ಸಂಸದರಾದ ನಳಿನ್ ಮತ್ತು ಶೋಭಾರಿಂದ ದಕ ಜಿಲ್ಲೆಯ ಸಾಮರಸ್ಯಕ್ಕೆ ಧಕ್ಕೆ; ಪ್ರೋ. ರಾಧಾಕೃಷ್ಣ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಮತ್ತು ವಿಶಿಷ್ಟವಾಗಿದ್ದು ಇದರ ಸಾಮರಸ್ಯವನ್ನು ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟೀಲ್ ಅವರು ಕೆಡಿಸಿದ್ದಾರೆ. ಇವರಿಬ್ಬರಿಂದಲೇ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬಂದಿದ್ದು, ಸೌಹಾರ್ದದ ನೆಲೆಬೀಡಾಗಿದ್ದ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಹೆಚ್ಚಿದೆ. ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಹಾಗೂ ಉಪಾಧ್ಯಕ್ಷ ಪ್ರೋ. ರಾಧಾಕೃಷ್ಣ ಆರೋಪಿಸಿದ್ದಾರೆ.
ಸೋಮವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಳಿನ್ ಕುಮಾರ್ ಅವರ ಹೆಸರಿನಲ್ಲಿ ದುರ್ಗಾಪರಮೇಶ್ವರಿ ದೇವಳ ಕಟೀಲಿನ ಹೆಸರನ್ನು ಇಟ್ಟುಕೊಂಡು ಯುವಕರನ್ನು ತಪ್ಪುದಾರಿಗೆ ಎಳೆಯುವಂತಹ ಭಾಷಣಗಳನ್ನು ನೀಡುತ್ತಾರೆ. ಅದೇ ರೀತಿ ಶೋಭಾ ಕರಂದ್ಲಾಜೆ ಅರಚುವುದಲ್ಲಿ ನಿಸ್ಸಿಮರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಇಡೀ ದೇಶವನ್ನು ಆಕರ್ಷಿಸುವ ಜಿಲ್ಲೆಯಾಗಿದ್ದು ಶಿಕ್ಷಣ, ಆರೋಗ್ಯ, ಬ್ಯಾಕಿಂಗ್ ಇನ್ನಿತರ ಉದ್ದೇಶಗಳಿಗೆ ದೇಶ ವಿದೇಶದ ಜನರು ಆಗಮಿಸುತ್ತಾರೆ. ಪ್ರತ್ಯೇಕವಾಗಿ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳು ದೇಶ ವಿದೇಶಗಳಿಂದ ಇಲ್ಲಿಗೆ ಆಗಮಿಸಿ ಶಿಕ್ಷಣ ಪಡಯುತ್ತಾರೆ.
ಆದರೆ ಇಂದು ಈ ಜಿಲ್ಲೆಯ ಸಾಮರಸ್ಯದ ವಾತಾವರಣ ಕೆಡಲು ಈ ಎರಡು ಸಂಸದರು ಕಾರಣರಾಗಿದ್ದಾರೆ. ಎರಡೂ ಸಂಸದರು ಯುವಕರನ್ನು ತಮ್ಮ ಭಾಷಣಗಳ ಮೂಲಕ ಹಿಂಸೆಗೆ ಪ್ರಚೋದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ತಮ್ಮ ಭಾಷಣದಲ್ಲಿ ಏರಿದ ಸ್ವರದಲ್ಲಿ ಮಾತನಾಡಲು ನಿಸ್ಸಿಮರಾದರೆ ಕಟೀಲ್ ದುರ್ಗಾಪರಮೇಶ್ವರಿ ಹೆಸರಿನಲ್ಲಿ ಭಾಷಣಗಳನ್ನು ಆರಂಭಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆ ಉದ್ಯಮಕ್ಕೆ ಹೆಸರುವಾಸಿಯಾಗಿದ್ದು ಇಂದು ಜಿಲ್ಲೆಯಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಕಾಡಲು ಆರಂಭಿಸಿದೆ. ದಕ್ಷಿಣ ಕನ್ನಡಕ್ಕೆ ಬಂದು ಉದ್ಯಮಗಳನ್ನು ಆರಂಭಿಸಲು ಜನರು ಹೆದರುವ ಪರಿಸ್ಥಿತ ಉಂಟಾಗಿದೆ ಎಂದರು.
ಮುಂದುವರೆದು ಮಾತನಾಡಿದ ಪ್ರೋ. ರಾಧಾಕೃಷ್ಣ ಬಿಜೆಪಿ ಪ್ರಸ್ತುತ ಸಮ್ಮಿಶ್ರ ಸರಕಾರ ಪತನಗೊಳ್ಳಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಆದರೆ ಮೇ 12 ರಂದು ನಮ್ಮ ಕಾಂಗ್ರೆಸ್ ಪಕ್ಷ ಸ್ಪಷ್ಟ ನಿರ್ಧಾರ ಪ್ರಕಟಿಸಿದ್ದು ಅದರಂತೆ ಜೆಡಿಎಸ್ ನೇತೃತ್ವದಲ್ಲಿ ಸರಕಾರ ರಚಿಸುವ ನಿರ್ಧಾರ ಮಾಡಲಾಗಿದೆ. ಸಮ್ಮಶ್ರ ಸರಕಾರ ತನ್ನ ಐದು ವರ್ಷಗಳನ್ನು ಪೋರೈಸಲಿದೆ ಎಂದರು.
ಪ್ರಧಾನಿ ಮೋದಿಯವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಪ್ರೋ ರಾಧಾಕೃಷ್ಣ, ಮೋದಿ ತನ್ನ ಹುಟ್ಟುಹಬ್ಬದ ವೇಳೆಯಾದರು ದೇಶಕ್ಕೆ ಅಚ್ಚೇ ದಿನ್ ತರುವ ವಿಶ್ವಾಸವನ್ನು ಹೊಂದಿರುವುದಾಗಿ ಹೇಳಿದರು. ಕಳೆದ 4 ವರ್ಷದ ಆಡಳಿತದಲ್ಲಿ ಎಂದೂ ಕೂಡ ಅಚ್ಚೇ ದಿನ್ ತರಲು ಸಾಧ್ಯವಾಗಿಲ್ಲ ಆದರೆ ಪೆಟ್ರೋಲ್,, ಡಿಸೇಲ್ ಬೆಲೆ ದಿನನಿತ್ಯ ಗಗನಕ್ಕೇರುತ್ತಿದೆ. ಯುಪಿಎ ಅದಿಕಾರದಲ್ಲಿದ್ದ ವೇಳೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲ 138 ಡಾಲರ್ ಇದ್ದರೆ 2014 ರಲ್ಲಿ ಅದು 34 ಡಾಲರಿಗೆ ಇಳಿಯುತು. ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗೆ 1.38 ಲಕ್ಷ ಕೋಟಿ ಸಬ್ಸಿಡಿ ನೀಡಿದಾಗ ಬಿಜೆಪಿ ಅದನ್ನೇ ದೊಡ್ಡ ವಿಷಯವನ್ನಾಗಿಸಿತು. ಆದರೆ ಮೋದೆ ಸರಕಾರ ಪೆಟ್ಟೋಲ್ ಬೆಲೆ ಏರಿಸುವದರ ಮೂಲಕ ಅಚ್ಚೇ ದಿನ್ ತಂದಿದೆ. ಕೇಂದ್ರದ ಸಚಿವರಾದ ಅರುಣ್ ಜೈಟ್ಲಿ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಸುಳ್ಳು ಹೇಳುತ್ತಿದ್ದಾರೆ. ತಾನು ದೇಶ ಬಿಡುವಾಗ ಸಚಿವ ಅರುಣ್ ಜೇಟ್ಲಿ ಜೊತೆ ಮಾತಾನಾಡಿದ್ದೆ ಎಂದು ವಿಜಯ್ ಮಲ್ಯ ಹೇಳುತ್ತಿದ್ದಾರೆ. ಇಬ್ಬರು ರಾಜಕಾರಣಿಗಳು ಪರಸ್ಪರ ಮುಖಾಮುಖಿಯಾದಾಗ ರಾಜಕಾರಣದ ಬಗ್ಗೆ ಮಾತನಾಡುತ್ತಾರೆಯೇ ವಿನಃ ಮನೆಯ ವಿಷಯಗಳನ್ನಲ್ಲ. ಅದೇ ರೀತಿ ಲಲಿತ್ ಮೋದಿ ತನಗೆ ಸಚಿವ ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಬಗ್ಗೆ ಮೋದಿ ಭಕ್ತರ ಪ್ರತಿಕ್ರಿಯೆ ಏನು ಎಂದು ಪ್ರೋ. ರಾಧಾಕೃಷ್ಣ ಪ್ರಶ್ನಿಸಿದರು.
ರಾಜ್ಯ ಸರಕಾರ ರೈತರ ಸಾಲಮನ್ನಾಕ್ಕೆ ಹಣ ಸರಿದೂಗಿಸುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ 2 ರೂಪಾಯಿ ಸೆಸ್ ವಿಧಿಸಿತ್ತು ಆದರೆ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು 2 ರೂಪಾಯಿ ಇಳಿಸಲು ನಿರ್ಧರಿಸಿದ್ದಾರೆ. ಬಿಜೆಪಿ ಸರಕಾರ ಇದ್ದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ.
ಕಾಂಗ್ರೆಸ್ ನಾಯಕ ಕೋಡಿಜಾಲ್ ಇಬ್ರಾಹಿಂ ವಿನಯ್ ರಾಜ್, ಭಾರತಿ ಮತ್ತು ನೀರಜಪಾಲ್ ಉಪಸ್ಥಿತರಿದ್ದರು