Home Mangalorean News Kannada News ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ – ಮೋಟಮ್ಮ

ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ – ಮೋಟಮ್ಮ

Spread the love

ಸಂಘ ಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ – ಮೋಟಮ್ಮ

ಮಂಗಳೂರು: ಸಂಘಪರಿವಾರದವರು ನರಭಕ್ಷಕರಂತೆ ದಲಿತರ ಚರ್ಮ ಸುಲಿಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಸೋಮವಾರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನೇತ್ರತ್ವದಲ್ಲಿ ದೇಶದಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ದಕ ಜಿಲ್ಲಾಧಿಕಾರಿ ಕಚೇರಿ ಎದುರು ಜರುಗಿದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

image001congress-protest-20160808-001

ದಲಿತರ ಮೇಲಿನ ದೌರ್ಜನ್ಯದ ವಿರುದ್ದ ಮಂಗಳೂರು ಜನತೆಯನ್ನು ಅಭಿನಂದಿಸಿದ ಅವರು ಗೋರಕ್ಷಣೆಯ ಹೆಸರಿನಲ್ಲಿ ದಲಿತರ ಚರ್ಮವನ್ನು ಸುಲಿಯುತ್ತಿದ್ದಾರೆ. ಗೋರಕ್ಷಕರ ಹೆಸರಿನಲ್ಲಿ ಇಂದು ದಲಿತರನ್ನು ಕೊಲ್ಲುವುದಲ್ಲದೆ ದಲಿತ ಯುವತಿಯರನ್ನು ಅತ್ಯಾಚಾರ ಮಾಡಲಾಗುತ್ತಿದೆ. ದಲಿತರ ಮೇಲೆ ಹಲ್ಲೆ ಮಾಡಲು ಸಂಘಪರಿವಾರದವರಿಗೆ ಅಧಿಕಾರ ಕೊಟ್ಟವರಾರು ಎಂದು ಪ್ರಶ್ನಿಸಿದರು.

ಧರ್ಮ ಜಾತಿ ಭಾಷೆಯ ಆಧಾರದಲ್ಲಿ ಭೇದಭಾವ ಮಾಡದೆ ಎಲ್ಲರಿಗೆ ರಕ್ಷಣೆ ನೀಡುವುದು ಕೇಂದ್ರ ಸರಕಾರದ ಜವಾಬ್ದಾರಿಯಾಗಿದ್ದು ಅದರನ್ನು ಮರೆತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ.

ಚಿಕ್ಕಮಗಳೂರು, ಶಾಂತಿಪುರದಲ್ಲಿ ಕೇವಲ 6 ಗೋವಧಾ ಕೇಂದ್ರಗಳಿತ್ತು ಆದರೆ ಸಿಟಿ ರವಿ ಶಾಸಕರಾದ ಬಳಿಕ ಇಂದು 28 ಕೇಂದ್ರಗಳು ಆಗಿವೆ. ಇದರಿಂದ ನಾವು ವಿಎಚ್ಪಿ ಮತ್ತು ಸಂಘ ಪರಿವಾರದವರ ನಕಲಿ ಮುಖವನ್ನು ಕಾಣಬಹುದು. ಯಾರು ಗೋಮಾಂಸ ತಿನ್ನುವರು ತಿನ್ನಬಹುದು ಅಂದ ಮೇಳೆ ಯಾಕೀ ದ್ವಂದ ನೀತಿ ಎಂದರು.

ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಪ್ರಧಾನಿ ಮೋದಿ ಹೇಳಿಕೆ ದಲಿತರ ಮೇಲೆ ದೌರ್ಜನ್ಯವೆಸಗುತ್ತಿರುವವರ ಮೇಲೆ ಪರಿಣಾಮ ಬೀರಬೇಕು. ದಲಿತರ ಆಹಾರ ಪದ್ದತಿಯನ್ನು ಹತ್ತಿಕ್ಕುವ ಅಧಿಕಾರ ಸಂಘಪರಿವಾರಕ್ಕಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜೆ ಆರ್ ಲೋಬೊ ಅವರು ಕಳೆದು ಹಲವು ತಿಂಗಳಿನಿಂದ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ತಲೆತಲಾಂತರಗಳಿಂದ ತುಳಿತಕ್ಕೊಳಗಾಗಿದ್ದ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಲೇ ಇದೆ. ಬಿಜೆಪಿ ಅಧಿಕಾರಕ್ಕೇರಿದ ನಂತರ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ದಲಿತರು ದೈಹಿಕವಾಗಿ ಹಿಂಸೆಗೊಳಗಾಗುತ್ತಿರುವ ಜೊತೆ ಮಾನಸಿಕವಾಗಿಯೂ ಹಿಂಸೆಗೀಡಾಗುತ್ತಿದ್ದಾರೆ ಎಂದರು.

ಪ್ರತಿಭಟನಾ ಸಭೆಯಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಎಐಸಿಸಿ ಸದಸ್ಯ ಪಿ ವಿ ಮೋಹನ್, ದಕ ಜಿಲ್ಲಾ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಸುರೇಶ್ ಬಲ್ಲಾಳ್, ಅರುಣ್ ಕೊವೆಲ್ಲೊ, ಅಶ್ವಿತ್ ಪಿರೇರಾ ಉಪಸ್ಥಿತರಿದ್ದರು.


Spread the love

Exit mobile version