ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಉಸ್ತುವಾರಿಗಳ ನೇಮಕ

Spread the love

ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಉಸ್ತುವಾರಿಗಳ ನೇಮಕ

ಉಡುಪಿ: ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ 7 ಜಿ.ಪಂ. ವ್ಯಾಪ್ತಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ವೀಕ್ಷಕರನ್ನು ಉಭಯ ಪಕ್ಷಗಳ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಿ ನೇಮಿಸಲಾಗಿದೆ. ನೇಮಕಾತಿಯ ವಿವರಗಳು ಈ ಕೆಳಗಿನಂತಿದೆ.

ಸಿದ್ಧಾಪುರ ಜಿ.ಪಂ. ಕ್ಷೇತ್ರ ವಿನಯ ಕುಮಾರ್ ಸೊರಕೆ ಮಾಜಿ ಸಚಿವರು, ಪಿ.ವಿ. ಮೋಹನ್ ಪ್ರ ಕಾರ್ಯದರ್ಶಿ, ಕೆ.ಪಿ.ಸಿ.ಸಿ., ರಂಜಿತ್ ಶೆಟ್ಟಿ (ಜೆ.ಡಿ.ಎಸ್.) ಕಾವ್ರಾಡಿ ಜಿ.ಪಂ. ಕ್ಷೇತ್ರ ಕೆ. ಪ್ರತಾಪಚಂದ್ರ ಶೆಟ್ಟಿ (ಎಂ.ಎಲ್.ಸಿ.), ಅಶೋಕ್ ಕುಮಾರ್ ಕೊಡವೂರು (ಸೇವಾದಳದ ಮುಖ್ಯಸ್ಥರು), ಎಂ.ಎ. ಗಫೂರ್ (ಪ್ರ. ಕಾರ್ಯದರ್ಶಿ ಕೆ.ಪಿ.ಸಿ.ಸಿ.), ರೋಹಿತ್ ಕರಂಬಳ್ಳಿ (ಜೆ.ಡಿಎಸ್.) ಕಂಬದಕೋಣೆ ಜಿ.ಪಂ. ಕ್ಷೇತ್ರ ಪ್ರಮೋದ್ ಮಧ್ವರಾಜ್ (ಮಾಜಿ ಸಚಿವರು), ಮಾಣಿಗೋಪಾಲ್, ಕುಂದಾಪುರ, ರಾಜು ದೇವಾಡಿಗ (ಜೆ.ಡಿ.ಎಸ್.), ತ್ರಾಸಿ ಜಿ.ಪಂ. ಕ್ಷೇತ್ರ ಆನಂದ ಆಸ್ನೋಟಿಕರ್ (ಮಾಜಿ ಸಚಿವರು), ವೆರೋನಿಕಾ ಕರ್ನೇಲಿಯೋ(ಕಾರ್ಯದರ್ಶಿ ಕೆ.ಪಿ.ಸಿ.ಸಿ), ಹರೀಶ್ ಕುಮಾರ್ (ಎಂ.ಎಲ್.ಸಿ.& ಅಧ್ಯಕ್ಷರು ದ.ಕ. ಜಿಲ್ಲಾ ಕಾಂಗ್ರೆಸ್), ಮನ್ಸೂರ್ ಇಬ್ರಾಹಿಂ (ಜೆ.ಡಿ.ಎಸ್.)

ಬೈಂದೂರು ಜಿ.ಪಂ. ಕ್ಷೇತ್ರ ಜನಾರ್ದನ ತೋನ್ಸೆ ಅಧ್ಯಕ್ಷರು ಉಡುಪಿ ಜಿಲ್ಲಾ ಕಾಂಗ್ರೆಸ್ ಎಮ್.ಎಸ್. ಮಹಮ್ಮದ್ (ಕೆ.ಪಿ.ಸಿ.ಸಿ. ಕಾರ್ಯದರ್ಶಿ), ಮುರಳಿ ಶೆಟ್ಟಿ (ಕಾರ್ಯದರ್ಶಿ ಕೆ.ಪಿ.ಸಿ.ಸಿ.), ಯೋಗೀಶ್ ಶೆಟ್ಟಿ (ಅಧ್ಯಕ್ಷರು ಉಡುಪಿ ಜಿಲ್ಲಾ ಜೆ.ಡಿ.ಎಸ್.), ಶೀರೂರು ಜಿ.ಪಂ. ಕ್ಷೇತ್ರ ಮಾಂಕಳ ವೈದ್ಯ (ಮಾಜಿ ಶಾಸಕರು ಭಟ್ಕಳ), ಇನಾಯತುಲ್ಲಾ ಶಾಬಾದ್ರಿ ಭಟ್ಕಳ ( ಜೆ.ಡಿ.ಎಸ್.), ರಂಜಿತ್ ಶೆಟ್ಟಿ (ಜೆ.ಡಿಎಸ್.), ವಂಡ್ಸೆ ಜಿ.ಪಂ. ಕ್ಷೇತ್ರ ಗೋಪಾಲ ಭಂಡಾರಿ (ಮಾಜಿ ಶಾಸಕರು, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ) ರಾಕೇಶ್ ಮಲ್ಲಿ (ರಾಜ್ಯ ಇಂಟಕ್ ಅಧ್ಯಕ್ಷರು) ದೇವಿಪ್ರಸಾದ್ ಶೆಟ್ಟಿ (ಕಾರ್ಯದರ್ಶಿ ಕೆ.ಪಿ.ಸಿ.ಸಿ.), ಶಬ್ಲಾಡಿ ಮಂಜುನಾಥ ಶೆಟ್ಟಿ (ಜೆ.ಡಿ.ಎಸ್.) ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಮೇಲುಸ್ತುವಾರಿಗಳಾಗಿ ವೆಂಕಟ್ ರಾವ್ ನಾಡಗೋಡ (ಮೀನುಗಾರಿಕಾ ಸಚಿವರು, ಕರ್ನಾಟಕ ಸರಕಾರ), ಜಿ.ಎ. ಬಾವಾ (ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಿ.ಸಿ.), ಆನಂದ್ ಆಸ್ನೋಟಿಕರ್ (ಮಾಜಿ ಸಚಿವರು, ಜೆ.ಡಿ.ಎಸ್.) ಇವರು ನೇಮಕಗೊಂಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಜನಾರ್ದನ ತೋನ್ಸೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love