ಸಂತೋಷ್ ಹತ್ಯೆ ತನಿಖೆ ಎನ್ ಐ ಎ ಗೆ ವಹಿಸಲು ಬಿಜೆಪಿ ಆಗ್ರಹ; ರಾಜ್ಯಪಾಲರಿಗೆ ಮನವಿ ಸಲ್ಲಿಕೆ
ಮಂಗಳೂರು: ಜನವರಿ 31 ರಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗಳನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಬಿಜೆಪಿ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆತಡೆಯಿಲ್ಲದೇ ಮುಂದುವರಿದಿದೆ. ಇಂತಹ ಘಟನೆಗಳು ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆಗೆಕನ್ನಡಿ ಹಿಡಿಯುತ್ತಿದೆ. 31.1.2018ರ ಮಧ್ಯರಾತ್ರಿ ಬೆಂಗಳೂರಿನ ಜೆ.ಸಿ.ನಗರ ಪೊಲೀಸ್‍ಠಾಣಾ ವ್ಯಾಪ್ತಿಯಚೆನ್ನಪ್ಪಗಾರ್ಡನ್ ಬಳಿ ಸಂತೋಷ್‍ಎನ್ನುವಯುವಕನನ್ನು ದುಷ್ರ್ಕಮಿಗಳು ಇರಿದು ಸಾಯಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ನಡೆದ ಬಿಜೆಪಿ/ಆರ್‍ಎಸ್‍ಎಸ್‍ಕಾರ್ಯಕರ್ತರ ಹತ್ಯೆ ಸರಣಿಯಲ್ಲಿಇದು 24ನೇಯದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರುಇಬ್ಬರನ್ನು ಬಂಧಿಸಿದ್ದಾರೆ.
ಈ ಪ್ರಕರಣದತನಿಖೆಯನ್ನುರಾಷ್ಟ್ರೀಯತನಿಖಾದಳ (ಎನ್‍ಐಎ)ಕ್ಕೆ ವಹಿಸಬೇಕು ಎನ್ನುವುದು ಬಿಜೆಪಿ ಒತ್ತಾಯವಾಗಿದೆ. ಈ ಸಂಬಂಧತಾವುರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡುತ್ತೇವೆ.
ನಾವು ಈ ಪ್ರಕರಣವನ್ನುಎನ್‍ಐಎತನಿಖೆಗೆ ವಹಿಸುವಂತೆಕೋರಲು ಕಾರಣಗಳಿವೆ. ಕಳೆದ ವರ್ಷಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಯಿತು. ಎನ್‍ಐಎಯು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಐವರು ಕಾರ್ಯಕರ್ತರನ್ನು ಬಂಧಿಸಿತ್ತು. ಇದಲ್ಲದೇ ಮಂಗಳೂರಿನ ಬಿ.ಸಿ.ರೋಡ್‍ನಲ್ಲಿ ನಡೆದ ಶರತ್ ಮಡಿವಾಳ್ ಹತ್ಯೆಯಲ್ಲೂ ಪಿಎಫ್‍ಐಕಾರ್ಯಕರ್ತರು ಷಾಮೀಲಾಗಿರುವುದು ಸ್ಪಷ್ಟವಾಗಿದೆ.ಪರೇಶ್ ಮೇಸ್ತಾ ಹತ್ಯೆಯೂ ಹೊನ್ನಾವರದಲ್ಲಿ ನಡೆದಿದ್ದು ಈ ಹತ್ಯೆಯ ಆರೋಪಿಗಳಿಗೂ ಉಗ್ರವಾದಿ ಸಂಘಟನೆಗಳ ಜೊತೆ ನಂಟಿರುವ ಬಗ್ಗೆ ಪ್ರಬಲ ಶಂಕೆಯಿದೆ.
ಇದೀಗ ಸ್ಪಷ್ಟವಾಗಿರುವ ಒಂದು ಸಂಗತಿಯೆಂದರೆ, ಆರ್‍ಎಸ್‍ಎಸ್/ಬಿಜೆಪಿ ಕಾರ್ಯಕರ್ತರ ಹತ್ಯೆಗೂ ಪಿಎಫ್‍ಐ/ ಎಸ್‍ಡಿಪಿಐ ಸಂಘಟನೆಗೂ ನೇರ ಸಂಬಂಧವಿದೆ. ಈ ಎರಡೂ (ಪಿಎಫ್‍ಐ/ ಎಸ್‍ಡಿಪಿಐ) ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆಯ ಪ್ರತಿರೂಪವಾಗಿದ್ದು, ಸಿಮಿ ಸಂಘಟನೆಗೆ ನೇರವಾಗಿ ಉಗ್ರವಾದಿ ಸಂಘಟನೆಗಳೊಂದಿಗೆ ನಂಟು ಇತ್ತು.
ಇದೀಗ ಜ.31ರ ರಾತ್ರಿ ನಡೆದ ಸಂತೋಷ್ ಹತ್ಯೆಯ ಆರೋಪಿಗಳೂ ಎಸ್‍ಡಿಪಿಐ ಸಂಘಟನೆಗೆ ಸೇರಿದವರುಎನ್ನುವಖಚಿತ ಮಾಹಿತಿಯಿದೆ.ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಎನ್‍ಐಎಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವುಇಂತಹ ಪ್ರಕರಣಗಳಲ್ಲಿ ಕಠಿಣಕ್ರಮಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ನಿಯಂತ್ರಿಸಬೇಕಾಗಿದೆ. ಈ ರೀತಿಯ ಪ್ರಕರಣದತನಿಖೆಯುತ್ವರಿತವಾಗಿ ಪೂರ್ಣಗೊಂಡುತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವತಾರ್ಕಿಕಅಂತ್ಯದ ಕ್ರಮಗಳಿಗೆ ಸರ್ಕಾರ ಮುಂದಾಗಬೇಕು.ರಾತ್ರಿ ಗಸ್ತು ಹೆಚ್ಚಿಸಿ ಇಂತಹ ಸಮಾಜದ್ರೋಹಿ ಕೃತ್ಯಗಳಲ್ಲಿ ತೊಡುಗುವವರ ಮೇಲೆ ನಿಗಾ ಇರಿಸಬೇಕು.
ಮೃತ ಸಂತೋಷ್ ಹತ್ಯೆ ಪ್ರಕರಣವನ್ನು ಎನ್ ಐ ಎ ತನಿಖೆಗೆ ವಹಿಸುವುದರೊಂದಿಗೆ, ಸಂತೋಷ್ ಕುಟುಂಬಕ್ಕೆ ರೂ 50 ಲಕ್ಷ ಪರಿಹಾರ ಹಾಗೂ ಆತನ ಕುಟುಂಬದ ಒರ್ವ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.