Home Mangalorean News Kannada News ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಏಸು ಸಭೆಯ ಸ್ಥಾಪಕ ಸಂತ ಇಗ್ನೇಶಿಯಸ್ ಲೊಯೊಲಾರವರ ದಿನಾಚರಣೆ

ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಏಸು ಸಭೆಯ ಸ್ಥಾಪಕ ಸಂತ ಇಗ್ನೇಶಿಯಸ್ ಲೊಯೊಲಾರವರ ದಿನಾಚರಣೆ

Spread the love

ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಏಸು ಸಭೆಯ ಸ್ಥಾಪಕ ಸಂತ ಇಗ್ನೇಶಿಯಸ್ ಲೊಯೊಲಾರವರ ದಿನಾಚರಣೆ

ಮಂಗಳೂರು: ಸಂತ ಅಲೋಶಿಯಸ್ ಪ್ರೌಢಶಾಲೆ, ಕೊಡಿಯಾಲ್‍ಬೈಲ್ ಮಂಗಳೂರು, ಶಾಲಾ ಸ್ಥಾಪಕರ ಹಬ್ಬವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾದ್ಯಾಯರಾದರೆ| ಫಾ| ಜೆರಾಲ್ಡ್ ಪುರ್ಟಾಡೊಎಸ್.ಜೆ., ಏಸು ಸಭೆಯು ಪ್ರಪಂಚದಾದ್ಯಂತ ವಿದ್ಯಾ ಸಂಸ್ಥೆಗಳ ಮೂಲಕ ಹಲವು ಶ್ರೇಷ್ಠ ವ್ಯಕ್ತಿಗಳನ್ನು ನೀಡಿದೆ. ಸಂತ ಇಗ್ನೇಶಿಯಸ್ ಲೊಯೊಲಾರವರ ಜೀವನಾದರ್ಶಗಳನ್ನು ಉದಾಹರಿಸಿ, ಅವುಗಳನ್ನು ತಮ್ಮಜೀವನದಲ್ಲಿ ಅಳವಡಿಸುವ ಸಂದೇಶ ನೀಡಿ ವಿದ್ಯಾರ್ಥಿಗಳಿಗೆ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.

ಶಾಲಾ ಸ್ಥಾಪಕರಜೀವನದ ಸಚಿತ್ರ ಮಾಹಿತಿಯನ್ನುಒದಗಿಸಲುಶಿಕ್ಷಕಿ ಸುನಿತಾಪಾೈಸ್‍ಮತ್ತು ಶಿಕ್ಷಕಿ ಲಿನೆಟ್ ಮಥಾಯಸ್ ಹಾಗೂ ವಿದ್ಯಾರ್ಥಿ ಶೊವಿನ್‍ಸಹಕರಿಸಿದರು.ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಶ್ರೀಮತಿ ಶೆರಿಲ್‍ರೊಡ್ರಿಗಸ್, ಬಹುಮಾನ ವಿಜೇತ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಪ್ರವೀಣ್ ಮೊಂತೆರೊ ಸ್ಕೌಟ್‍ರಾಜ್ಯ ಪುರಸ್ಕಾರ ವಿದ್ಯಾರ್ಥಿಗಳ ಹೆಸರು ವಾಚಿಸಿದರು, ಆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮೆಲೋಡಿಕ್ಲಬ್ ಸಂಘಟಕಿ ರೆನ್ನಿ ವಾಸ್ ಪ್ರಾರ್ಥನೆಯಲ್ಲಿ, ಗ್ಯಾವೆಲ್‍ಕ್ಲಬ್ ಸಂಘಟಕ ಲ್ಯಾನ್ಸಿಡಿ’ಸೋಜಾಕಾರ್ಯಕ್ರಮ ನಿರ್ವಹಣೆ ಹಾಗೂಡ್ಯಾನ್ಸ್‍ಕ್ಲಬ್ ಸಂಘಟಕರು ಶಲ್ಮಾ ಸಲ್ಡಾನಾ ಹಾಗೂ ಜೊವಿಟಾಡಿಸೋಜಮನರಂಜನಾ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿದರು.ಶಿಕ್ಷಕಿ ಭಾರತಿಯವರ ಸಹಕಾರದಲ್ಲಿ‘ಅಮೃತ ಘಳಿಗೆ’ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.ಶಾಲಾ ನಾಯಕಝೇಯ್ನ ಮಹಮ್ಮದ್‍ಸ್ವಾಗತಿಸಿದರು.ಉಪಮುಖ್ಯೋಪಾದ್ಯಾಯರಾದ ಶ್ರೀ.ಗೋಪಾಲಕೃಷ್ಣ ಎಸ್. ಸಹಕರಿಸಿದರು.

ಶಾಲಾ ನಾಯಕಝೇಯ್ನ್ ಮಹಮ್ಮದ್, ಉಪನಾಯಕಿನಂದಿತಾ., ಕಾರ್ಯದರ್ಶಿ ಆ್ಯರನ್ , ಉಪಸ್ಥಿತರಿದ್ದರು. ಮಾಸ್ಟರ್‍ಆ್ಯಂಡ್ರು ಹಾಗೂ ಕುಮಾರಿಜಿಯಾ ಫೆರ್ನಾಂಡಿಸ್ ನಿರ್ವಹಿಸಿದರು.ಶಿಕ್ಷಕ ಶಿಕ್ಷಕರಾದ  ಜಾನ್‍ಚಂದ್ರನ್, ಪ್ರವೀಣ್‍ ಕುಟಿನ್ಹಾ, ಸಹಕರಿಸಿದರು. ಕಾರ್ಯಕ್ರಮದ ಕೊನೆಗೆ ಸಿಹಿತಿಂಡಿ ವಿತರಿಸಲಾಯಿತು.ರಾಷ್ಟ್ರಗೀತೆಯೊಂದಿಗೆಕಾರ್ಯಕ್ರಮ ಮುಕ್ತಾಯಗೊಂಡಿತು.ಕೈಸ್ತ ವಿದ್ಯಾರ್ಥಿಗಳಿಗೆ ರೆ.ಫಾ.ಪ್ರದೀಪ್‍ಕ್ರಾಸ್ತಾರವರ ನೇತೃತ್ವದಲ್ಲಿ ಬಲಿಪೂಜೆಯನ್ನುಏರ್ಪಡಿಸಲಾಗಿತ್ತು.


Spread the love

Exit mobile version