ಸಚಿವರು, ಸಂಸದರು, ಶಾಸಕರು ಸೇರಿದಂತೆ ಗಣ್ಯರಿಂದ ಮಾರ್ಚ್ – 22 ಸಿನಿಮಾ ವೀಕ್ಷಣೆ

Spread the love

ಸಚಿವರು, ಸಂಸದರು, ಶಾಸಕರು ಸೇರಿದಂತೆ  ಗಣ್ಯರಿಂದ ಮಾರ್ಚ್ – 22 ಸಿನಿಮಾ ವೀಕ್ಷಣೆ 

ಮಂಗಳೂರು : ಗಣೇಶ ಚಥುರ್ಥಿಯ ಶುಭದಿನದಂದು ರಾಜ್ಯಾದ್ಯಂತ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಮಾರ್ಚ್ 22’ ಕನ್ನಡ ಸಿನೆಮಾವನ್ನು ಸಚಿವರು, ಸಂಸದರು, ಶಾಸಕರು ಸೇರಿದಂತೆ ಹಲವಾರು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಕ್ಮೇ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ “ಮಾರ್ಚ್ 22′ ಕನ್ನಡ ಸಿನೆಮಾವನ್ನು ಶನಿವಾರ ನಗರದ ಪಿವಿಆರ್ ಟಾಕೀಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಾ..ಎಂ ವೀರಪ್ಪ ಮೊಯ್ಲಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ’ಸೋಜ, ಮಂಗಳೂರು ಉತ್ತರ ( ಸುರತ್ಕಲ್) ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ, ಮಂಗಳೂರು ಮೇಯರ್ ಕವಿತಾ ಸನೀಲ್, ದುಬೈಯ ಖ್ಯಾತ ಉದ್ಯಮಿ, ಅನಿವಾಸಿ ಭಾರತೀಯ ಬಿ.ಆರ್.ಶೆಟ್ಟಿಯವರ ಸಹೋದರ ಸಚ್ಚಣ್ಣ, ದುಬೈ ಉದ್ಯಮಿ ಪ್ರಾಂಕ್ ಫೆರ್ನಾಂಡಿಸ್, ಪತ್ತನಾಜೆ ತುಳು ಚಿತ್ರದ ನಿರ್ಮಾಪಕ, ನಿರ್ದೇಶಕ, ಮುಂಬಾಯಿಯ ಖ್ಯಾತ ರಂಗನಟ ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಕಿದಿಯೂರ್ ಹೋಟೆಲ್ ಉಡುಪಿ ಇದರ ಮಾಲಕ ಭುವನೇಂದ್ರ ಸುವರ್ಣ ಕಿದಿಯೂರ್, ದೈಜಿ ವರ್ಲ್ಡ್‌ನ ಮುಖ್ಯಸ್ಥರಾದ ವಾಲ್ಟರ್ ನಂದಳಿಕೆ, ನಮ್ಮ ಟಿವಿಯ ನಿರ್ದೇಶಕ ಡಾ. ಶಿವಶರಣ್, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮನಪಾ ಸದಸ್ಯರು ಸೇರಿದಂತೆ ನಗರದ ಹಲವಾರು ಗಣ್ಯರು ವೀಕ್ಷಿಸಿ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿ, ಚಿತ್ರದ ಯಶಸ್ಸಿಗೆ ಶುಭಕೋರಿದರು.

ಚಿತ್ರದ ಬಗ್ಗೆ ಗಣ್ಯರ ಅನಿಸಿಕೆಗಳು..

ಸಾಮಾರಸ್ಯ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಈ ಒಂದು ಸಿನಿಮಾ ಜನಸಾಮಾನ್ಯರಿಗೆ ಜಾತಿ, ಧರ್ಮ, ಭಾಷೆಗಿಂತ ಮನುಷ್ಯತ್ವ ಮೇಲು ಎಂಬುವುದನ್ನು ತೋರಿಸಿಕೊಟ್ಟಿದೆ. ನಮ್ಮ ಜಿಲ್ಲೆಯಲ್ಲಿ ಸಾಮಾರಸ್ಯಕ್ಕೆ ತೊಡಕು ಕಾಣುತ್ತಿರುವ ಈ ದಿನಗಳಲ್ಲಿ ಸಾಮಾರಸ್ಯಕ್ಕೆ ಹತ್ತಿರವಾಗುತ್ತಿರುವ ಈ ಸಿನಿಮಾ ಯುವಕರಿಗೆ ಮಾರ್ಗದರ್ಶಕವಾಗಿದೆ. ಚಿತ್ರದಲ್ಲಿ ಪಾತ್ರ ವಹಿಸಿರುವ ಎಲ್ಲಾ ನಟರ ಅಧ್ಬುತ ನಟನಾ ಕೌಶ್ಯಲದೊಂದಿಗೆ, ನಿರ್ಮಾಪಕರು ಹಾಗೂ ನಿರ್ದೇಶಕರ ಕಾಳಾಜಿ ಹಾಗೂ ಕಠಿಣ ಪರಿಶ್ರಮದಿಂದ ಬಹಳ ಚೆನ್ನಾಗಿ ಮೂಡಿಬಂದಿರುವ ಈ ಸಿನಿಮಾವನ್ನು ಯುವಕರು ಸೇರಿದಂತೆ ಹೆಚ್ಚು ಹೆಚ್ಚು ಜನರು ನೋಡುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು :ಬಿ.ರಮನಾಥ ರೈ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ.

ದೇಶದ ಕೆಲವು ಭಾಗಗಳಲ್ಲಿ ಕಂಡು ಬರುತ್ತಿರುವ ನೀರಿನ ಸಮಸೈ ಬಗ್ಗೆ ಚಿತ್ರದಲ್ಲಿ ಎಳೆ ಎಳೆಯಾಗಿ ಬಿಡಿಸಿಕೊಡಲಾಗಿದೆ. ಜೊತೆಗೆ ಜಾತಿ,ಮತಕ್ಕಿಂತ ಬದುಕು ಮುಖ್ಯ ಎಂಬುವುದನ್ನು ಸಾರುವ ಮೂಲಕ ಜನರು ಸಾಮಾರಸ್ಯದಿಂದ ಬದುಕುವುದಕ್ಕೆ ಉತ್ತಮ ಸಂದೇಶವನ್ನು ನೀಡಿದೆ. ಜನರ ಬದುಕಿಗೆ ಹತ್ತಿರವಾಗುವ ಮೂಲಕ ಅತ್ಯುತ್ತಮವಾಗಿ ಮೂಡಿ ಬಂದಿರುವ ಈ ಚಿತ್ರವನ್ನು ಪ್ರತಿಯೊಬ್ಬರು ನೋಡುವ ಅಗತ್ಯವಿದೆ. ಚಿತ್ರ ಯಶಸ್ಸು ಕಾಣುವ ಮೂಲಕ ನಿರ್ಮಾಪರು ಹಾಗೂ ನಿರ್ದೇಶಕರ ಶ್ರಮ ಸಾರ್ಥಕವಾಗಲಿ -ಡಾ..ಎಂ ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ.

ಮಾರ್ಚ್-೨೨ ಚಲನ ಚಿತ್ರ ಅತ್ಯೂತ್ತಮವಾಗಿ ಮೂಡಿ ಬಂದಿದೆ. ಚಿತ್ರ ನೋಡಿ ತುಂಬಾ ಖುಷಿಯಾಯಿತು. ಇದು ಎಲ್ಲರು ನೋಡಲೇ ಬೇಕಾದ ಚಿತ್ರ, ಒಂದು ಕಡೆ ನೀರಿನ ಮಹತ್ವ ಏನು ಎಂಬುದರ ಬಗ್ಗೆ ವಿಸ್ತಾರವಾಗಿ ತಿಳಿಸಲಾಗಿದೆ. ಇನ್ನೊಂದೆಡೆ ಹಿಂದೂ, ಮುಸ್ಲಿಂ ಭಾಂಧವರು ಯಾವ ರೀತಿ ಇರಬೇಕು, ಸೌಹಾರ್ಧತೆಯಿಂದ ಯಾವ ರೀತಿ ಬಾಳ ಬೇಕು ಎಂಬುದನ್ನು ಚಿತ್ರದ ಮೂಲಕ ಅಧ್ಬುತವಾಗಿ ತೋರಿಸಲಾಗಿದೆ. ಆದರಿಂದ ಪ್ರತಿಯೊಬ್ಬರು ಈ ಚಿತ್ರವನ್ನು ನೋಡಬೇಕು ಎಂದು ವಿನಂತಿಸುತ್ತಿದ್ದೇನೆ. ಕವಿತಾ ಸನೀಲ್, ಮಂಗಳೂರು ಮೇಯರ್.

ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿಗಳ ಮಧ್ಯೆ ಧ್ವೇಷ ಮೂಡುವಂತಹ ಚಿತ್ರಣವಿರುವ ಈ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ತರುವಂತಹ ಉತ್ತಮ ಕಥೆ,ಚಿತ್ರಕಥೆ ಇರುವಂತಹ ಮಾರ್ಚ್ ೨೨ ಚಲನ ಚಿತ್ರ ಬಿಡುಗಡೆಗೊಂಡಿದೆ. ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು ಸಮಾಜದಲ್ಲಿ ಶಾಂತಿ ಸಾಮಾರಸ್ಯ ಮೂಡಿಸುವಲ್ಲಿ ಸಹಕಾರಿಯಾಗುವಂತಹ ಅತ್ಯೂತ್ತಮ ಚಿತ್ರವೊಂದನ್ನು ಜನತೆಗೆ ನೀಡಿದ್ದಾರೆ. ಹುಟ್ಟು ಸಾವುಗಳ ಮಧ್ಯೆ ಶಾಂತಿ ಕಾಪಾಡುವ ಮೂಲಕ ತಮ್ಮ ತಮ್ಮ ಧ್ರಮವನ್ನು ಪ್ರೀತಿಸಿ, ಇತರ ಧರ್ಮವನ್ನು ಗೌರವಿಸ ಬೇಕು ಎಂಬ ಉತ್ತಮ ಸಂದೇಶವನ್ನು ಸಾರಿರುವ ಈ ಚಿತ್ರ ನಿಜಕ್ಕೂ ಬಹಳ ಚೆನ್ನಾಗಿ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಈ ಚಿತ್ರದ ಮೂಲಕ ಜನರು ತಮ್ಮನ್ನು ತಪ್ಪು ದಾರಿಗೆ ಎಳೆಯುವ ಜಾತಿವಾದವನ್ನು ತೊಡೆದುಹಾಕಿ ಜಾತ್ಯಾತಿತೆಯ ಮೂಲಕ ಒಂದಾಗಿ ಬಾಳುವ ಸಂದೇಶ ಸಾರ್ಥವಾಗಿದೆ. ಎಲ್ಲರೂ ಚಿತ್ರವನ್ನು ವೀಕ್ಷಿಸಿ, ಪ್ರೋತ್ಸಾಹಿಸಿ : ಮೊಯ್ದಿನ್ ಬಾವ, ಮಂಗಳೂರು ಉತ್ತರ ( ಸುರತ್ಕಲ್) ವಿಧಾನ ಸಭಾ ಕ್ಷೇತ್ರದ ಶಾಸಕ

ನೆಲ,ಜಲ,ವಾಯು ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದಂತಹ ವಸ್ತು. ನೆಲವಿಲ್ಲದೇ ಮನುಷ್ಯ ನಿಲ್ಲಲ್ಲು ಸಾಧ್ಯವಿಲ್ಲ, ವಾಯುವಿಲ್ಲದೇ ಮನುಷ್ಯ ಶ್ವಾಸ ತೆಗೆಯಲು ಸಾಧ್ಯವಿಲ್ಲ, ಅದೇ ರೀತಿ ಜಲವಿಲ್ಲದೇ ಮನುಷ್ಯ ಬದುಕಲಿಕ್ಕೆ ಸಾಧ್ಯವಿಲ್ಲ, ಪ್ರತಿಯೊಬ್ಬರಿಗೂ ನೀರು ಅವಶ್ಯಕವಾಗಿಬೇಕು. ಈ ನೀರಿನ ಬವಣೆಯನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸುವ ಮೂಲಕ ಸಮಾಜಕ್ಕೆ ಒಂದು ಉತ್ತಮ ಚಿತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ ನಿರ್ಮಾಪಕ ಹರೀಶ್ ಶೇರಿಗಾರ್ ಹಾಗೂ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು. ಪ್ರತಿಯೊಬ್ಬರಿಗೂ ಅವಶ್ಯಕವಾಗಿ ಬೇಕಾಗಿರುವ ನೀರನ್ನು ಉಳಿಸುವಲ್ಲಿ ತಮ್ಮ ಪಾತ್ರ ಏನೆಂಬುವುದನ್ನು ತಿಳಿಸಿರುವ ಈ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ : ಪ್ರಾಂಕ್ ಫೆರ್ನಾಂಡಿಸ್ – ಚಿತ್ರ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ

ದೂರದ ಕೊಲ್ಲಿ ರಾಷ್ಟ್ರದಲ್ಲಿದ್ದುಕೊಂಡು ಧರ್ಮದ ಬಗ್ಗೆ ವಿಶೇಷ ಕಾಳಾಜಿ ಇಟ್ಟುಕೊಂಡು, ಈ ದೇಶದ ಸಮಸ್ಯೆಗಳ ಬಗ್ಗೆ ಅಧ್ಯಯಾನ ಮಾಡಿಕೊಂಡು ಹರೀಶ್ ಶೇರಿಗಾರ್ ಅವರು ಸಮಾಜಕ್ಕೆ ಒಂದು ಉತ್ತಮ ಸಂದೇಶವಿರುವಂತಹ ಅದ್ಭುತವಾದ ಚಿತ್ರವನ್ನು ಮಾಡಿದ್ದಾರೆ. ದೇಶಕ್ಕೆ ಬೇಕಾದಂತಹ ಒಂದು ಒಳ್ಳೆಯ ಕನ್ನಡ ಸಿನಿಮಾ ಇದಾಗಿದ್ದು, ಪ್ರಶಸ್ತಿಗೆ ಅರ್ಹವಾದ ಚಿತ್ರವಾಗಿದೆ. ಖಂಡಿತವಾಗಿಯೂ ಈ ಚಿತ್ರಕ್ಕೆ ಪ್ರಶಸ್ತಿ ಸಿಗಬೇಕು. ಎಲ್ಲಾ ದೃಷ್ಠಿ ಕೋನದಲ್ಲೂ ಯಶಸ್ಸನ್ನು ಕಂಡಂತಹ ಚಿತ್ರ. ದೇಶದ ಅತೀ ದೊಡ್ಡ ಸಮಸ್ಯೆಗಳ ಬಗ್ಗೆ ಚಿತ್ರಕಥೆ ಹೊಂದಿರುವ ಸೂಕ್ಷ್ಮ ವಿಚಾರವನ್ನಳಗೊಂಡಂತಹ ಇಂತಹ ಒಂದು ಚಿತ್ರ ಮಾಡಲು ಎದೆಗಾರಿಕೆ ಬೇಕು. ಇದನ್ನು ಹರೀಶ್ ಶೇರಿಗಾರ್ ಮಾಡಿ ತೋರಿಸಿದ್ದಾರೆ. ಚಿತ್ರಕ್ಕೆ ಯಸಸ್ಸು ಸಿಗಲಿ : ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಮುಂಬಾಯಿಯ ಖ್ಯಾತ ರಂಗನಟ, ಪತ್ತನಾಜೆ ತುಳು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ.

ಮಾರ್ಚ್ ೨೨ ಚಿತ್ರದ ಮೂಲಕ ನೀರಿನ ಮಹತ್ವದ ಬಗ್ಗೆ ಸಮಾಜಕ್ಕೆ ಉತ್ತಮ ಮಾಹಿತಿಯನ್ನು ನೀಡಲಾಗಿದೆ. ಜಾತಿ, ಧರ್ಮಕ್ಕಿಂತ ಬದುಕು ಮುಖ್ಯ ಎಂಬುವುದನ್ನು ಸಾರಿರುವ ಈ ಚಿತ್ರ ನಾನು ಕಂಡಂತಹ ಮಾದರಿ ಚಿತ್ರವಾಗಿದೆ. ಇಂದಿನ ಕಾಲಘಟದಲ್ಲಿ ದೇಶ ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿ ತೋರಿಸಿರುವ ಈ ಚಿತ್ರಕ್ಕೆ ಸರಕಾರ ವಿಶೇಷ ರಿಯಾಯಿತಿಯನ್ನು ನೀಡಬೇಕು. ಸಮಾಜಕ್ಕೆ ಉತ್ತಮ ಸಂದೇಶ ಸಾರಿರುವ ಈ ಚಿತ್ರವನ್ನು ಎಲ್ಲರೂ ಪ್ರೋತ್ಸಾಹಿಸಿ : ಭುವನೇಂದ್ರ ಸುವರ್ಣ ಕಿದಿಯೂರ್, ಮಾಲಕರು – ಹೋಟೆಲ್ ಕಿದಿಯೂರ್ ಉಡುಪಿ.

‘ಮಾರ್ಚ್ 22’ ಚಿತ್ರ ಸಮಾಜಕ್ಕೆ ಹೊಸ ಮತ್ತು ಅರ್ಥಪೂರ್ಣ ಸಂದೇಶ ನೀಡಲು ಹೊರಟಿದ್ದು, ಸಾಮಾಜಿಕ ಕಳಕಳಿಯುಳ್ಳ, ಸಮಾಜದಲ್ಲಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬಲ್ಲ, ಸದಭಿರುಚಿಯ ಸಿನೆಮಾವಾಗಿದೆ. ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇರದಷ್ಟು ಧರ್ಮಗಳು, ಜಾತಿಗಳು ಭಾರತದಲ್ಲಿವೆ. ವೈವಿಧ್ಯಮಯ ಧಾರ್ಮಿಕ ನಂಬಿಕೆಗಳ ಹೊರತಾಗಿಯೂ, ಇಲ್ಲಿ ಜನರು ಬಹಳ ಅನ್ಯೋನ್ಯತೆಯಿಂದ ಮತ್ತು ಸ್ನೇಹದಿಂದ ಬದುಕುತ್ತಿದ್ದಾರೆ. ಭಾರತೀಯೇತರ ಪ್ರಜೆ ಊಹಿಸಲು ಆಗದ ರೀತಿಯ ಸೌಹಾರ್ದತೆಯ ಬದುಕು ಇಲ್ಲಿ ಕಾಣಬಹುದು. ಆದಾಗ್ಯೂ ಹಿಂದೂಗಳು ಮತ್ತು ಮುಸ್ಲೀಮರ ನಡುವಿನ ಸಂಬಂಧಕ್ಕೆ ಕೆಲವೊಮ್ಮೆ ಕೆಲವು ಪ್ರಚೋದನೆಗಳಿಂದಾಗಿ ಧಕ್ಕೆ ಬಂದಿರುವುದು ಕೂಡ ಸತ್ಯ. ದೇಶದ ಇತಿಹಾಸದಲ್ಲಿ ಇದು ದೊಡ್ಡ ಗಾಯದಂತಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರು ಈ ಕಹಿ ನೆನಪು ಹಾಗೆಯೇ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ‘ಮಾರ್ಚ್ 22’ ಸಿನೆಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ವಾಸ್ತವಿಕ ಪರಿಕಲ್ಪನೆಯೊಂದಿಗೆ ಅದ್ಭುತ ಕಥೆಯೊಂದನ್ನು ಜನ ಎಂದೆಂದಿಗೂ ನೆನಪಿಡುವಂತೆ ಮಾಡುವ ಪ್ರಯತ್ನವನ್ನು ಮಾಡಿದ್ದೇವೆ ; ಹರೀಶ್ ಶೇರಿಗಾರ್ – ಚಿತ್ರದ ನಿರ್ಮಾಪಕರು.

ಕುಟುಂಬ ಸಮೇತರಾಗಿ ನೋಡ ಬಹುದಾದ ಚಿತ್ರ :

ಉದ್ಯಮಿ ಹರೀಶ್ ಶೇರಿಗಾರ್ ಅವರ ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ನಿರ್ಮಿಸಲಾಗಿರುವ ‘ಮಾರ್ಚ್ 22’ ಸಿನೆಮಾ ಜೀವಜಲದ ಮಹತ್ವ ಮತ್ತು ಜಾಗೃತಿಯ ಸಂದೇಶ ಸಾರುವ” ಮೂಲಕ ಭಾರಿ ಸುದ್ದಿ ಮಾಡಿದೆ. ಕುಟುಂಬ ಸಮೇತರಾಗಿ ನೋಡ ಬಹುದಾದ ಸದಭಿರುಚಿಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈ ಹಾಡು ಈಗಾಗಲೇ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಜೊತೆಗೆ ನಿರ್ಮಾಪಕ ಹರೀಶ್ ಶೇರಿಗಾರ್ ಹಾಗೂ ಅಕ್ಷತಾ ರಾವ್ ಹಾಡಿರುವ “ಪ್ರೀತಿಗೊಂದು ಸಲಾಂ ಅಂತ ಮನ್ಸು ಅಂತೈತೆ” ಸುಮಧುರ ಹಾಡು ಬಹಳಷ್ಟು ಸದ್ದು ಮಾಡುವ ಮೂಲಕ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ. ಮಾತ್ರವಲ್ಲದೇ ಸಿನಿಮಾದ ಇತರ ಇಂಪಾದ ಹಾಡುಗಳು ಮನಸ್ಸಿಗೆ ಖುಷಿ ಕೊಡುವ ಮೂಲಕ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ತಾರಾಗಣ :

ತಾರಾಗಣದಲ್ಲಿ ಹಿರಿಯ ನಟ ಅನಂತ್ ನಾಗ್ ಹಾಗೂ ವಿನಯಾ ಪ್ರಸಾದ್, ಗೀತಾ ಜೊತೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್ ಸೇರಿದಂತೆ ಹಲವು ಹಿರಿಯ ನಟ-ನಟಿಯರೊಂದಿಗೆ ಆರ್ಯವರ್ಧನ್ ಮತ್ತು ಕಿರಣ್ ರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿಯರಾಗಿ ತಮ್ಮ ನಟನೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ.

ಚಿತ್ರ ನಿರ್ಮಾಣ: ಹರೀಶ್ ಶೇರಿಗಾರ್ – ಶರ್ಮಿಳಾ ಶೇರಿಗಾರ್ , ಕಥೆ-ಚಿತ್ರಕಥೆ-ನಿರ್ದೇಶನ: ಖ್ಯಾತ ಹಿರಿಯ ನಿರ್ದೇಶಕ ಕೊಡ್ಲು ರಾಮಕೃಷ್ಣ, ಸಂಗೀತ ನಿರ್ದೇಶಕರು: ಮಣಿಕಾಂತ್ ಕದ್ರಿ -ಎನ್.ಜೆ.ರವಿಶೇಕರ್ ರಾಜಮಗ, ಹಿನ್ನೆಲೆ ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್. ರಾಜಮಗ, ಅಕ್ಷತಾ ರಾವ್, ಛಾಯಾಗ್ರಾಹಣ: ಮೋಹನ್, ಸಂಭಾಷಣೆ: ಬಿ.ಎ.ಮಧು, ಸಂಕಲನ: ಬಸವರಾಜ್ ಅರಸ್ , ಸಾಹಸ ನಿರ್ದೇಶನ: ಥ್ರಿಲ್ಲರ್ ಮಂಜು-ಕುಂಗ್ಫು ಚಂದ್ರು , ನೃತ್ಯ ನಿರ್ದೇಶನ: ಮದನ್ ಹರಿಣಿ

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್


Spread the love