ಸಂತ ಅಲೋಶಿಯಸ್ ಪ್ರೌಢ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ಸಂತ ಅಲೋಶಿಯಸ್ ಪ್ರೌಢ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸ್ಕೌಟ್ಸ್, ಎನ್.ಸಿ.ಸಿ. ವಾಯುದಳ ಹಾಗೂ ನೌಕದಳದ ಒಟ್ಟು 250 ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಕೆಡೆಟ್ ನಂದಿತಾ ಯೋಗಾಭ್ಯಾಸದ ಮುಂದಾಳತ್ವ ವಹಿಸಿದರು.
ಶಾಲಾ ಮುಖ್ಯೋಪಾಧ್ಯಾಯರು ವಂದನೀಯ ಗುರು ಜೆರಾಲ್ಡ್ ಪುರ್ಟಾಡೋರವರು ಯೋಗದ ಮಹತ್ವವನ್ನು ವಿವರಿಸುತ್ತಾ ಯೋಗದಿಂದ ಏಕಾಗ್ರತೆ, ದೃಢತೆ, ಮನಶ್ಶುದ್ಧಿ ಸಾಧ್ಯ ಎಂಬ ಸಂದೇಶವನ್ನು ನೀಡಿದರು. ಎನ್.ಸಿ.ಸಿ. ವಾಯುದಳದ ಮುಖ್ಯಸ್ಥರು ಶ್ರೀ ಸುನಿಲ್ ಲೋಬೊ, ನೌಕದಳದ ಮುಖ್ಯಸ್ಥೆ ಶ್ರೀಮತಿ ಡಯನ ಗೋವಿಯಸ್ ಹಾಗೂ ಸ್ಕೌಟ್À ಮಾಸ್ಟರ್ ಶ್ರೀ ಪ್ರವೀಣ್ ಮೊಂತೇರೊ ಉಪಸ್ಥಿತರಿದ್ದರು.
ಕೆಡೆಟ್ ರಿಶೋನ್ ಮಸ್ಕರೇನಸ್ ಕಾರ್ಯಕ್ರಮ ನಿರ್ವಹಿಸಿದರು. ಕೆಡೆಟ್ ಅನೂಪ್ ರಾವ್ ವಂದಿಸಿದರು.