ಸಮಾಧಾನ ಮಹೋತ್ಸವ: ಸಚಿವ ಪ್ರಮೋದ್, ಶಾಸಕ ಸೊರಕೆ ಭಾಗಿ

Spread the love

ಸಮಾಧಾನ ಮಹೋತ್ಸವ: ಸಚಿವ ಪ್ರಮೋದ್, ಶಾಸಕ ಸೊರಕೆ ಭಾಗಿ

ಉಡುಪಿ: ಪ್ರತಿಯೊಂದು ವಿಷಯ್ಕೂ ಉದ್ವಿಗ್ನತೆಯೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಜಗತ್ತು ಶಾಂತಿಯನ್ನು ಬಯಸುತ್ತಿದೆ. ಪ್ರತಿ ಮುನುಷ್ಯನೂ ಬದುಕಿನ ಜಂಜಾಟದಲ್ಲಿ ಸಮಾಧಾನಕ್ಕೆ ಒತ್ತು ನೀಡಿ, ಮನಸ್ಸು ಶಾಂತವಾಗಿಸಿಕೊಂಡರೆ ಜಗತ್ತಿನಲ್ಲಿ ಶಾಂತಿ ಸೃಷ್ಟಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

image005peace-festival-second-day-udupi-20161105 image006peace-festival-second-day-udupi-20161105 image007peace-festival-second-day-udupi-20161105

ಅವರು ಶನಿವಾರ ಮಿಷನ್ ಕಂಪೌಂಡ್ ಇದರ ಕ್ರಿಶ್ಚಿಯನ್ ಪಿಯ ಕಾಲೇಜಿನ ಮೈದಾನದಲ್ಲಿ ಫೇಲೋಶಿಪ್ ಆಫ್ ಉಡುಪಿ ಜಿಲ್ಲಾ ಚರ್ಚುಗಳ ಒಕ್ಕೂಟಗಳ ವತಿಯಿಂದ ನಡೆಯುತ್ತಿರುವ ಶಾಂತಿ ಮತ್ತು ಸಮಾಧಾನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಮನಶಾಂತಿ ಇಲ್ಲದ ಮನುಷ್ಯ ಬಡವ ಮನಶಾಂತಿ ಇದ್ದವನು ನಿಜವಾದ ಶ್ರೀಮಂತ. ಸಮಾಜದಲ್ಲಿ ನಿರಂತರ ಶಾಂತಿ ಸಮಾಧಾನದ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿದೆ ಎಂದರು.

image008peace-festival-second-day-udupi-20161105 image009peace-festival-second-day-udupi-20161105 image010peace-festival-second-day-udupi-20161105

ಮಾಜಿ ಸಚಿವ, ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿದ ಸಮಾಜಕ್ಕೆ ಅನಿವಾರ್ಯ ಇರುವುದು ಶಾಂತಿ, ನಮ್ಮೆಲ್ಲರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದು ಶಾಂತಿ ಮಂತ್ರದಿಂದ ಮಾತ್ರ ಸಾಧ್ಯ. ಭಗವಂತ ಎಸುಕ್ರಿಸ್ತರ ಕಾರ್ಯನುಗುಣವಾಗಿ ಸಮಾಜಕ್ಕಾಗಿ ನಾವೆಲ್ಲರೂ ಸ್ವಾರ್ಥ, ಅಸಹನೆಗಳನ್ನು ತೊರೆದು ಶಾಂತಿಯ ಜಗತ್ತಿನಡೆಗೆ ಸಾಗಬೇಕಿದೆ. ಎಲ್ಲಾ ಧರ್ಮ ಜಾತಿಬಾಂಧವರು ಸೌಹಾರ್ದ, ಸಹೋದರೆತೆಯಿಂದ ಬಾಳೋಣ ಎಂದರು.

ಕಾರ್ಯಕ್ರಮದಲ್ಲಿ ದೇವರ ವಾಕ್ಯದ ಸಂದೇಶ, ಸಾಮೂಹಿಕ ಧಾರ್ಮಿಕ ಗೀತಗಾಯನ ನಡೆಯಿತು. ಆಧ್ಯಾತ್ಮಿಕ ಪ್ರವಚನಕಾರರಾದ ಮೋಹನ್ ಸಿ ಲಾಝರಸ್ ಮತ್ತು ಅಪ್ಪಾದೊರೈ ಹಾಗೂ ಸಮಾವೇಶದ ಸಂಘಟಕರಾದ ಐ ಆರ್ ಫೆರ್ನಾಂಡಿಸ್, ಕೆ ವಿ ಪೌಲ್, ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.


Spread the love