ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ
ಮಂಗಳೂರು: ಸಂತ ಅಲೋಶಿಯಸ್ ಪೌಢಶಾಲೆ, ಕೊಡಿಯಾಲ್ಬೈಲ್, ಮಂಗಳೂರು, ಇಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ನಾಯಕ ಮಾಸ್ಟರ್ ಝೇಯ್ನ್ ಮಹಮ್ಮದ್, ಉಪನಾಯಕ ಕುಮಾರಿ ನಂದಿತಾ, ಕಾರ್ಯದರ್ಶಿ ಆ್ಯರೆನ್ ಜೀತನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಇವರನ್ನು ಗೌರವಿಸಿದ ಬಳಿಕ ಮನರಂಜನಾ ಕಾರ್ಯಕ್ರಮ ಜರುಗಿತು. ನೆಹರುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಿಕ್ಷಕ ಶಿಕ್ಷಕೇತರ ಸಿಬಂಧಿ, ನಾಟಕ, ನೃತ್ಯ ಹಾಗೂ ಆಕರ್ಷಕ ಆಟಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸಿಕೊಟ್ಟರು.
ದಿನದ ವೈಶಿಷ್ಠ್ಯವನ್ನು ಕುರಿತು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರು ರೆ|ಫಾ| ಜೆರಾಲ್ಡ್ ಫುರ್ಟಾಡೊ ಎಸ್.ಜೆ. ಉತ್ತಮ ಮೌಲ್ಯಗಳನ್ನು ಬಾಳಿನಲ್ಲಿ ರೂಢಿಸಲು ಬಾಲ್ಯಾವಸ್ಥೆಯು ಸೂಕ್ತ ಸಮಯವಾಗಿದೆ. ಉನ್ನತ ಧ್ಯೇಯ, ಗುರಿಗಳೊಂದಿಗೆ, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ಬೆಳೆಸಲು, ವಿಶಾಲ ಪ್ರಪಂಚದಲ್ಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಬೇಕೆಂಬ ಸಂದೇಶವಿತ್ತರು. ಡೂಡಲ್ ಫಾರ್ ಗೂಗಲ್ಸ್ ಸ್ಪರ್ಧೆಯಲ್ಲಿ ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ಶಾಲಾ ವಿದ್ಯಾರ್ಥಿ ಮಾಸ್ಟರ್ ಭೂಷಣ್ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಬಳಿಕ ಸಿಹಿತಿಂಡಿ ವಿತರಿಸಲಾಯಿತು. ನಂತರ ವಿದ್ಯಾರ್ಥಿ-ಶಿಕ್ಷಕರಿಗೆ ಕ್ರಿಕೆಟ್ ಪಂದ್ಯಾಟ ಜರುಗಿತು.
ಶಿಕ್ಷಕಿ ಶ್ರೀಮತಿ ರೆನ್ನಿವಾಸ್ ಹಾಗೂ ಇತರ ಶಿಕ್ಷಕರು ಪ್ರಾರ್ಥನೆಯಲ್ಲಿ ಸಹಕರಿಸಿದರು. ಶಿಕ್ಷಕ ಶ್ರೀ ಫ್ರಾನ್ಸಿಸ್ ಮಸ್ಕರೇನ್ಹಸ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಭಾರತಿ ವಂದಿಸಿದರು. ಶಿಕ್ಷಕ ಶ್ರೀ ಲ್ಯಾನ್ಸಿ ಡಿಸೋಜಾ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಶೆರಿಲ್ ಪ್ರಭು ಮನೋರಂಜನಾ ಆಟಗಳನ್ನು ನಡೆಸಿಕೊಟ್ಟರು. ಶಿಕ್ಷಕ ಶ್ರೀ ನೊಯೆಲ್ ಮಿನೇಜಸ್ ಸಂಘಟಿಸಿದರು.