ಸಂಸದರೇ ನ್ಯಾಯ ಸಮ್ಮತ ಶಾಂತಿಯುತ ಹೋರಾಟಕ್ಕೆ ಬೆಲೆ ಇಲ್ಲವೆ: ಸುಶೀಲ್ ನೊರೊನ್ಹ
ಸುರತ್ಕಲ್: ಸುರತ್ಕಲ್ ಟೋಲ್ಗೇಟ್ ಮುಚ್ಚಲು ನಡೆಯುತ್ತಿರುವ ಅನಿರ್ದಿಷ್ಟವಾದಿ ಹಗಲು ರಾತ್ರಿ ಧರಣಿಯು ಎಂಟನೇ ದಿನಕ್ಕೆ ಸಾಗುತ್ತಿದ್ದು, ಜೆಡಿಎಸ್ ಜಿಲ್ಲಾ ಪಧಾಧಿಕಾರಿಗಳು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ನೇತೃತ್ವದಲ್ಲಿ ಹೋರಾಟ ಸಮಿತಿಯ ಸಂಚಾಲಕರಾದ ವಿಜಯ್ ಕುಮಾರ್ ಶೆಟ್ಟಿ, ಮುನೀರ ಕಾಟಿಪಳ್ಳ ರವರನ್ನು ಭೇಟಿಮಾಡಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲವನ್ನು ವ್ಯಕ್ತಪಡಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸುಶೀಲ್ ನೊರೊನ್ಹರವರು ಕಳೆದ ಒಂದು ವಾರದಿಂದ ನ್ಯಾಯ ಸಮ್ಮತ ಶಾಂತಿಯುತ ಹೋರಾಟ ನಡೆಯುತ್ತಾ ಬಂದಿದ್ದು ಇದಕ್ಕೆ ಜಿಲ್ಲೆಯ ಸಂಸದರು ಮಾನವೀಯತೆ ದೃಪ್ಷಿಯಲ್ಲಿ ಭೇಟಿ ಕೊಟ್ಟು ನ್ಯಾಯವನ್ನು ದೊರಕಿಸಿ ಕೊಡದಿರುವುದು ಬೇಸರದ ವಿಷಯ. ಟೋಲ್ ಗೇಟ್ ರದ್ದಾತಿಗೊಸ್ಕರ ನ್ಯಾಯ ಸಮ್ಮತ ಶಾಂತಿ ಯುತ ಹೋರಾಟ ನಡೆಸಿದಕ್ಕೆ ಗೌರವ ಕೊಡದೆ ಅದೇ ಜನರು ಅಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದು ಹೋರಾಟ ನಡೆಸಿದಲ್ಲಿ ಆಗುವ ಅನಾಹುತಕ್ಕೆ ಸಂಸದರೇ ಕಾರಣರಾಗುತ್ತಾರೆ.
ಪ್ರಚಾರಗೋಸ್ಕರ ಅಕ್ಟೋಬರ್ 30ರ ನಂತರ ಟೋಲ್ಗೇಟ್ ಶುಲ್ಕ ಸಂಗ್ರಹ ಮಾಡುವುದಿಲ್ಲ, ಗುತ್ತಿಗೆ ನವೀಕರಣ ಮಾಡದ ಹಾಗೆ ಪತ್ರ ಬರೆದಿದ್ಧೇನೆ ಎಂದು ಹೇಳಿದರು. ಇದೀಗ ಟೋಲ್ ಗೇಟ್ ಬಂದ್ ಆಗುವ ಲಕ್ಷಣ ಕಾಣುವುದಿಲ್ಲ, ಸಂಸದರು ಬರೆದ ಪತ್ರ ಕೇಂದ್ರ ಸರಕಾರಕ್ಕೆ ಆಗಿರದೇ ಅದು ಗುತ್ತಿಗೆದಾರರಿಗೆ ನವೀೀಕರಣ ಗೊಂಡ ಪತ್ರವೊ ಎಂದು ಜನ ಸಾಮಾನ್ಯರು ಮಾತನಾಡುತ್ತಾರೆ. ಮಾತ್ರವಲ್ಲ ಸಂಸದರ ಮೌನತೆಯು ಹಲವು ಪ್ರಶ್ನೆಗಳು ಜನ ಸಾಮಾನ್ಯರಲ್ಲಿ ಉದ್ಬವಿಸಿದೆ. ನಿಜವಾಗಿಯೂ ಜಿಲ್ಲೆಯ ಜನ ಸಾಮಾನ್ಯರ ಪ್ರತಿನಿದಿಯಾಗಿದ್ದರೆ ಜನ ಸಾಮಾನ್ಯರೊಡನೆ ಹೋರಾಟಕ್ಕೆ ಕೈಗೂಡಿಸಿ ನ್ಯಾಯವನ್ನು ದೊರಕಿಸಿ ಕೊಡಿ ಎಂದು ಸವಾಲು ಹಾಕಿದರು.
ಜೆಡಿಎಸ್ ರಾಜ್ಯ ಮೀನುಗಾರಿಕಾ ಘಟಕ ಅದ್ಯಕ್ಷ ರತ್ನಾಕರ ಸುವರ್ಣ ರವರು ಮಾತನಾಡಿ 10 ವರುಷಗಳ ಸಂಸದರ ಸಾಧನೆ ಶೂನ್ಯ ಎಂದು ಹೇಳಿದರು.
ಇನ್ನೊರ್ವ ಪಕ್ಷದ ನಾಯಕ ಪ್ರಕಾಶ್ ಗೊಮ್ಸ್ ಮಾತನಾಡಿ ಈ ಜಿಲ್ಲೆಯಲ್ಲಿ ನಡೆಯುವ ಹಗಲು ದರೋಡೆಯು ಸಂಸದರಿಗೆ ಕಾಣುವುದಿಲ್ಲವೇ ಅವರು ಇದಕ್ಕೆ ಪ್ರೋತ್ಸಹವನ್ನು ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಹೇಳಿದರು.
ಜೆಡಿಎಸ್ ಪದಾಧಿಕಾರಿಗಳಾದ ಲತೀಫ್ ಒಳಚ್ಚಿಲ್, ಉಪೇಂದ್ರ, ವಿನ್ಸೆಂಟ್ ಡಿಸೋಜ, ಸುಧೀರ್ ಬಜಾಲ್, ಪ್ರಾನ್ಸಿಸ್ ಫೆರ್ನಾಂಡಿಸ್, ರಘವೀರ್ ಶೆಟ್ಟಿ, ಅಹ್ಮದ್ ಬಾವಾ, ರಘು ಮೊದಲಾದವರು ಪಾಲ್ಗೊಂಡಿದರು.