ಸರಕಾರಿ ಬಸ್ಸುಗಳಿಗೆ ತಡೆಯಾಜ್ಷೆ ತಂದ ಖಾಸಗಿ ಮ್ಹಾಲಕರ ವಿರುದ್ದ ಉಡುಪಿ ಯುವ ಕಾಂಗ್ರೆಸ್ ಪ್ರತಿಭಟನೆ

Spread the love

ಸರಕಾರಿ ಬಸ್ಸುಗಳಿಗೆ ತಡೆಯಾಜ್ಷೆ ತಂದ ಖಾಸಗಿ ಮ್ಹಾಲಕರ ವಿರುದ್ದ ಉಡುಪಿ ಯುವ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಬಿಜೆಪಿ ಪಕ್ಷದವರು ಸದಾ ಖಾಸಗಿ ಬಸ್ಸಿನವರ ಲಾಭಿಗೆ ಮಣಿದು ಅವರ ಪರವಾಗಿ ನಿಂತು ಬಡ ವಿದ್ಯಾರ್ಥಿಗಳೀಗೆ, ಹಾಗೂ ನಾಗರಿಕರಿಗೆ ಮೋಸ ಮಾಡಿದ್ದಾರೆ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ನಾಯಕ ಅಮೃತ್ ಶೆಣೈ ಆರೋಪಿಸಿದ್ದಾರೆ.

ಅವರು ಗುರುವಾರ ಉಡುಪಿ ಕ್ಲಾಕ್ ಟವರ್ ಬಳಿ ಖಾಸಗಿ ಬಸ್ಸಿನವರು ಹೈಕೋರ್ಟ್ ಮೂಲಕ ಸರಕಾರಿ ಬಸ್ಸುಗಳಿಗೆ ತಡೆಯಾಜ್ಞೆ ತಂದಿರುವುದನ್ನು ವಿರೋಧೀಸಿ ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯ ಬಹುದಿನದ ಕನಸಾಗಿದ್ದ ನರ್ಮ್ ಬಸ್ಸು ಹಾಗೂ ಸರಕಾರಿ ಬಸ್ಸುಗಳ ಒಡಾಟ ಇದಕ್ಕೆ ಬೆಂಬಲವಾಗಿ ನಿಂತು ಎಲ್ಲಾ ರೀತಿಯ ಖಾಸಗಿ ಬಸ್ಸು ಮ್ಹಾಲಿಕರ ವಿರೋಧವನ್ನು ಲೆಕ್ಕಿಸದೆ  ಉಡುಪಿಗೆ ಸರಕಾರಿ ಬಸ್ಸುಗಳನ್ನು ತರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಯಶಸ್ವಿಯಾಗಿದ್ದಾರೆ. ಪ್ರಮೋದ್ ಮಧ್ವರಾಜ್ ಅವರು ಉಡುಪಿಯ ಶಾಸಕರಾಗಿ ಆಯ್ಕೆಯಾದ ಬಳಿಕ ಯಾವುದೇ ಜಾತಿ ಮತ ಭೇಧಗಳನ್ನು ಮಾಡದೆ ಜನರ ಸೇವೆಯೇ ತನ್ನ ಗುರಿ ಎಂಬಂತೆ ಜಿಲ್ಲೆಯ ಪ್ರತಿಯೊಂದು ಅವಶ್ಯಕತೆಗಳನ್ನು ಪೋರೈಸುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಹಿಂದಿನ ಶಾಸಕರು ಉಡುಪಿಗೆ ಹಲವಾರು ಯೋಜನೆಗಳನ್ನು ಘೊಷಣೆ ಮಾಡಿ ಶಂಕುಸ್ಥಾಪನೆ ಮಾಡಿದ್ದರು ಆದರೆ ಅದಕ್ಕೆ ಅಗತ್ಯವಾದ ಹಣವನ್ನು ಇಡದೆ ಇದ್ದರೂ ಪ್ರಮೋದ್ ಮಧ್ವರಾಜ್ ಅವರು ಆಯ್ಕೆಯಾದ ಬಳಿಕ ಉಡುಪಿಗೆ ಬೇಕಾದ ಪ್ರತಿಯೊಂದು ಯೋಜನೆ ಸೂಕ್ತ ಹಣಕಾಸು ವ್ಯವಸ್ಥೆಯನ್ನು ಮಾಡಿದ್ದರು, ಹಿಂದಿನ ಶಾಸಕರು ನಿರ್ಮಿಸಿದ ಒಳಾಂಗಣ ಕ್ರೀಡಾಂಗಣ ಕಳಪೆ ಗುಣಮಟ್ಟದ್ದು ಎಂದು ಗೊತ್ತಾದ ಕೂಡಲೇ ಶ್ರೀಘ್ರವಾಗಿ ಅದನ್ನು ನವೀಕರಣಗೊಳಸಿದ್ದಾರೆ. ಹಿಂದಿನ ಶಾಸಕರು ಈಜುಕೊಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾತ್ರ ಮಾಡಿದ್ದರು ಆದರೆ ಸೂಕ್ತ ಅನುದಾನ ಇಟ್ಟಿರಲಿಲ್ಲ ಆದರೆ ಪ್ರಮೋದ್ ಮಧ್ವರಾಜ್ ಅವರು ಅದಕ್ಕೆ ಸೂಕ್ತ ಅನುದಾನದ ವ್ಯವಸ್ಥೆ ಮಾಡಿ ಇಂದು ಸಾವಿರಾರು ಮಕ್ಕಳು ಹಾಗೂ ಹಿರಿಯರು ಅದರ ಪ್ರಯೋಜನ ಪಡೆಯುವಂತೆ ಮಾಡಿದ್ದಾರೆ. ಅಂತೆಯೇ ಹಲವಾರು ರೀತಿಯ ಯೋಜನೆಗಳು ಉಡುಪಿಗೆ ಬರಲು ಕಾರಣ ಭ್ರಷ್ಟಾಚಾರ ರಹಿತರಾಗಿ ಕೆಲಸ ಮಾಡುವ ಪ್ರಮೋದ್ ಮಧ್ವರಾಜ್ ಎನ್ನುವುದನ್ನು ಅರಗಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗದ ಕಾರಣ ಅವರ ವಿರುದ್ದು ಕೇವಲ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಉಡುಪಿಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನರ್ಮ್ ಬಸ್ಸುಗಳು ಬಂದ ಬಳಿಕ ಹಲವಾರು ವಿದ್ಯಾರ್ಥಿಗಳು, ಹಾಗೂ ಹಿರಿಯನಾಗರಿಕರು, ಅಂಗವಿಕರಲಿಗೆ ಹೆಚ್ಚಿನ ಪ್ರಯೋಜನವಾಗಿದೆ. ಅತೀ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಸಂಚರಿಸಲು ಅವಕಾಶ ಮಾಡಿಕೊಟ್ಟದಲ್ಲದೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕೂಡ ಸರಕಾರಿ ಬಸ್ಸುಗಳ ಸೇವೆಯನ್ನು ಒದಗಿಸುವ ಮಹತ್ತರವಾದ ಶ್ರಮವನ್ನು ಮಧ್ವರಾಜ್ ವಹಿಸಿದ್ದರು.

ಖಾಸಗಿ ಬಸ್ಸುಗಳ ಅಹಂಕಾರ ದರ್ಪದಿಂದ ಹಾಗೂ ಪೈಪೋಟಿಯೀಂದಾಗಿ ಎಷ್ಟೋ ಸಾವು ನೋವುಗಳು ಸಂಭವಿಸಿವೆ. ಕಾಂಗ್ರೆಸ್ ಪಕ್ಷ ಎಂದಿಗೂ ಕೂಡ ಖಾಸಗಿ ಬಸ್ಸುಗಳ ವಿರುದ್ದ ಇಲ್ಲ ಬದಲಾಗಿ ಜನರಿಗೆ ಉಪಯೋಗವಾಗುತ್ತಿದ್ದ ಸರಕಾರಿ ಬಸ್ಸಗಳನ್ನು ನಿಲ್ಲಿಸುವಲ್ಲಿ ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರ ವಿರುದ್ದ ಪ್ರತಿಭಟಿಸಲೇ ಬೇಕಾಗಿದೆ. ಸದಾ ಹೇಳಿಕೆ ನೀಡುವ ಬಿಜೆಪಿ ನಾಯಕರು ಜನರ ವಿದ್ಯಾರ್ಥಿಗಳ ಉಪಯೋಗಕ್ಕೆ ಇದ್ದ ಸರಕಾರಿ ಬಸ್ಸುಗಳು ನಿಲ್ಲಿಸಲು ಹೈಕೋರ್ಟಿಗೆ ಹೋದ ಕಾಪು ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ವಿರುದ್ದ ಯಾಕೆ ಮೌನವಾಗಿದ್ದಾರೆ. ಇದು ಬಿಜೆಪಿ ಪಕ್ಷದ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ. ನಿಜವಾಗಿಯೂ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಬಡವರ ಕಾಳಜಿ ಇದ್ದರೆ ಖಾಸಗಿ ಬಸ್ಸು ಮ್ಹಾಲಿಕರ ವರ್ತನೆಯನ್ನು ಖಂಡಿಸಲಿ ಎಂದ ಶೆಣೈ, ಪ್ರಮೋದ್ ಮಧ್ವರಾಜ್ ಅವರ ಜೊತೆಗೆ ಸದಾ ನಾವಿದ್ದೇವೆ ಅಲ್ಲದೆ ನಮ್ಮ ಪ್ರತಿಭಟನೆ ಹೈಕೋರ್ಟಿನ ವಿರುದ್ದ ಅಲ್ಲ ಬದಲಾಗಿ ಖಾಸಗಿ ಬಸ್ ಲಾಭಿಯ ವಿರುದ್ದವಾಗಿದೆ ಎಂದರು.

ಕಾಂಗ್ರೆಸ್ ಕಾರ್ಯದರ್ಶಿ ಜನಾರ್ಧನ ಭಂಡಾರ್ಕರ್ ಮಾತನಾಡಿ ಯುಪಿಎ ನೇತೃತ್ವದ ಸರಕಾರದಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಸಚಿವರಾಗಿದ್ದ ವೇಳೆ ರಾಜ್ಯಕ್ಕೆ ಅದರಲ್ಲೂ ಉಡುಪಿಗೆ ನರ್ಮ್ ಬಸ್ಸು ಲಭಿಸುವಲ್ಲಿ ವಿಶೇಷ ಪ್ರಯತ್ನ ನಡೆಸಿದ್ದರು. ಆ ಅವಧಿಯಲ್ಲಿ ಬಸ್ಸು ಲಭಿಸಿದ್ದರೂ ಕೂಡ ಉಡುಪಿಗೆ ಹೊಸ ಬಸ್ಸುಗಳೇ ಬೇಕು ಎಂದು ಶಾಸಕ, ಸಚಿವ ಪ್ರಮೋದ್ ಮಧ್ವರಾಜ್ ಅವರ ಒತ್ತಾಯದ ಮೇರೆಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬಸ್ಸಿನ ಸೇವೆ ಆರಂಭವಾಗಿತ್ತು ಅದಕ್ಕೆ ಬಿಜೆಪಿ ನಾಯಕ ಹಾಗೂ ಸಿಟಿ ಬಸ್ ಮಾಲಿಕರ ಸಂಘದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಇತರರು ಸೇರಿ ಹೈಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿರುವುದು ಬೇಸರದ ಸಂಗತಿಯಾಗಿದೆ. ಸಮಯದ ಮಿತಿಯಲ್ಲಿ ಹಾಗೂ ದರದಲ್ಲಿ ವ್ಯತ್ಯಾಸಗಳೇನೇ ಇದ್ದರೂ ಕೂತು ಸರಿಪಡಿಸುವ ಬದಲು ಜನರಿಗೆ ಉತ್ತಮ ಸೇವೆ ನೀಡುತ್ತಿದ್ದ ಬಸ್ಸುಗಳನ್ನು ತಡೆಯಾಜ್ಞೆ ಮೂಲಕ ನಿಲ್ಲಿಸಲು ಬಿಜೆಪಿ ನಾಯಕರು ಹೊರಟಿರುವುದು ಅವರಿಗೆ ಜನರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಯಾವುದೇ ಖಾಸಗಿ ಬಸ್ಸುಗಳು ತೆರಳದ ಜಾಗಗಳಿಗೆ ಸರಕಾರಿ ಬಸ್ಸುಗಳು ಬಂದ ಬಳಿಕ ಜನ ಸಂತೋಷಪಟ್ಟಿದ್ದರು ಬಡವರ ಪರ ಎಂದು ಹೇಳುವ ಬಿಜೆಪಿ ಪಕ್ಷ ಯಾವ ನೈತಿಕತೆಯಿಂದ ಜನರ ಮುಂದೆ ಹೋಗಿ ನಿಲ್ಲುತ್ತದೆ. ಬಿಜೆಪಿಗರಿಗೆ ನಿಜವಾದ ಕಾಳಜಿ ಇದ್ದಲ್ಲಿ ಖಾಸಗಿ ಬಸ್ಸು ಮ್ಹಾಲಿಕರ ವರ್ತನೆಯ ವಿರುದ್ದ ಪಕ್ಷ ಬೇಧ ಮರೆತು ಪ್ರತಿಭಟನೆಗೆ ಬರಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಪ್ರಖ್ಯಾತ್ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ವಿಶ್ವಾಸ್ ಅಮೀನ್, ಪ್ರಶಾಂತ್ ಪೂಜಾರಿ, ವೆರೋನಿಕಾ ಕರ್ನೆಲಿಯೊ, ಯತೀಶ್ ಕರ್ಕೆರಾ, ಸಾಯಿ ರಾಜ್, ನೀರಜ್ ಪಾಟಿಲ್, ಕ್ರಿಸ್ಟನ್ ಆಲ್ಮೇಡಾ, ಪ್ರಶಾಂತ್ ಹಿರಿಯಡ್ಕ, ನಿತ್ಯಾನಂದ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ನರಸಿಂಹ ಮೂರ್ತಿ, ಯುವರಾಜ್, ರಮೇಶ್ ಕಾಂಚನ್, ಸೆಲಿನಾ ಕರ್ಕಡ, ಮಲ್ಲಿಕಾ ಬಾಲಕೃಷ್ಣ, ರಮೇಶ್ ಕರ್ಕೆರಾ, ಮೆಲ್ವಿನ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love