Home Mangalorean News Kannada News ಶಿಸ್ತು ಬದ್ಧವಾದ ಜೀವನ ಕ್ರಮದಿಂದ ಉತ್ತಮ ಆರೋಗ್ಯ-ರಮಾನಾಥ ರೈ

ಶಿಸ್ತು ಬದ್ಧವಾದ ಜೀವನ ಕ್ರಮದಿಂದ ಉತ್ತಮ ಆರೋಗ್ಯ-ರಮಾನಾಥ ರೈ

Spread the love

ಶಿಸ್ತು ಬದ್ಧವಾದ ಜೀವನ ಕ್ರಮದಿಂದ ಉತ್ತಮ ಆರೋಗ್ಯ-ರಮಾನಾಥ ರೈ

ಮ0ಗಳೂರು :ಶಿಸ್ತು ಬದ್ಧವಾದ ಜೀವನ ಕ್ರಮವನ್ನು ಅನುಸರಿಸಿದಲ್ಲಿ ಅದರಲ್ಲೂ ಭಾರತೀಯ ಪದ್ಧತಿಯನ್ನು ಅನುಸರಿಸಿದಲ್ಲಿ ಉತ್ತಮವಾಗಿ ಆರೋಗ್ಯ ಕ್ರಮವನ್ನು ಅನುಸರಿಸಬಹುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ದ.ಕ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರಕೃತಿದತ್ತವಾದಂತಹ ಉತ್ತಮವಾದ ಆಹಾರ ಪದ್ಧತಿಯಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಗಿಡ ಮೂಲಿಕೆಗಳಿಂದ ನಾವು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಿರಿಯ ನಾಗರಿಕರ ನಂಬಿಕೆ ಎಂದು ಹೇಳಿದರು.

ಸಮಾಜದಲ್ಲಿ ಸರಾಸರಿ ವಯಸ್ಸು ಹೆಚ್ಚುತ್ತಿರುವುದು ಇಂದು ಶಿಸ್ತು ಬದ್ಧವಾದ ಜೀವನದಿಂದ ಮಾತ್ರ ಸಾಧ್ಯ. ಬೇರೆ ನಗರಗಳಿಗೆ ಹೋಲಿಸಿದರೆ ನಾವೂ ಕೌಟುಂಬಿಕವಾಗಿ ಸಂತೋಷವಾಗಿದ್ದೇವೆ. ಕುಟುಂಬದಲ್ಲಿ ಹಿರಿಯ ನಾಗರೀಕರಲ್ಲಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕಾಗಿದೆ. ಮಕ್ಕಳಿಂದ ಪ್ರೀತಿ ಸಿಗದಾಗ ಹಿರಿಯ ಜೀವವೂ ಮಾನಸಿಕವಾಗಿ ಕುಬ್ಜವಾಗುತ್ತದೆ ಎಂದು ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.

ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡುತ್ತಾ ಮನೆಯಲ್ಲಿ ವೃದ್ದರಿದ್ದಲ್ಲಿ ಮಕ್ಕಳಿಗೆ ಸಂಸ್ಕøತಿ ಮಾರ್ಗದರ್ಶನವನ್ನು ನೀಡಬಹುದು. ಇಂದು ಮಕ್ಕಳು ದಾರಿ ತಪ್ಪುವುದನ್ನು ನಾವು ಕಾಣುತ್ತಿದ್ದೇವೆ ಇವೆಲ್ಲ ಸೂಕ್ತ ಮಾರ್ಗದರ್ಶನದ ಅಭಾವದಿಂದ ನಡೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹತ್ತು ಹಿರಿಯ ನಾಗರೀಕರನ್ನು ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಡಾ. ಚಂದ್ರಶೇಖರ ದಾಮ್ಲೆ, ಹಿರಿಯ ನಾಗರಿಕರ ಕ್ಷೇತ್ರ ಡಾ. ಪ್ರಭಾ ಅಧಿಕಾರಿ ಎಂ. ಆರ್, ನಿವೃತ್ತ ಯೋಧ ಮೇಜರ್ ಲೋಹಿತ್ ಸುವರ್ಣ, ಸಾಹಿತ್ಯ ಕ್ಷೇತ್ರ ಆದಂ ಹೇಂತಾರ್, ಕಲೆ ಕ್ಷೇತ್ರದ ಟಿ. ಪ್ರೇಮಲತಾ ರಾವ್, ಕೃಷಿ ಕ್ಷೇತ್ರ ವಾಸುದೇವ ರೈ, ಸಮಾಜ ಸೇವೆ ಕ್ಷೇತ್ರದ ಕೆ. ಮೋನಪ್ಪ ವಿಟ್ಲ, ಕ್ರೀಡಾ ಕ್ಷೇತ್ರದ ಓಬಯ್ಯ ಮಲ್ಯ, ಜಾನಪದ ಕ್ಷೇತ್ರದ ಮಾಯಿಲ ಕುತ್ತಾರು, ಅತೀ ಹಿರಿಯ ನಾಗರಿಕ ವ್ಯಕ್ತಿ ಸರ್ವಮಂಗಲ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ವಹಿಸಿದ್ದರು. ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಶ್ವಾಸ್ ಟ್ರಸ್ಟ್‍ನ ಮುಖ್ಯಸ್ಥರಾದ ಒಲಿಂಡಾ ಪಿರೇರಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶೋಭಾ ನಿರೂಪಿಸಿದರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ದ.ಕ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ದೀಪು ಹೆಚ್. ಆರ್. ವಂದಿಸಿದರು.


Spread the love

Exit mobile version