ಸಂಸದ ನಳಿನ್ ಪ್ರಚೋದನಕಾರಿ ಭಾಷಣ : ಪಾಪ್ಯುಲರ್ ಫ್ರಂಟ್ ಖಂಡನೆ
ಮಂಗಳೂರು: ಕೊಣಾಜೆಯ ಕಾರ್ತಿಕ್ ರಾಜ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಜನವರಿ 1ರಂದು ಬೆಳಿಗ್ಗೆ ಹಿಂದೂ ಹಿತರಕ್ಷಣಾ ವೇದಿಕೆ ಪಜೀರು ಉಳ್ಳಾಲ ವತಿಯಿಂದ ಕೊಣಾಜೆ ಠಾಣೆಯ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ದ.ಕ ಜಿಲ್ಲೆಯ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಭಾಷಣಗೈದು ಕೊಣಾಜೆಯಲ್ಲಿ ಇತ್ತೀಚೆಗೆ ನಡೆದ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ಧ ಎಂಬ ಪ್ರಚೋದನಕಾರಿ ಭಾಷಣ ಮಾಡಿದರು. ಜಿಲ್ಲೆಯಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಿ ಕೋಮುದ್ವೇಷ ಹರಡುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರೊರ್ವರು ಅಭಿವೃದ್ದಿ, ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ದ್ವೇಷ ರಾಜಕೀಯವನ್ನು ಹರಡುವುದು ತರವಲ್ಲ.ಇದಂತೂ ಒಟ್ಟು ಜಿಲ್ಲೆಯ ಲಕ್ಷಾಂತರ ಜನರನ್ನು ಅಪಮಾನಿಸುದಕ್ಕೆ ಸಮ.ಮಾತ್ರವಲ್ಲ ಇದು .ಬಿಜೆಪಿಯ ಅಸಲಿ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ.ಇಂತಹ ಅಪ್ರಭುದ್ದ ಜನಪ್ರತಿನಿಧಿಯನ್ನು ಕಳಿಸಿದ್ದು ಜಿಲ್ಲೆಯ ದುರದೃಷ್ಟದೆನ್ನದೆ ವಿಧಿಯಿಲ್ಲ.ಕಾನೂನಿನ ಮುಂದೆ ಎಲ್ಲಾರೂ ಸಮಾನರು ಅನ್ನೋದನ್ನು ಜಿಲ್ಲೆಯ ಪೊಲೀಸ್ ಇಲಾಖೆ ಸಾಬೀತು ಪಡಿಸಬೇಕಾಗಿದೆ. ಮತ್ತು ಪ್ರಚೋದನಕಾರಿ ಭಾಷಣ ಮಾಡಿದ ಸಂಸದರ ಮೇಲೆ ಕ್ರಮಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲೆ ಅಗ್ರಹಿಸಿದೆ.