ಸಂಪೂರ್ಣವಾಗಿ ಹದೆಗೆಟ್ಟಿರುವ MRPL ಬಜ್ಪೆ ರಸ್ತೆಯನ್ನು ದುರಸ್ತಿಗೊಲಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಜ್ಪೆ ಗ್ರಾಮ ಸಮಿತಿ ವತಿಯಿಂದ ಕೊಂಚಾರ್ ನಲ್ಲಿ ಪ್ರತಿಭಟನಾ ಸಭೆ ಜರುಗಿತು.
ಸಭೆಯ ಅದ್ಯಕ್ಷತೆಯನ್ನು ಪಕ್ಷದ ಬಜ್ಪೆ ಗ್ರಾಮ ಸಮಿತಿಯ ಅದ್ಯಕ್ಷ ನಝೀರ್ ರವರು ವಹಿಸಿದರು.
ಬಜ್ಪೆ ಗ್ರಾಮ ಪಂಚಾಯತ್ ಸದಸ್ಯೆ ಆಯೆಷಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಭಾಷಣಗಾರರಾಗಿ SಆPI ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿ ಹತ್ತು ದಿನಗಳ ಗಡುವು ನೀಡಿದ್ದು ದುರಸ್ತಿಗೊಲಿಸದೆ ಇದ್ದಲ್ಲಿ ಮುಂದಕ್ಕೆ ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಲೋಕೊಪಯೋಗಿ ಅಧಿಕಾರಿಯ ಅನುಪಸ್ಥಿತಿಯಲ್ಲಿ ಬಜ್ಪೆ ಠಾಣಾ ಸಬ್ ಇನ್ಸ್ಪೆಕ್ಟರ್ ಶಂಕರ್ ನಾಯರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯೆ ಉಮೈರತ್, SಆPI ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಅದ್ಯಕ್ಷ ಜಮಾಲ್ ಜೋಕಟ್ಟೆ ಪಕ್ಷದ ಸ್ಥಳೀಯ ನಾಯಕರಾದಂತಹ ಮನ್ಸೂರ್, ರಫೀಕ್, ದಿ ಮೋಬ್ ಇದರ ಅದ್ಯಕ್ಷ ಸಮ್ರಾನ್ ಮತ್ತು ಕೊಂಚಾರ್ ಯೂತ್ ಕೌನ್ಸಿಲ್ ಕಾರ್ಯದರ್ಶಿ ರಾಹಿಲ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಇಮ್ರಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.