Home Mangalorean News Kannada News ಶೋಭಕೃತ್ ಸಂವತ್ಸರ ಪೂರ್ತಿ ನಡೆದ ಯುಎಇ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವಕ್ಕೆ ಅದ್ದೂರಿಯ ಸಮಾರೋಪ

ಶೋಭಕೃತ್ ಸಂವತ್ಸರ ಪೂರ್ತಿ ನಡೆದ ಯುಎಇ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವಕ್ಕೆ ಅದ್ದೂರಿಯ ಸಮಾರೋಪ

Spread the love

ಶೋಭಕೃತ್ ಸಂವತ್ಸರ ಪೂರ್ತಿ ನಡೆದ ಯುಎಇ ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವಕ್ಕೆ ಅದ್ದೂರಿಯ ಸಮಾರೋಪ

ದುಬೈ: ಯಶಸ್ವಿ 20 ವರ್ಷಗಳನ್ನು ಪೂರೈಸಿ, ಸಂವತ್ಸರ ಪೂರ್ತಿ ನಡೆದ 20 ವೈವಿಧ್ಯಮಯ ಕಾರ್ಯಕ್ರಮಗಳ ಅದ್ಧೂರಿ ಸಮಾರೋಪ, ಪ್ರಶಸ್ತಿ ಪ್ರದಾನ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆ, ಯಕ್ಷಗಾನ, ವಿಶೇಷ ಊಟೋಪಚಾರ, ಆಕರ್ಷಕ ಉಡುಗೊರೆಗಳೊಂದಿಗೆ “ವಿಂಶತಿ ವೈಭವ ” ಅದ್ಧೂರಿಯಿಂದ ದುಬೈ, ಯ ಜುಮೇರಾ ಬೆಕಲೋರಿಯಟ್ ಸ್ಕೂಲ್ ಸಭಾಂಗಣದಲ್ಲಿ ಭೀಮ ವೇದಿಕೆ ಹಾಗು ವೀನಸ್ ಆತಿಥ್ಯದಲ್ಲಿ ಏಪ್ರಿಲ್ 13-2024ರ ಶನಿವಾರದಂದು ದಿನ ಪೂರ್ತಿ ಸಂಭ್ರಮದಿಂದ ಜರುಗಿತು.

ಬೆಳ್ಳಗ್ಗೆ 9.30 ಕ್ಕೆ ಸಾಂಪ್ರದಾಯಿಕ ಪ್ರಾರ್ಥನೆ, ವೇದಘೋಷದೊಂದಿಂಗೆ ಗಣ್ಯರು ಜ್ಯೋತಿಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದುಬೈಯ ಹಿಂದೂ ದೇವಾಲಯದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮೋಹನ್ ನರಸಿಂಹ ಮೂರ್ತಿಯವರು ಉದ್ಘಾಟನಾ ಕಾರ್ಯದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ದೇವ ಸ್ತುತಿಗೆ ಶಾಸ್ತ್ರೀಯ ಹೆಜ್ಜೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಲಾವಿದರು, ನಂತರ ಭಾವ ಗೀತೆ, ರಸಮಂಜರಿ, ಜಾನಪದ ನೃತ್ಯ, ಯಕ್ಷನೃತ್ಯ, ಕಂಸಾಳೆ, ಸಂಸ್ಕೃತ ಕಿರು ನಾಟಕ, ಕನ್ನಡ ಲಘು ಪ್ರಹಸನ, ಏಕ ಪಾತ್ರಾಭಿನಯ, ಅಸ್ಸಾಂನ ಸತ್ರಿಯಾ ನೃತ್ಯ, ತುಳು ಸಾಂಸ್ಕೃತಿಕ ನೃತ್ಯ, ದೇಶ ಭಕ್ತಿಯ ನೃತ್ಯಗಳನ್ನು ಪ್ರಸ್ತುತ ಪಡಿಸಿದರು.

ವಿಂಶತಿ ವೈಭವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನವೋತ್ತರ ಕನ್ನಡ ದ ಖ್ಯಾತ ಸಾಹಿತಿ, ಕವಿ, ನಾಟಕಗಾರ ಶ್ರೀ ಡುಂಡಿರಾಜ್ ಅವರು ಭಾಗವಹಿಸಿ ಶುಭ ಹಾರೈಸಿ ಯುಎಇಯಲ್ಲಿ ಸಮಾಜವನ್ನು ಕಟ್ಟಿ ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸಮಾಜ ಬಾಂಧವರನ್ನು ಶ್ಲಾಘಿಸಿದರು. ಕವಿ ಡುಂಡಿರಾಜ್ ಅವರನ್ನು “ಶಬ್ದ ಸಾಮ್ರಾಟ ” ಎಂಬ ಬಿರುದನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವೇದಿಕೆಯಲ್ಲಿ ಯುಎಇ ಬ್ರಾಹ್ಮಣ ಸಮಾಜದ ಪ್ರಧಾನ ಪೋಷಕರಾದ ಶ್ರೀ ಪುತ್ತಿಗೆ ವಾಸುದೇವ ಭಟ್, ಸಮಾಜದ ಹಿರಿಯ ಮುತ್ಸದ್ದಿ ಶ್ರೀ ಕೃಷ್ಣ ಮೂರ್ತಿ ಐತಾಳ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉದ್ಯಮಿ ಫ್ರಾಂಕ್ ಫರ್ನಾಂಡಿಸ್ ಸಮಾಜದ ಸ್ಥಾಪಕ ಸಂಚಾಲಕರಾದ ಜಯರಾಮ ಸೋಮಯಾಜಿ, ಸುಧಾಕರ ಪೇಜಾವರ, ಶಿವರಾಂ ಭಟ್ ಮತ್ತು ಅನಂತ್ ತಂತ್ರಿ ಅವರು ಉಪಸ್ಥಿತರಿದ್ದರು.

ಸಮಾಜಕ್ಕೆ ನಿರಂತರ ದುಡಿದವರನ್ನು, ಪೋಷಕರನ್ನು ಪ್ರಯೋಜಕರನ್ನು ಹಾಗು ಅತಿಥಿ ಕಲಾವಿದರನ್ನು ವಿವಿಧ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಧಾಕರ್ ಪೇಜಾವರ ಸ್ವಾಗತ ಹಾಗು ಪ್ರಸ್ತಾವಿಕದೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮ ಶಿವರಾಂ ಭಟ್ ರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯವಾಯಿತು. ಕಲಾವಿದರ, ಅತಿಥಿಗಳ ಪರಿಚಯ ಮತ್ತು ಕಾರ್ಯಕ್ರಮ ನಿರೂಪಣೆಯನ್ನು ಆರತಿ ಅಡಿಗರವರು ನಿರ್ವಹಿಸಿದರು. ಸಾಂಸ್ಕೃಕ ಕಾರ್ಯಕ್ರಮ ನಿರೂಪಣೆಯಲ್ಲಿ ಸ್ವಾತಿ ಸರಳಾಯರು ಜೊತೆಯಾದರು.

ಮರಳುಗಾಡಲಿ ಹಾಸ್ಯದ ಹೊಳೆ ಹರಿಸಿದ ಖ್ಯಾತ ಕವಿ ಡುಂಡಿರಾಜ್ ಸುಮಾರು 68 ಅಮೂಲ್ಯ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ, ನೋವು ಗೋಳು ಗಳ ನಡುವೆ ಅಡಗಿ ಕುಳಿತಿರುವ ನಗುವನ್ನು ಹುಡುಕಿ ತಂದು ಓದುಗರಿಗೆ ಹಂಚುವ, ನಗೆಗಡಲ ಒಡೆಯ, ಎಚ್.ಡುಂಡಿರಾಜ್ ಅವರು ಸಾವಿರ ಶಬ್ದಗಳ ಭಾವನೆಗಳನ್ನು 4 ಸಾಲಿನ ಚುಟುಕುಗಳ ಮೂಲಕ, ಹಾಸ್ಯ ಲೇಪನದ ಮೂಲಕ, ತನ್ನ ಭಾಷಣದುದ್ದಕ್ಕೂ ನೆರೆದ ಜನಸ್ತೋಮವನ್ನು ಅಕ್ಷರ ಸಹ ನಗೆಗಡಲಲ್ಲಿ ತೇಲಾಡಿಸಿದರು. ಎಲ್ಲರ ಮನವನ್ನು ಮುದ ಗೊಳಿಸಿದರು.

ಸಂಜೆ ಹೊತ್ತಲ್ಲಿ ನಡೆದ ಯಕ್ಷಗಾನ “ಧಕ್ಷ ಧರ ” ದಲ್ಲಿ ಅತಿಥಿ ಕಲಾವಿದರರಾದ ಶ್ರೀಮತಿ ವಿದ್ಯಾ ಕೋಳ್ಯ ಊರು, ಶ್ರೀ ದೀಪಕ್ ಪೇಜಾವರ, ಭಾಗವತರಾಗಿ ಶ್ರೀ ಚಿನ್ಮಯ ಭಟ್ ಕಲ್ಲಡ ಅವರ ಜೊತೆ ಬ್ರಾಹ್ಮಣ ಸಮಾಜದ ಕಲಾವಿದರು ಭಾಗವಹಿಸಿದ್ದರು.


Spread the love

Exit mobile version