‘ಸಂಗೀತ ಭಾರತಿ ಪ್ರತಿಷ್ಠಾನದಿಂದ ಶ್ರೀ ರಾಧಾಕೃಷ್ಣ ರಾವ್, ಪೆರೋಡಿ ದಂಪತಿಗಳಿಗೆ ಸನ್ಮಾನ’

Spread the love

‘ಸಂಗೀತ ಭಾರತಿ ಪ್ರತಿಷ್ಠಾನದಿಂದ ಶ್ರೀ ರಾಧಾಕೃಷ್ಣ ರಾವ್, ಪೆರೋಡಿ ದಂಪತಿಗಳಿಗೆ ಸನ್ಮಾನ’

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಸಪ್ತಕ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ಕೊಡಿಯಾಲ್‍ಬೈಲ್‍ನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆದ “ಸ್ವರ-ಧಾರಾ” ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮದಲ್ಲಿ ಹಿಂದೂಸ್ತಾನೀ ಸಂಗೀತ ಕ್ಷೇತ್ರಕ್ಕೆ ಕಳೆದ ಎರಡು ದಶಕಗಳಿಂದ ಸಂಘಟನಾತ್ಮಕ ನೆಲೆಯಲ್ಲಿ ಅತ್ಯಮೌಲ್ಯ ಸೇವೆ ಸಲ್ಲಿಸಿರುವ ಸಂಗೀತ ಭಾರತಿ ಪ್ರತಿಷ್ಠಾನದ ಸ್ಥಾಪಕ ಕಾರ್ಯದರ್ಶಿಗಳಾದ, ಹಿರಿಯವರಾದ ಶ್ರೀ ರಾಧಾಕೃಷ್ಣ ರಾವ್, ಪೆರೋಡಿ ಮತ್ತು ಶ್ರೀಮತಿ ಲತಾ ಆರ್, ಪೆರೋಡಿ ಅವರನ್ನು ಸಂಗೀತ ಭಾರತಿ ಪ್ರತಿಷ್ಠಾನದ ಪರವಾಗಿ ಅಂತರಾಷ್ಟ್ರೀಯ ಖ್ಯಾತಿಯ ಪಂಟಟ ವಿಶ್ವ ಮೋಹನ್ ಭಟ್ ಅವರು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.

ವೇದಿಕೆಯಲ್ಲಿ ಸಂಗೀತ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷರಾದ ಶ್ರೀ ನರೇಂದ್ರ ಎಲ್.ನಾಯಕ್, ಕಾರ್ಯದರ್ಶಿಗಳಾದ ಶ್ರೀಮತಿ ಉಷಾಪ್ರಭಾ ಎನ್.ನಾಯಕ್, ಟ್ರಸ್ಟಿಗಳಾದ ಶ್ರೀಮತಿ ಶೋಭಾ ನಾಯಕ್, ಯುವ ಸಿತಾರ್ ವಾದಕ ಶ್ರೀ ಅಂಕುಶ್ ಎನ್.ನಾಯಕ್, ಎಕ್ಸ್‍ಪರ್ಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು ಮತ್ತು ಶ್ರೀ ಹೇಮಂತ್ ರಾವ್, ಪೆರೋಡಿ ಅವರು ಉಪಸ್ಥಿತರಿದ್ಧರು.

“ಸ್ವರ-ಧಾರಾ” ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮದಲ್ಲಿ ದೇಶದ ಪ್ರತಿಭಾನ್ವಿತ ಗಾಯಕರಲ್ಲೊಬ್ಬರಾದ ಮುಂಬೈನ ಶ್ರೀ ಧನಂಜಯ್ ಹೆಗ್ಡೆ ಇವರಿಂದ ‘ಶಾಸ್ತ್ರೀಯ ಗಾಯನ’ ಇವರಿಗೆ ತಬ್ಲಾದಲ್ಲಿ ಮುಂಬೈ ಶ್ರೀ ವಿಶ್ವನಾಥ್ ಶಿರೋಡ್ಕರ್ ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ನರೇಂದ್ರ ಎಲ್.ನಾಯಕ್ ಸಾಥ್ ನೀಡಿದರು ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಪಂಟಟ ವಿಶ್ವ ಮೋಹನ್ ಭಟ್ ಇವರಿಂದ ‘ಮೋಹನ್ ವೀಣಾ’ ಕಾರ್ಯಕ್ರಮ ನಡೆಯಿತು. ಇವರಿಗೆ ತಬ್ಲಾದಲ್ಲಿ ಬರೋಡದ ಖ್ಯಾತ ಕಲಾವಿದ ಶ್ರೀ ಹಿಮಾಂಶು ಮಹಾಂತರವರು ಅವರು ಸಾಥ್ ನೀಡಿದರು.


Spread the love