Home Mangalorean News Kannada News ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ

Spread the love

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ

ಕುಂದಾಪುರ: ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ನಮ್ಮ ಶಾಲಾ ಹಳೆ ವಿದ್ಯಾರ್ಥಿ ಶ್ರೀ ನಾರಾಯಣ ಪೂಜಾರಿ ಕೊಡೇರಿ ಇವರ ಕೋರಿಕೆಯ ಮೇರೆಗೆ ಬೆಂಗಳೂರು ನ ಬಿಲ್ಡರ್ ಸೋಮಶೇಖರ ಗೌಡ ರವರು ಕೊಡ ಮಾಡಿದ ಕೊಡೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ ಮಾತನಾಡುತ್ತ ಹಳೆ ವಿದ್ಯಾರ್ಥಿಗಳ ಸಂಘದ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೂ, ಈಗಾಗಲೇ ಉಚಿತ ನೋಟ್ಸ್ ಬುಕ್, ಆಂಗ್ಲ ಮಾಧ್ಯಮ ಪಠ್ಯ ಪುಸ್ತಕ, ಶಾಲಾ ವಾಹನ ವ್ಯವಸ್ಥೆ, 4ಜನ ಗೌರವ ಶಿಕ್ಷಕಿಯರ ನೇಮಕ, ಆಯಾ ನೇಮಕ, ಶಾಲೆಗೆ ಸಿಸಿ ಕ್ಯಾಮೆರಾ ಅಳವಡಿಕೆ, ಕ್ರೀಡಾ ಕೂಟ, ಪ್ರತಿಭಾ ಪ್ರದರ್ಶನ, ಆಯೋಜನೆ, ಸ್ಮಾರ್ಟ್ ಕ್ಲಾಸ್,ಕ್ರೀಡಾ ಸಲಕರಣೆ ಪೂರೈಕೆ ಮೊದಲಾದವುಗಳನ್ನು ಒದಗಿಸಿದ್ದು, ಇದೀಗ ವಿದ್ಯಾರ್ಥಿಗಳಿಗೆ ದಾನಿಗಳಿಂದ ಕೊಡೆ ನೀಡಿದ್ದು,

ಕೊಡೆಯನ್ನು ಕೊಡಿಸುವಲ್ಲಿ ಸಹಕರಿಸಿದ ನಾರಾಯಣ ಪೂಜಾರಿ ಯವರಿಗೆ ಮತ್ತು ಅಷ್ಟು ಕೊಡೆಗಳನ್ನು ನೀಡಿದ ಸೋಮಶೇಖರ್ ಗೌಡ ರವರಿಗೆ ಹಳೆ ವಿದ್ಯಾರ್ಥಿಗಳ ಸಂಘದ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಡುಗೆಗಳು ನೀಡುವ ಶಕ್ತಿ ದೊರಕಲಿ ಎಂದು ಹಾರೈಸಿ, ಹಳೆ ವಿದ್ಯಾರ್ಥಿಗಳ, ಪೋಷಕರ ಹಾಗೂ ದಾನಿಗಳ ನೆರವಿನೊಂದಿಗೆ ಇನ್ನಷ್ಟು ಅಭಿವೃದ್ಧಿ ಗೊಳಿಸುವ ಯೋಚನೆ ಮತ್ತು ಯೋಜನೆ ಇದೆ ಎಂದರು.

ವಿದ್ಯಾರ್ಥಿಗಳಿಗೆ ಕೊಡೆ ವಿತರಿಸಿ ಮಾತನಾಡಿದ ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಪ್ರೊಫೆಸರ್ ವಾಸುದೇವ್ ಕಾರಂತರು ವಿದ್ಯಾರ್ಥಿಗಳಿಗೆ ಕಲಿಕೆಗೆ ಎಲ್ಲಾ ಅನುಕೂಲಗಳನ್ನು ಒದಗಿಸಿದ್ದು ವಿದ್ಯಾರ್ಥಿಗಳು ಚನ್ನಾಗಿ ಕಲಿತು, ಮುಂದಿನ ದಿನ ಈ ಶಾಲೆಗೆ ಮತ್ತು ಊರಿಗೆ ಉತ್ತಮ ಹೆಸರು ತರುವಂತಗಲಿ, ಹಾಗೆ ಈ ಶಾಲೆ ಉಳಿಸಿ ಬೆಳೆಸುವಲ್ಲಿ ಎಲ್ಲಾ ಹಳೆ ವಿದ್ಯಾರ್ಥಿಗಳು ಸಹಕಾರ ಇರಲಿ, ಆಧ್ಯಾಪಕರು ಉತ್ತಮ ಶಿಕ್ಷಣ ನೀಡಲಿ ಎಂದು ಹಾರೈಸಿದರು, ಈ ಸಂಧರ್ಭದಲ್ಲಿ SDMC ಅಧ್ಯಕ್ಷರಾದ ಸುರೇಶ ಖಾರ್ವಿ, ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಚಂದ್ರ ಖಾರ್ವಿ, SDMC ಮಾಜಿ ಅಧಕ್ಷ ರತ್ನಾಕರ ಖಾರ್ವಿ, ಉಪಸ್ಥಿತರಿದ್ದರು,

ಮುಖ್ಯ್ಯೋಪಧ್ಯಾಯನಿ ಶ್ಯಾಮಲಾ ರಾವ್ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು


Spread the love

Exit mobile version