್ರಾಳಿ ಮುರುಳಿ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ರಾಜಶೇಖರ್ ಕೋಟ್ಯಾನ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಬ್ಲಾಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಕುಂದಾಪುರ, ಸತೀಶ್ ಅಮೀನ್ ಪಡುಕರೆ ಉಡುಪಿ, ನವೀನ್‌ಚಂದ್ರ ಶೆಟ್ಟಿ ಕಾಪು, ನೀರೆಕೃಷ್ಣ ಶೆಟ್ಟಿ ಹೆಬ್ರಿ, ಸುಧಾಕರ ಕೋಟ್ಯಾನ್ ಕಾರ್ಕಳ, ಮದನ್ ಕುಮಾರ್ ಬೈಂದೂರು, ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ಗಣೇಶ್ ಕೋಟ್ಯಾನ್, ರೋಶನಿ ಒಲಿವರ್, ಶಶಿಧರ ಶೆಟ್ಟಿ ಎಲ್ಲೂರು, ಹರೀಶ್ ಶೆಟ್ಟಿ ಪಾಂಗಳ, ಇಸ್ಮಾಯಿಲ್ ಆತ್ರಾಡಿ, ಸುರೇಶ್ ನಾಯ್ಕ, ಯತೀಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version