ಶೆಟ್ಟಿಬೆಟ್ಟು ಮಾರುತಿನಗರ ರಸ್ತೆ ಕಾಮಗಾರಿ ಉದ್ಘಾಟನೆ
ಉಡುಪಿ: ವಾರಾಹಿ ನೀರಾವರಿ ಯೋಜನೆಯಡಿ ರೂ.15.00 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಿದ ಶೆಟ್ಟಿಬೆಟ್ಟು ಮಾರುತಿನಗರ ರಸ್ತೆ ಕಾಮಗಾರಿಯನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ರವರು ಇತ್ತೀಚೆಗೆ ಉದ್ಘಾಟಿಸಿದರು.
ನಗರಸಭೆ ಸದಸ್ಯರಾದ ಸುಕೇಶ್ ಕುಂದರ್ ಮತ್ತು ಸ್ಥಳೀಯರಾದ ಸುಧಾಕರ ಹೆಗ್ಡೆ, ಬ್ರಿಜಾರ್ ಸಾಮಾನಿ, ಸಂಜೀವ ಪೂಜಾರಿ, ರಾಮದಾಸ್ ಕಾಮತ್, ರತ್ನಾಕರ ಸಾಮಂತ್, ಗಣೆಶ್ ಸುನೀಲ್, ವಿಶ್ವನಾಥ, ನೀರಜ್ ಪಾಟೀಲ್, ಸಿತಾರ ಸಾಲ್ಯಾನ್, ಸುರೇಂದ್ರ, ರವಿರಾಜ್, ದಿನೇಶ್, ಸೂರಪ್ಪ ಪೂಜಾರಿ, ಶಂಭುಶೆಟ್ಟಿ, ವಿಠಲ ಮಡಿವಾಳ, ಜಯಶೆಟ್ಟಿ, ರಾಮ, ಅಪ್ಪಿ ಪೂಜಾರ್ತಿ, ಶೇಖರ, ಗಣೇಶ್ ಎಮ್, ಮುಂತಾದವರು ಉಪಸ್ಥಿತರಿದ್ದರು.