ಸಂತ ಶ್ರೀ ಸೇವಾಲಾಲ್ ಜಯಂತಿ: ಒಂದೇ ತಾಯಿ ಮಕ್ಕಳಂತೆ ಬಾಳುವಂತಹ ದೇಶ ಭಾರತ :ಕವಿತಾ ಸನಿಲ್
ಮಂಗಳೂರು: ಸೇವಾಲಾಲ್‍ರಂತಹ ಮಹಾಪುರುಷರ ಜಯಂತಿಯು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ, ಪ್ರತೀ ನಿತ್ಯವು ಅವರ ಸಾಧನೆ , ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು. ಅವರು ಸಮಾಜಕ್ಕೆ ಮಾಡಿರುವ ಒಳಿತನ್ನು ನೆನಪಿಡಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಮಹಾಪೌರರು ಕವಿತಾ ಸನಿಲ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಮಹಾಪುರುಷರ/ಸಂತರ ಜಯಂತಿ ಆಚರಿಸುವ ಮೂಲಕ, ಅವರ ಸಾಧನೆ, ಸಮಾಜಕ್ಕೆ, ಸಮುದಾಯಕ್ಕೆ ನೀಡಿರುವ ಕೊಡುಗೆಯನ್ನು ನೆನೆಸುವಂತಾಗಿದೆ. ಇಂತಹ ಕಾರ್ಯಕ್ರಮದಿಂದ ನಿರ್ದಿಷ್ಟವಾದ ಸಮುದಾಯದ ಬಗೆಗ್ಗಿನ ಮಾಹಿತಿಯು ಸಿಗುತ್ತದೆ. ಬಂಜಾರ(ಲಂಬಾಣಿ) ಸಮೂದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರಿನಲ್ಲಿ ನೆಲೆಸಿರುವುದು ಸಂತಸದ ವಿಷಯ. ಭಾರತ ದೇಶ ಸರ್ವಧರ್ಮದ ದೇಶ. ಎಲ್ಲಾ ಧರ್ಮ ಜಾತಿ ಯವರು ಒಟ್ಟು ಸೇರಿ ಒಂದೇ ತಾಯಿ ಮಕ್ಕಳಂತೆ ಬಾಳುವಂತಹ ದೇಶ ಭಾರತ ದೇಶ ಎಂದು ಕವಿತಾ ಸನಿಲ್ ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು , ಬಂಜಾರ (ಲಂಬಾಣಿ) ಸಂಘ (ರಿ) ಕಾರ್ಯದರ್ಶಿ ಪ್ರೊ. ಚಂದ್ರಶೇಖರ ಅರ್. ನಾಯ್ಕ ಉಪನ್ಯಾಸ ನೀಡುತ್ತಾ ಬಂಜಾರ ಸಮುದಾಯದಲ್ಲಿ ಸ್ತ್ರೀ ಮತ್ತು ಪುರುóಷರು ಸಮಾನವಾಗಿ ದುಡಿದು ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಾರೆ. ಸಿಂದೂ ನಾಗರೀಕತೆಯ ಮೂಲದಿಂದ ಬಂದಿರುವ ಬಂಜಾರರು ಗೋ ರಕ್ಷಕರು, ವೃತ್ತಿಯಲ್ಲಿ ವರ್ತಕರು ವ್ಯಾಪರಸ್ಥರಾಗಿರುವ ಇವರು ಜನರ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿರುತ್ತಾರೆ. ಸೇವಾಲಾಲ್ ಮಹಾರಾಜ್ ಒಬ್ಬ ಮಾನವತಾ ವಾದಿಯಾಗಿದ್ದರು . ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರು, ಇವರು ತಮ್ಮ ಚಿಂತನೆ, ಕಾರ್ಯಪ್ರರ್ವತೆ, ನಂಬಿಕೆ ವಹಿವಾಟನ್ನು ಅಭಿವೃದ್ಧಿ ಪಡಿಸಿದ್ದಾರೆ. ಸೇವಾಲಾಲ್ ಒಬ್ಬ ಮಹಾನ್ ವ್ಯಕ್ತಿ ಮತ್ತು ಪವಾಡಪುರುಷ. ಅದ್ಭುತ ಸಾಧನೆಗಳನ್ನು ಮಾಡಿರುವ ಇವರು ನಿಷ್ಟಾವಂತ ವ್ಯಕ್ತಿ ಆಗಿದ್ದರು ಎಂದು ಪ್ರೊ.ಚಂದ್ರಶೇಖರ್ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಅಧ್ಯಕ್ಷ ಬಿ.ಎಚ್. ಖಾದರ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕರಾವಳ ಶ್ರೀ ಸೇವಾಲಾಲ್ ಬಂಜಾರ(ಲಂಬಾಣಿ) ಸಂಘ (ರಿ) ಅಧ್ಯಕ್ಷ ಜಯಪ್ಪ ಲಮಾಣಿ , ಬಳ್ಳಾರಿಯ ಬಂಜಾರ್ ಗೋರ್ ಧರ್ಮಪೀಠ ಶಿವಪ್ರಕಾಶ್ ಮಹಾರಾಜ್ ಸ್ವಾಮೀಜಿ. ದ.ಕ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಸಿ. ಗೋಪಾಲ್ ಕೃಷ್ಣ ಭಟ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ. ಬಿ. ಉಪಸ್ಥಿತರಿದ್ದರು.