Home Mangalorean News Kannada News ಸಂತೋಷ್ ಶೆಟ್ಟಿ ಪಂಜಿಮಾರಿಗೂ ಕರವೇಗೂ ಸಂಬಂಧವಿಲ್ಲ: ಕರವೇ ಜಿಲ್ಲಾಧ್ಯಕ್ಷ ಅನ್ಸಾರ್  ಸ್ಪಷ್ಟನೆ

ಸಂತೋಷ್ ಶೆಟ್ಟಿ ಪಂಜಿಮಾರಿಗೂ ಕರವೇಗೂ ಸಂಬಂಧವಿಲ್ಲ: ಕರವೇ ಜಿಲ್ಲಾಧ್ಯಕ್ಷ ಅನ್ಸಾರ್  ಸ್ಪಷ್ಟನೆ

Spread the love

ಸಂತೋಷ್ ಶೆಟ್ಟಿ ಪಂಜಿಮಾರಿಗೂ ಕರವೇಗೂ ಸಂಬಂಧವಿಲ್ಲ: ಕರವೇ ಜಿಲ್ಲಾಧ್ಯಕ್ಷ ಅನ್ಸಾರ್  ಸ್ಪಷ್ಟನೆ 

ಉಡುಪಿ: ಉಡುಪಿ ಜಿಲ್ಲೆಯ ಮತ್ತು ರಾಜ್ಯದ ಮಾಧ್ಯಮದಲ್ಲಿ ಸುದ್ದಿಯಾದ ಸಂತೋಷ್ ಶೆಟ್ಟಿ ಪಂಜಿಮಾರ್ ಲೈಂಗಿಕ ಕಿರುಕುಳ ಪ್ರಕರಣದ ವರದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೆಸರನ್ನು ಅನಾವಶ್ಯಕವಾಗಿ ಎಳೆದು ತರಲಾಗಿದ್ದು, ಸಂತೋಷ್ ಶೆಟ್ಟಿ ಪಂಜಿಮಾರ್’ಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಗಟನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ಸಂತೋಷ್ ಶೆಟ್ಟಿ ಪಂಜಿಮಾರ್, ಕರ್ನಾಟಕ ರಕ್ಷಣಾ ವೇದಿಕೆಯ ಗೌರವ ಅಧ್ಯಕ್ಷ ಎಂಬ ಸುದ್ದಿಯನ್ನು ಬಿತ್ತರಿಸಲಾಗುತ್ತಿದೆ. ಸಂತೋಷ್ ಶೆಟ್ಟಿ ಪಂಜಿಮಾರ್ ರವರು ಸಂಘಟನೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡು ಹಣ ವಸೂಲಿ ನಡೆಸುತ್ತಿದ್ದಾರೆಂಬ ಆರೋಪ ಬಂದ ಹಿನ್ನೆಲೆಯಲ್ಲಿ ಅವರನ್ನು ಸುಮಾರು 22 ತಿಂಗಳ ಹಿಂದೆ ದಿನಾಂಕ 20-09-2016 ರಂದು ಉಡುಪಿಯ ಸಮ್ಮರ್ ಪಾರ್ಕ್ ಹೋಟೇಲಿನಲ್ಲಿ, ರಾಜ್ಯ ಸಂಚಾಲಕರಾದ ಪ್ರಸನ್ನ ಕುಮಾರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಂಘಟನೆಯಿಂದ ಉಚ್ಛಾಟನೆ ಮಾಡಿ ನನ್ನನ್ನು ಜಿಲ್ಲಾಧ್ಯಕ್ಷನನ್ನಾಗಿ ನೇಮಕ ಮಾಡಲಾಗಿರುತ್ತದೆ. ನಂತರದ ದಿನಗಳಲ್ಲಿ ಅವರಿಗೂ ಸಂಘಟನೆಗೂ ಯಾವುಗೇ ಸಂಬಂಧವಿರುವುದಿಲ್ಲ. ಅವರು ಕರ್ನಾಟಕ ರಕ್ಷಣಾ ವೇದಿಕೆಯ ಗೌರವ ಅಧ್ಯಕ್ಷ ಸ್ಥಾನವನ್ನು ಹೊಂದಿಲ್ಲ ಎಂದು ಅನ್ಸಾರ್ ಮಾಹಿತಿ ನೀಡಿದ್ದಾರೆ.

ಹೆಣ್ಣು ಮಕ್ಕಳ ಮೇಲಾಗುವ ಯಾವುದೇ ರೀತಿಯ ಕಿರುಕುಳ ಮತ್ತು ದೌರ್ಜನ್ಯವನ್ನು ಕರವೇ ಕಠಿಣ ಪದಗಳಿಂದ ಖಂಡಿಸುತ್ತದೆ ಹಾಗೂ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿ ತಮ್ಮನ್ನು ಕರವೇ ಪದಾಧಿಕಾರಿ ಎಂಬ ಸೋಗಿನಲ್ಲಿ ಪರಿಚಯಿಸಿ ಅಹಿತಕರ ರೀತಿಯ ವರ್ತನೆ ಮಾಡಿದ್ದಲ್ಲಿ ನಮ್ಮನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ನೀಡಿ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಜಿಲ್ಲೆಯ ಜನರೊಂದಿಗೆ ವಿನಂತಿ ಮಾಡಿದ್ದಾರೆ.


Spread the love

Exit mobile version