Home Mangalorean News Kannada News ಸಂಕಷ್ಟದಲ್ಲಿರುವ ಭಾರತೀಯರಿಗೆ ಯಾವ ಹೊರೆಯನ್ನು ಹಾಕದೇ ವಿನಾಯತಿ ನೀಡಿ ಮುಕ್ತವಾಗಿ ಕರೆ ತನ್ನಿ – ಪಿ...

ಸಂಕಷ್ಟದಲ್ಲಿರುವ ಭಾರತೀಯರಿಗೆ ಯಾವ ಹೊರೆಯನ್ನು ಹಾಕದೇ ವಿನಾಯತಿ ನೀಡಿ ಮುಕ್ತವಾಗಿ ಕರೆ ತನ್ನಿ – ಪಿ ವಿ ಮೋಹನ್

Spread the love

ಸಂಕಷ್ಟದಲ್ಲಿರುವ ಭಾರತೀಯರಿಗೆ ಯಾವ ಹೊರೆಯನ್ನು ಹಾಕದೇ ವಿನಾಯತಿ ನೀಡಿ ಮುಕ್ತವಾಗಿ ಕರೆ ತನ್ನಿ – ಪಿ ವಿ ಮೋಹನ್

ಮಂಗಳೂರು: ಸಂಕಷ್ಟದಲ್ಲಿರುವ ಭಾರತೀಯರಿಗೆ ಯಾವ ಹೊರೆಯನ್ನು ಹಾಕದೇ ವಿನಾಯತಿ ನೀಡಿ ಮುಕ್ತವಾಗಿ ಕರೆ ತರಬೇಕು ಮತ್ತು ಸ್ಥಳದಲ್ಲೇ ಕ್ವಾರಂಟೈನ್ಗೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಕೆಪಿಸಿಸಿ ವಕ್ತಾರರಾದ ಪಿ ವಿ ಮೋಹನ್ ಆಗ್ರಹಿಸಿದ್ದಾರೆ.

ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಮರಳಲು ತೆಗೆದುಕೊಳ್ಳಬೇಕಾದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಾಡಿದ ಎಡವಟ್ಟು ಮತ್ತು ತೋರಿಸಿದ ಅಮಾನವೀಯ ನಡವಳಿಕೆ ಯ ಹಿನ್ನೆಲೆಯಲ್ಲಿ ಇದೀಗ ವಿದೇಶಗಳಲ್ಲಿ ಮತ್ತು ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಕ್ಕಿ ಹಾಕಿ ಕೊಂಡಿರುವ ವಲಸೆ ಕಾರ್ಮಿಕ ರು, ಯಾತ್ರಿಕರು, ವಿದ್ಯಾರ್ಥಿಗಳು, ಕೆಲಸವನ್ನು ಕಳೆದುಕೊಂಡ ಭಾರತೀಯರು ತವರಿಗೆ ವಾಪಾಸಾಗಲು ಎನೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಿರಿ? ವಿಮಾನಯಾನ ಸೌಕರ್ಯಗಳಿಗೆ ಎಷ್ಟು ಎರ್ ಪೋರ್ಟ್ ಗಳನ್ನು ಬಳಸುಕೊಳ್ಳುತ್ತಿರಿ? ನೌಕೆಗಳನ್ನು ಬಳಸುತ್ತೀರಾ? ಬಂದವರನ್ನು ಕ್ವಾರಂ ಟೈನ್ ನಲ್ಲಿ ಎಲ್ಲಿ, ಹೇಗೆ ಇಡುತ್ತೀರಾ? ಬರುವವರ ಸಂಖ್ಯೆ ಎಷ್ಟು? ಎಲ್ಲಾವನ್ನು ಬಹಿರಂಗ ಪಡಿಸ ಬೇಕು, ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇದಕ್ಕಾಗಿಯೇ ಪ್ರತ್ಯೇಕವಾದ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಮತ್ತು ಸಂಕಷ್ಟದಲ್ಲಿರುವ ಭಾರತೀಯರಿಗೆ ಯಾವ ಹೊರೆಯನ್ನು ಹಾಕದೆ ವಿನಾಯತಿ ನೀಡಿ ಮುಕ್ತವಾಗಿ ತರಬೇಕು ಎಂದು ಕಾಂಗ್ರೆಸ್ ಪಕ್ಷ ವು ಆಗ್ರಹ ಪಡಿಸುತ್ತದೆ.

ಹೊರಗಿನಿಂದ ಬರುವವರಿಗೆ ಕ್ವಾರಂ ಟೈನ್ ಅನ್ನು ಅಲ್ಲಿಯೇ ಮಾಡುವುದನ್ನು ಬಿಟ್ಟು ಊರಿಗೆ ಕಳುಹಿಸಿದರೆ ಅಪಾಯಕಾರಿಯಾಗ ಬಹುದು. ಶೇಕಡಾ 80 ರಷ್ಟು ಹೆಚ್ಚು ಕೊರೊನಾ ವೈರಸ್ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿರುವುದರಿಂದ ಸೂಕ್ತ ರೀತಿಯಲ್ಲಿ ಕ್ವಾರಂ ಟೈನ್ ವ್ಯವಸ್ಥೆ ಆಗಬೇಕು. ಇದಕ್ಕಾಗಿಯೇ ಒಂದು ಸರ್ವ ಪಕ್ಷಗಳ ಮತ್ತು ಇತರ ಪ್ರಮುಖ ಸಂಘ,ಸಂಸ್ಥೆಗಳ ತುರ್ತು ಸಭೆಯನ್ನು ಸರ್ಕಾರವು ಕರೆಯಬೇಕು. ಇಲ್ಲದಿದ್ದಲ್ಲಿ ನಾಳೆ ಆಗ ಬಹುದಾದ ಗಂಡಾಂತರ ಕ್ಕೆ ಸರ್ಕಾರವೇ ನೇರ ಹೊಣೆ ಎಂದು ಕಾಂಗ್ರೆಸ್ ಪಕ್ಷ ಎಚ್ಚರಿಕೆ ನೀಡುತ್ತದೆ.

ಬಿಜೆಪಿಯ ಪಕ್ಷ ವು ಪಿತೂರಿ, ಒಳಸಂಚು ಸಿದ್ದಾಂತದಲ್ಲಿ ಸಿದ್ದಹಸ್ತರು. ಊಹೆಗೆ ನಿಲುಕದ ರೀತಿಯಲ್ಲಿ ಕತೆಗಳನ್ನು ಸೃಷ್ಟಿಸಿ ಜನರನ್ನು ನಂಬುವ ರೀತಿಯಲ್ಲಿ ಕತೆಗಳನ್ನು ಹೇಳುತ್ತದೆ.ಪಾರದರ್ಶಕತೆ ಯು ಪಕ್ಷದವರ ನಡವಳಿಕೆ ಯಲ್ಲಿಯಾಗಲಿ, ಕ್ರಮದಲ್ಲಾಗಲಿ ಕಿಂಚಿತ್ತೂ ಇಲ್ಲ. ಸದಾ ಮೊಸರಲ್ಲಿ ಕಲ್ಲು ಹುಡುಕುವ ವರು. ಕಾಮಾಲೆ ಕಣ್ಣಿನವರು,ಚಾಪೆಯಲ್ಲಿ ನೂರುವವರು.ಮೊನ್ನೆ ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು ಎಲ್ಲಾ ರೀತಿಯ ಸಹಾಯ ಮಾಡುದಾಗಿ ಹೇಳೆದ್ದಾರೆ. 12000 ಮಂದಿ ಜನರಿಗೆ ಕ್ವಾರಂ ಟೈನ್ ವ್ಯವಸ್ಥೆ ಇದೆ. ಈಗಾಗಲೇ ವಿದೇಶ ಗಳಿಂದ ಬರುವವರಿಗೆ ಹೋಟೆಲ್ ಗಳಲ್ಲಿ ಪ್ರತ್ಯೇಕವಾಗಿ ನಿಲ್ಲುವ ವ್ಯವಸ್ಥೆ ಇದೆ ಅಂತ ಹೇಳಿದ್ದಾರೆ.

ಸಚಿವರಾದ ಸುರೇಶ್ ಕುಮಾರ್ ಅವರು 10,823 ಮಂದಿ ಮಾತ್ರ ಬರುತ್ತಾರೆ ಎಂದು ಹೇಳುತ್ತಾರೆ. ಬಿಜೆಪಿಯ ರಾಜ್ಯ ಅಧ್ಯಕ್ಷರು ನಳಿನಿ ಕುಮಾರ್ ಕಟೀಲು ಅವರು 4000ಮಂದಿ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಗಲ್ಪ್ ರಾಷ್ಟ್ರಗಳಿಂದ ಬರಲಿದ್ದಾರೆ ಎಂದು ಹೇಳುತ್ತಾರೆ. ಅವರೆಲ್ಲಾರಿಗೆ ಕ್ವಾರಂ ಟೈನ್ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಅವರನ್ನೆಲ್ಲಾ ಅವರವರ ಕ್ಷೇತ್ರಗಳಿಗೆ ಕಳುಹಿಸಲಾಗುವುದು. ಅಲ್ಲಿಯೇ ಅವರು ಕ್ವಾರಂ ಟೈನ್ ಮಾಡಬೇಕು ಎಂದು ಹೇಳಿದ್ದಾರೆ. ಕೊರೊನಾ ವೈರಸ್ ಲಾಕ್ ಡೌನ್ ನಿಂದ ಸಿಲುಕಿರುವ ಭಾರತೀಯರನ್ನು ಮೇ 7 ರಿಂದ ಹಂತ ಹಂತವಾಗಿ ವಿಮಾನ ಮತ್ತು ನೌಕೆಗಳ ಮೂಲಕ ಕರೆತರುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ರೋಗ ಲಕ್ಷಣಗಳು ಇಲ್ಲದವರನ್ನು ಮಾತ್ರ ಕರೆತರಲಾಗುವುದು. ಎಲ್ಲಾರನ್ನು ಕ್ವಾರಂ ಟೈನ್ ಒಳಪಡಿಸಲಾಗುವುದು. ಯಾವುದು ಉಚಿತವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಹಾಯ ಮಾಡುತ್ತೆವೆ ಎಂದು ಹೇಳುತ್ತಿದೆ. ತಾಯ್ನಾಡಿಗೆ ವಾಪಸ್ ಬರುವವರು ಆತಂಕದಲ್ಲಿದ್ದಾರೆ. ಗೊಂದಲದಲ್ಲಿದ್ದಾರೆ. ಸರಕಾರವು ಸ್ಪಷ್ಟವಾಗಿ ಯಾವುದನ್ನು ಹೇಳುತ್ತಿಲ್ಲ. ಕೆಟ್ಟ, ಬೇಜವಾಬ್ದಾರಿ ಸರ್ಕಾರ. ನಾಳೆ ಕೋವಿಡ್ ನಿಯಂತ್ರಣ ಸಾಧಿಸಲಾಗದಿದ್ದರೆ, ಉಲ್ಬಣಗೊಂಡ ರೆ ತಮ್ಮ ವೈಫಲ್ಯ ವನ್ನು ಹೊರಗಿನಿಂದ ಬಂದವರ ತಲೆಯ ಮೇಲೆ ಹಾಕುವ ಅಪಾಯ ವಿದೆ. ಅಂತ ಸಂಭವವನ್ನು ನಿರಾಕರಿಸುವಂತಿಲ್ಲ. ಬೆಳಿಗ್ಗೆ ಒಂದು ಹೇಳಿದರೆ, ಸಂಜೆ ಮತ್ತೊಂದು ಹೇಳುತ್ತಾರೆ. ಅವರವರ ಸ್ವಂತ ಹಿತಾಸಕ್ತಿ ಬಿಟ್ಟರೆ, ಇಮೇಜ್ ಅನ್ನು ಬೆಳೆಸುದು ಬಿಟ್ಟರೆ ಸಾಮಾನ್ಯ ಜನರ ಬಗ್ಗೆ ಕಾಳಜಿ ಇಲ್ಲ. ಯೋಚನೆ ಕೂಡ ಇಲ್ಲ. ಮುಖ್ಯಮಂತ್ರಿ ಯಡಿಯುರಪ್ಪನವರನ್ನು ದುರ್ಬಲ ನಾಯಕರನ್ನಾಗಿ ತೋರಿಸುವ ಸಂಚು ಈ ಕೋವಿಡ್ ಸಮಯದಲ್ಲಿ ನಡೆಯುತ್ತಿವೆ. ಯಡಿಯೂರಪ್ಪ ಒಂದು ಕ್ಷಣ ಇಲ್ಲವಾದರೆ ಈ ಸರ್ಕಾರವು ಬೀಳುತ್ತದೆ. ಯಡಿಯೂರಪ್ಪ ಅವರ ನ್ನು ಬಿಟ್ಟರೆ ಜನಪ್ರಿಯ ನಾಯಕರು ಬಿಜೆಪಿ ಯಲ್ಲಿ ಯಾರು ಇದ್ದಾರೆ.ರಾಜಕೀಯ ಬಿಟ್ಟು ,ಸರ್ಕಾರ ವು ಎಲ್ಲಾರ ಸಲಹೆ ಕೇಳಿ ಈ ಸಮಸ್ಯೆಯನ್ನು ಬಗೆಹರಿಸಿ. ಬಹುತೇಕ ಮಂದಿ ಹೊಟ್ಟೆ ಪಾಡಿಗೆ ಕೊಲ್ಲಿರಾಷ್ತ್ರಗಳಿಗೆ ಹೋಗಿದ್ದಾರೆ. ಕಷ್ಟ ಪಟ್ಟು ದುಡಿದಿದ್ದಾರೆ.ತಮ್ಮ ಕೈಲಾಗುವ ಕೊಡುಗೆಯನ್ನು ರಾಜ್ಯ ಸರ್ಕಾರ ನೀಡಿದೆ. ಈಗ ಸಂಕಷ್ಟ ದಲ್ಲಿ ಇದ್ದಾರೆ. ಈಗ ಯಾವುದೇ ಹೊರೆಯನ್ನು ಕೊಡಬಾರದು. ಮುಕ್ತವಾಗಿ ಅವರನ್ನು ಕರೆತರವುದು ಸರ್ಕಾರದ ಅದ್ಯ ಕರ್ತವ್ಯವಾಗಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯ ಪಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version