ಶಿವರಾಜ್ ಕೊಲೆಗೆ ದುಷ್ಪ್ರೇರಣೆ ನೀಡಿದ ಆರೋಪಿಗಳ ಬಂಧನ

Spread the love

ಶಿವರಾಜ್ ಕೊಲೆಗೆ ದುಷ್ಪ್ರೇರಣೆ ನೀಡಿದ ಆರೋಪಿಗಳ ಬಂಧನ

ಮಂಗಳೂರು: ಬೆಂಗ್ರೆ ಗ್ರಾಮದ ಬೊಕ್ಕಪಟ್ಣ ಬೆಂಗ್ರೆ ಎಂಬಲ್ಲಿ ಕೊಲೆಯಾದ ಶಿವರಾಜ್ ಕರ್ಕೇರ ಈತನ ಕೊಲೆ ಪ್ರಕರಣದಲ್ಲಿ ಈಗಾಗಲೇ ಒಟ್ಟು 07 ಜನರು ದಸ್ತಗಿರಿಯಾಗಿದ್ದು, ಕೊಲೆಗೆ ದುಷ್ಪ್ರೇರಣೆ ನೀಡಿ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಮೂರು ಜನರನ್ನು ಮೂರು ಆರೋಪಿಗಳನ್ನು ಸೋಮವಾರ ಪಣಂಬೂರು ಪೊಲೀಸರು ಮತ್ತು ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳದ ಸಿಬ್ಬಂದಿಗಳ ತಂಡ ಬಂಧಿಸಿದ್ದಾರೆ.

ಬಂಧಿತರನ್ನು ಕುದ್ರೋಳಿ ಬೆಂಗರೆ ನಿವಾಸಿ ವಿಕ್ರಮ್ ಯಾನೆ ವಿಕ್ರಮ್ ಅಮೀನ್ ಯಾನೆ ವಿಕ್ಕಿ, (25), ಅಜಯ್ (20) ಮತ್ತು ಬಿಜೈ ನಿವಾಸಿ ಸುಮನ್ ಯಾನೆ ಸುಮನ್ ಕೋಟ್ಯಾನ್ ಯಾನೆ ಬೊಗ್ಗು ಸುಮನ್ (19) ಎಂದು ಗುರುತಿಸಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಪಣಂಬೂರು, ಠಾಣಾ ಪಿ.ಎಸ್.ಐ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್ ಉಮೇಶ್ ಕುಮಾರ್ ಹಾಗೂ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love