Home Mangalorean News Kannada News ಸಚಿವ ಪ್ರಮೋದ್ ಮಧ್ವರಾಜ್ ಮಿಂಚಿನ ಸಂಚಾರ- 28.76 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ

ಸಚಿವ ಪ್ರಮೋದ್ ಮಧ್ವರಾಜ್ ಮಿಂಚಿನ ಸಂಚಾರ- 28.76 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ

Spread the love

ಸಚಿವ ಪ್ರಮೋದ್ ಮಧ್ವರಾಜ್ ಮಿಂಚಿನ ಸಂಚಾರ- 28.76 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಇಂದು ಮಿಂಚಿನ ಸಂಚಾರ ನಡೆಸಿದ ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನಮ್ಮ ಗ್ರಾಮ ನಮ್ಮ ರಸ್ತೆ ಮತ್ತು ಗ್ರಾಮ ಸಡಕ್ ಯೋಜನೆಯಡಿ 20.83 ಕಿಮೀ ಉದ್ದದ , 28.76 ಕೋಟಿ ವೆಚ್ಚದ 11 ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ನಂತರ ಮಾತನಾಡಿದ ಸಚಿವರು, ತಾವು ಅಧಿಕಾರಕ್ಕೆ ಬಂದ 4 ವರ್ಷಗಳ ಅವಧಿಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 35.2 ಕೋಟಿ ವೆಚ್ಚದಲ್ಲಿ 57.37 ಕಿ.ಮೀ ಉದ್ದದ 26 ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ, ಕ್ಷೇತ್ರದ ಜನತೆಯ ಬೇಡಿಕೆಗಳಿಗೆ ಅನುಗುಣವಾಗಿ ರಸ್ತೆಗಳ ನಿರ್ಮಾಣ ಕಾರ್ಯ ಕೈಗೊಂಡಿದ್ದು, ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಅಲ್ಲದೇ ಕ್ಷೇತ್ರದಲ್ಲಿ ಸಂಪರ್ಕ ರಸ್ತೆಗಳು ಹಾಗೂ ಸೇತುವೆಗಳ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ, ಕ್ಷೇತ್ರದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳನ್ನು 5 ವರ್ಷಗಳ ಕಾಲ ವಾರ್ಷಿಕ ನಿರ್ವಹಣೆ ಹಾಗೂ 6 ನೇ ವರ್ಷದಲ್ಲಿ ರಸ್ತೆಯ ನವೀಕರಣ ಜವಾಬ್ದಾರಿಯನ್ನು ಸಂಬಂದಪಟ್ಟ ಗುತ್ತಿಗೆದಾರರಿಗೆ ವಹಿಸಲಾಗಿದೆ ಇದರಿಂದ ಕನಿಷ್ಠ 10 ವರ್ಷಗಳ ಕಾಲ ಜನತೆಗೆ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ ದೊರೆಯಲಿದೆ ಎಂದು ಸಚಿವರು ತಿಳಿಸಿದರು.

ರೂ. 305.30 ಲಕ್ಷದ ಎನ್.ಹೆಚ್. 66 ರಿಂದ ಬ್ರಹ್ಮಾವರ ಕೃಷಿ ಕೇಂದ್ರದ ರಸ್ತೆ ಕಾಮಗಾರಿ, 167.10 ಲಕ್ಷದ ಕೆಮ್ಮಣ್ಣು ಜ್ಯೋತಿ ನಗರದಿಂದ ನೇಜಾರು ರಸ್ತೆ ಕಾಮಗಾರಿ, ರೂ.226.10 ಲಕ್ಷದ ನೇಜಾರು ಜಂಗಮರಬೆಟ್ಟು ನಿಂದ ನಿಡಂಬಳ್ಳಿ ಕೆಮ್ಮಣ್ಣು ರಸ್ತೆ ಕಾಮಗಾರಿ , ರೂ.263.60 ಲಕ್ಷದ ರಸ್ತೆ ಕಮಾಗಾರಿ, ರೂ.214.60 ಲಕ್ಷದ ರಾಮನ್ ಕುದ್ರು ನಿಂದ ನಂದನ್ ಕುದ್ರು ನೀಲಾವರ ಲಿಂಕ್ ರಸ್ತೆ ಕಾಮಗಾರಿ, ರೂ.184.70 ಲಕ್ಷದ ಬಾಯರ ಬೆಟ್ಟು ನಿಂದ ಕಕ್ಕುಂಜೆ ಗೋರ್ಪಳ್ಳಿ ರಸ್ತೆ ಕಾಮಗಾರಿ, ರೂ.259.50 ಲಕ್ಷದ ಸೂರುಂಟೆ ಕಂಬಲಗದ್ದೆ ಎಲ್ಲಂಪಳ್ಳಿ ರಸ್ತೆ ಕಾಮಗಾರಿ, ರೂ.131.20 ಲಕ್ಷದ ಕರ್ಜೆ ಹಲುವಳ್ಳಿ ಹಿಂಕ್ಲಾಡಿ ರಸ್ತೆ ಕಾಮಗಾರಿ, ರೂ.181.80 ಲಕ್ಷದ ಸಾಸ್ತಾವು ಹಲುವಳ್ಳಿ ಕಂಗಿಬೆಟ್ಟು ರಸ್ತೆ, ರೂ.172.70 ಲಕ್ಷದ ಕೆಂಜೂರು ನಾಲ್ಕೂರು ರಿಂದ ಚಪ್ಪರ್ ಮಠ ಮೂಡಬೆಟ್ಟು ರಸ್ತೆ ಕಾಮಗಾರಿ, 159.50 ಲಕ್ಷದ ಕಳತ್ತೂರು ಸೀತಾನದಿಯಿಂದ ಸಂತೆಕಟ್ಟೆ ರಸ್ತೆ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಇಡೀ ಕ್ಷೇತ್ರದಲ್ಲಿ ನಡೆದ ಎಲ್ಲಾ ಕಾಮಗಾರಿ ಪ್ರದೇಶಗಳಿಗೆ ಸಚಿವರು ಕೆ.ಎಸ್.ಆರ್.ಟಿ.ಸಿ ಯ ನರ್ಮ್ ಬಸ್ ನಲ್ಲಿ ತೆರಳಿ ಗುದ್ದಲಿಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾ.ಪಂ. ಸದಸ್ಯರಾದ ಡಾ. ಸುನೀತಾ ನಾಯಕ್, ಗೋಪಿ ಕೆ ನಾಯ್ಕ್, ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ನಾಯಕ್, ಕೆಡಿಪಿ ಸದಸ್ಯ ಉಮೇಶ್ ಚೇರ್ಕಾಡಿ, ಪಿ.ಎಂ.ಜಿ.ಎಸ್.ವೈ ಯೋಜನಾ ವಿಭಾಗದ ಇಂಜಿನಿಯರ್ ಗಳಾದ ಸತೀಶ್, ವಿಜಯಾನಂದ ನಾಯಕ್, ತ್ರಿಣೇಶ್ವರ್, ಹಾಗೂ ವೆರೋನಿಕಾ ಕರ್ನೇಲಿಯೋ ಮತ್ತು ವಿವಿಧ ಗ್ರಾಮ ಪಂಚಾಯತ್ ಗಳ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version