Home Mangalorean News Kannada News ಸರಕಾರಿ ಡಿಗ್ರೂಪ್ ನೌಕರರ ಸಂಘದ ವಜ್ರ ಮಹೋತ್ಸವ

ಸರಕಾರಿ ಡಿಗ್ರೂಪ್ ನೌಕರರ ಸಂಘದ ವಜ್ರ ಮಹೋತ್ಸವ

Spread the love

ಸರಕಾರಿ ಡಿಗ್ರೂಪ್ ನೌಕರರ ಸಂಘದ ವಜ್ರ ಮಹೋತ್ಸವ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘ (ರಿ) ದಕ್ಷಿಣ ಕನ್ನಡ ಮಂಗಳೂರು, ಇವರ ವತಿಯಿಂದ ಡಿಸೆಂಬರ್ 17 ರಂದು ಮಂಗಳೂರಿನ ಪುರಭವನದಲ್ಲಿ ವಜ್ರ ಮಹೋತ್ಸವ ಸಮಾರಂಭ ಜರಗಿತು. ಗುರುದೇವಾನಂದ ಸ್ವಾಮೀಜಿ (ಶ್ರೀ ಕ್ಷೇತ್ರ ಒಡಿಯೂರು), ರೆ| ಫಾ| ಓನಿಲ್ ಡಿ’ ಸೋಜ (ನಿರ್ದೇಶಕರು ಸಂತ ಅಂತೋನಿ ಆಶ್ರಮ ಮಂಗಳೂರು), ಜನಾಬ್ ಹಾಜಿ ಅಬ್ದುಲ್ ರಶೀದ್ (ಅಧ್ಯಕ್ಷರು ಸಯ್ಯದ್ ಮದನಿ ದರ್ಗಾ ಉಳ್ಳಾಲ) ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ರಮಾನಾಥ ರೈ “ವಜ್ರ ಜವಾನ” ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ವಿಧಾನಪರಿಷತ್ ಮುಖ್ಯ ಸಚೇತಕರು ಐವನ್ ಡಿ’ ಸೋಜ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಕ್ರೀಡಾ ಪಟುಗಳಿಗೆ ಬಹುಮಾನ ವಿತರಣೆ ಮಾಡಿದರು, ಜಿಲ್ಲಾಧಿಕಾರಿ ಎಸ್.ಶಶಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.

ಶಾಸಕರಾದ ಮೊಯಿದ್ದೀನ್ ಬಾವಾ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರವನ್ನು ಮಾಡಿದರು. ಕರ್ನಾಟಕ ಸರಕಾರಿ ನೌಕರರ ಸಂಘ (ರಿ) ಬೆಂಗಳೂರು ಇದರ ರಾಜ್ಯಧ್ಯಕ್ಷರಾದ ಬಿ.ಪಿ ಮಂಜೇ ಗೌಡ, ಕಾರ್ಯದರ್ಶಿ ಜಯಕೀರ್ತಿ ಜೈನ್, ಕರ್ನಾಟಕ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ತಿಮ್ಮಯ್ಯ, ಕರ್ನಾಟಕ ರಾಜ್ಯ ಸರ್ಕಾರಿ ಗ್ರೂಪ್ ‘ಡಿ’ ನೌಕರರ ಕೇಂದ್ರ ಸಂಘ (ರಿ) ಬೆಂಗಳೂರು ಇದರ ರಾಜ್ಯಾಧ್ಯಕ್ಷ ಬಿ.ಎಂ ನಟರಾಜ್, ಪ್ರಧಾನ ಕಾರ್ಯದರ್ಶಿ ಎಸ್. ನರಸಿಂಹ ಮೂರ್ತಿ, ಕೋಶಾಧಿಕಾರಿ ಡಿ.ಕೆ ಕೆಂಪಣ್ಣ, ಸಲಹೆಗಾರರು ಯು.ನಾರಾಯಣಪ್ಪ, ಚಲನಚಿತ್ರ ನಟ ರೂಪೇಶ್ ಶೆಟ್ಟಿ ಹಾಗೂ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ವಾರ್ತಾಧಿಕಾರಿ ಖಾದರ್ ಷಾ ಸಂಚಾಲಕ ರಮೇಶ ಕಿರೋಡಿಯನ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಾಜರಿದ್ದರು.

ಈ ಸಮಾರಂಭದಲ್ಲಿ ಮೀನುಗಾರಿಕೆ ಇಲಾಖೆಯ ಪಿ.ಕೆ. ಸುಧಾಕರ ಇವರು ಜೀವ ರಕ್ಷಣೆ ಮಾಡಿದ ಸೇವೆಗೆ ಗೌರವಪೂರ್ವಕವಾದ ‘ವಜ್ರ ಜವಾನ’ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ದೇಶಕ್ಕಾಗಿ ಪಣ ತೊಟ್ಟ ಐವರು ಮಾಜಿ ಯೋಧರರನ್ನು ಸನ್ಮಾನಿಸಲಾಯಿತು. ಹಿಂದುಳಿದ 60 ಮಂದಿ ಬಡ ಕುಟುಂಬಗಳಿಗೆ ಅಕ್ಕಿ ಮತ್ತು ವಸ್ತ್ರದಾನ ಮಾಡಲಾಯಿತು. ಸರಕಾರಿ ಎಲ್ಲಾ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಮಾಜಿ ಸಂಘದ ಅಧ್ಯಕ್ಷರು, ಸಂಘದ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸಮಸ್ತ ಸರಕಾರಿ ನೌಕರರಿಗೆ ಮೂರು ಹಂತದ ಕ್ರೀಡಾ ಸ್ಪರ್ಧೆ ಏರ್ಪಡಿಸಿದ್ದು, ಸುಮಾರು ಮುನ್ನೂರು ಮಂದಿ ಕ್ರೀಡಾ ಪಟುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ರಾಜ್ಯ, ಜಿಲ್ಲಾ ಮತ್ತು ತಾಲೂಕು, ಅಧ್ಯಕ್ಷರುಗಳನ್ನು, ಪದಾಧಿಕಾರಿಗಳನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು. ಮನೋರಂಜನೆ ಕಾರ್ಯಕ್ರಮವನ್ನು ರೂಪೇಶ್ ಶೆಟ್ಟಿ ಚಲನಚಿತ್ರ ನಟರ ಮಾರ್ಗದರ್ಶನ ಮತ್ತು ನಿರೂಪಣೆಯೊಂದಿಗೆ ಕೇರಳದ ಚೆಂಡೆ ವಾದ್ಯ, ಖ್ಯಾತ ಚಲನಚಿತ್ರ ಗಾಯಕರು ಹಾಗೂ ನಟರಿಂದ ವಿಶೇಷ ಕಾರ್ಯಕ್ರಮಗಳು, ಡ್ಯಾನ್ಸ್, ಬಲೆ ತೆಲಿಪಾಲೆ ಖ್ಯಾತಿಯ ‘ಮಸ್ಕಿರಿ ಕುಡ್ಲ’ ತಂಡದಿಂದ ಮನೋರಂಜನೆ ಮತ್ತು ಮಿಮಿಕ್ರಿ ಚರಣ್‍ರಿಂದ ಮಿಮಿಕ್ರಿ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.

ಅರುಣ್ ಉಳ್ಳಾಲ್ ಹಾಗೂ ಬಿ ಮನಮೋಹನ್ ರಾವ್ ನಿರೂಪಿಸಿದರು. ರಾಜ್ಯ ಸಮ್ಮೇಳನದ ರೂವಾರಿ ಸಂಘದ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿ ಸೋಜ ವಂದಿಸಿದರು.


Spread the love

Exit mobile version