ಸಣ್ಣ ವರ್ತನೆಗಳು ಮನುಷ್ಯನ ಸಂಸ್ಕೃತಿಯನ್ನ ಸೂಚಿಸುತ್ತದೆ.- ಪ್ರೋ. ಎಂ.ಎಲ್ .ಸಾಮಗ
ಉಡುಪಿ. ಮನುಷ್ಯ ತನ್ನ ಜೀವನದಲ್ಲಿ ತೋರ್ಪಡಿಸುವ ಸಣ್ಣ ಸಣ್ಣ ವರ್ತನೆಗಳು ಆತನ ಸಂಸ್ಕೃತಿಯನ್ನ ಜಾಹಿರುಗೋಳಿಸುತ್ತದೆ. ಈ ಸಣ್ಣ ಸಣ್ಣ ವರ್ತನೆಗಳನ್ನು ತಿದ್ದುವ ಕೆಲಸ ಬಾಲ್ಯದಲ್ಲೇ ಆಗಬೇಕಾಗಿದೆ. ಈ ಕೆಲಸವನ್ನು ಪ್ರಾಥಮಿಕ ಶಾಲೆಗಳು ಪರಿಣಾಮಕಾರಿಯಾಗಿ ಮಾಡಿದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಉಡುಪಿ ಎಮ್.ಜಿ.ಎಮ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಪ್ರೋ. ಎಂ.ಎಲ್ .ಸಾಮಗ ಇವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ‘ ವರ್ಷ ದ ಹರ್ಷ 156 ’ ಸಮಾರಂಭದ ಬೆಳ್ಳಿಗ್ಗಿನ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ನುಡಿದರು. ಅವರು ಮುಂದುವರಿಯುತ್ತ ಕನ್ನಡ ಶಾಲೆಗಳು ಆತಂಕಗಳನ್ನ ಎದುರಿಸುವ ಈ ಸಂಧರ್ಭದಲ್ಲಿ ಈ ಶಾಲೆ , ಈ ಆತಂಕವನ್ನು ಮೀರಿ ಬೆಳೆಯುತ್ತಿರುವುದು ಆಶಾದಾಯಕ. ಆಂಗ್ಲ ಮಾಧ್ಯಮದ ಶಾಲೆಗಳ ಮಧ್ಯ ಸ್ಪರ್ಧೆಯನ್ನು ಎದುರಿಸುವುದು ಸುಲಭದ ಕೆಲಸವಲ್ಲ. ಈ ಕೆಲಸವನ್ನು ಮಾಡಿ ಶಾಲೆ ಬೆಳೆದು ನಿಂತಿದೆ, ಅದಕ್ಕಾಗಿ ಶಾಲೆ ಸಂಬಂಧಿಸಿದ ಎಲ್ಲರೂ ಅಭಿನಂದರ್ನಾಹರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಂಡಿಕೇಟ್ ಬ್ಯಾಂಕ್ ನ ವಿಶ್ರಾಂತ ಮುಖ್ಯ ಪ್ರಬಂಧಕರಾದ ಜಿ .ಪ್ರೇಮಾನಾಥರವರು, ಬದಲಾದ ಹೆತ್ತವರ ಮಾನಸಿಕ ಸ್ಥಿತಿಯಿಂದಾಗಿ ಇವತ್ತು ಆಂಗ್ಲ ಮಾಧ್ಯಮ ಶಾಲೆಗಳು ವಿಜೃಂಭಿಸುತ್ತೀವೆ. ಇದು ತಪ್ಪು ಎಂದು ಆಗುವುದಿಲ್ಲ , ಆಂಗ್ಲ ಮಾಧ್ಯಮ ಶಾಲೆಗಳ ಸಂಪನ್ಮೂಲಗಳು ಹೇರಳವಾಗಿದ್ದು , ಕನ್ನಡ ಮಾಧ್ಯಮಗಳು ಸೂರಗುತ್ತಿವೆ. ಅದರೊಂದಿಗೆ ಕನ್ನಡ ಮಾಧ್ಯಮ ಶಾಲೆಗಳು ಇಂದಿನ ಸ್ಥಿತಿಯಲ್ಲಿ ಸ್ಪರ್ಧಿಸುವುದು ಕಷ್ಠ. ಅದರೆ ಈ ಶಾಲೆ ನೆರೆಯ ಆಂಗ್ಲ ಮಾಧ್ಯಮ ಶಾಲೆಯ ಸ್ಪರ್ಧೆಯನ್ನು ಮೀರಿ ಬೆಳೆಯುತ್ತಿದೆ ಎಂದರೆ ಈ ಶಾಲೆಯ ಶೈಕ್ಷಣಿಕ ಗುಣ ಮಟ್ಟವನ್ನು ನಾವು ಆಂದಾಜಿಸ ಬಹುದು. ಕನ್ನಡ ಭಾಷೆಯನ್ನು ಅವಗಣಿಸಲು ಇಂದಿನ ಸಂದರ್ಭದಲ್ಲಿ ಸಾಧ್ಯವಿಲ್ಲ. ಏಕೆಂದರೆ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಮಾರನೇ ಸ್ಥಾನವನ್ನು ಪಡೆದಿದೆ. ಹಾಗಾಗಿ ಅದನ್ನು ಉಳಿಸಿ ಬೆಳೆಸುವ ಕಾರ್ಯ ಸಮಾಜ ಮಾಡಬೇಕಾಗಿದೆ. ಈ ಕೆಲಸವನ್ನು ಈ ಶಾಲೆ ಮಾಡುತ್ತಿದೆ. ಯೋಚನೆ ಮತ್ತು ಯೋಜನೆ ಇರುವ ಆಡಳಿತ ಮಂಡಳಿ ಮತ್ತು ಶಿಕ್ಷಕರಿಂದ ಮಾತ್ರ ಇಂತಹಾ ಸಾಧನೆ ಸಾಧ್ಯ.ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಹಳೆ ವಿದ್ಯಾರ್ಥಿ . ಹಲೀಮಾ ಸಾಬ್ಜು ಅಡಿಟೋರಿಯಂನ ಆಡಳಿತ ನಿರ್ದೇಶಕರಾದ ಅಬ್ಧುಲ್ ಜಲೀಲ್ ಸಾಹೇಬ್ ಮತ್ತು ಉದ್ಯಾವರ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ ಸಂದರ್ಭೋಚಿತವಾಗಿ ಮಾತನಾಡಿದರು, ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕೃಷ್ಣರಾಜ್ ಭಟ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಣೇಶ್ ವಿದ್ಯಾರ್ಥಿ ನಾಯಕ ವಿಘ್ನೇಶ್ ಜಿ ಕೋಟಿಯಾನ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಗಣಪತಿ ಕಾರಂತ ಸ್ವಾಗತಿಸಿದರು. ಸಂಚಾಲಕರಾದ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಹಿರಿಯ ಶಿಕ್ಷಕಿ ಹೇಮಲತಾ ವಂದಿಸಿದರು. ಹಿರಿಯ ಶಿಕ್ಷಕಿ ರತ್ನಾವತಿ ಕಾರ್ಯಕ್ರಮ ನಿರ್ವಹಿಸಿದರು.