Home Mangalorean News Kannada News ಸರಕಾರ ಆದೇಶದಂತೆ ಟೋಲ್ ವಸೂಲಿಗೆ ಜಿಲ್ಲಾಡಳಿತ ಸಹಕರಿಸುವುದು ಅನಿವಾರ್ಯ; ಪ್ರಿಯಾಂಕ ಮೇರಿ

ಸರಕಾರ ಆದೇಶದಂತೆ ಟೋಲ್ ವಸೂಲಿಗೆ ಜಿಲ್ಲಾಡಳಿತ ಸಹಕರಿಸುವುದು ಅನಿವಾರ್ಯ; ಪ್ರಿಯಾಂಕ ಮೇರಿ

Spread the love

ಸರಕಾರ ಆದೇಶದಂತೆ ಟೋಲ್ ವಸೂಲಿಗೆ ಜಿಲ್ಲಾಡಳಿತ ಸಹಕರಿಸುವುದು ಅನಿವಾರ್ಯ; ಪ್ರಿಯಾಂಕ ಮೇರಿ

ಉಡುಪಿ: ನವಯುಗ ಟೋಲ್ ಪ್ಲಾಝಾಗಳಲ್ಲಿ ಸರಕಾರದ ಆದೇಶದಂತೆ ಸುಂಕ ಸಂಗ್ರಹಕ್ಕೆ ಜಿಲ್ಲಾಡಳಿತ ನವಯುಗ ಕಂಪೆನಿಗೆ ಅನಿವಾರ್ಯವಾಗಿ ಸಹಕರಿಸಬೇಕಾದ ಪರಿಸ್ಥಿತೆ ಬಂದಿದೆ. ಕೆಲಸ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹಕ್ಕೆ ಕೇಂದ್ರ ಸರಕಾರದ ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಅನುಮತಿ ನೀಡಿದ್ದು ಉಡುಪಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷರು ತಮಗೆ ಸಹಕಾರ ನೀಡುತ್ತಿಲ್ಲ ಎಂದು ನವಯುಗ ಕಂಪೆನಿ ತಮ್ಮ ವಿರುದ್ದ ರಾಜ್ಯ ಸರಕಾರಕ್ಕೆ ದೂರು ನೀಡಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಅವರು ಸೋಮವಾರ ಹೆಜಮಾಡಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಸರಕಾರದ ವಿರುದ್ದ ಅರ್ಬಿಗ್ರೇಶನ್ ಗೂ ನವಯುಗ ಕಂಪೆನಿ ಅರ್ಜಿ ಹಾಕಿದ್ದು ಒಂದು ವೇಳೆ ಅದು ರುಜವಾತದಲ್ಲಿ ಕೋಟಿಗಟ್ಟಲೆ ರೂಪಾಯಿಗಳನ್ನು ದಂಡ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಎನ್ನುವ ಕುರಿತು ಜಿಲ್ಲಾಡಳಿತ ಈಗಾಗಲೇ ರಾಜ್ಯಸರಕಾರ ಮತ್ತು ಕೇಂದ್ರ ಸರಕಾರಕ್ಕೆ ವರದಿ ಮಾಡಿದ್ದರೂ ಸಹ ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶದಂತೆ ಸ್ಥಳೀಯ ವಾಹನಗಳಿಂದಲೂ ಸುಂಕ ವಸೂಲಿಗೆ ಜಿಲ್ಲಾಡಳಿತ ಈಗ ಸಹಕರಿಸಬೇಕಾದ ಇಕ್ಕಟ್ಟಿನಲ್ಲಿ ಸಿಲುಕಿದ್ದು ಅನಿವಾರ್ಯವಾಗಿ ಸಹಕಾರ ನೀಡಬೇಕಾಗಿದೆ ಎಂದರು.

ನವಯುಗ ವತಿಯಿಂದ ಸಂಗ್ರಹವಾದ ಟೋಲ್ ಹಣದ ಮೇಲೆ ಜಿಲ್ಲಾಡಳಿತಕ್ಕೆ ಯಾವುದೇ ಅಧಿಕಾರ ಇಲ್ಲ ಅದನ್ನು ಬ್ಯಾಂಕುಗಳು ನಮ್ಮಿಂದ ಬಾಕಿಯಿರುವ ಮೊತ್ತಕ್ಕೆ ಸಂದಾಯ ಮಾಡಿಕೊಳ್ಳುತ್ತಿವೆ ಎಂದು ನವಯುಗ ಕಂಪೆನಿಯು ಜಿಲ್ಲಾಡಳಿತಕ್ಕೆ ತಿಳಿಸಿದೆ ಎಂದರು.

ನವಯುಗ ನಿರ್ಮಾಣ ಕಂಪೆನಿ ಈಗಾಗಲೇ ಪಡುಬಿದ್ರಿ, ಕಟಪಾಡಿ ಮತ್ತಿತರ ಹಲವೆಡೆಗಳಲ್ಲಿ ನಿರ್ಮಾಣ ಮಾಡಿರುವ ಸರ್ವಿಸ್ ರಸ್ತೆಗಳಲ್ಲಿ ಕೆಲವೆಡೆ ರಿಕ್ಷಾ ಸೇರಿದಂತೆ ಖಾಸಗಿ ವಾಹನಗಳು ಪಾರ್ಕಿಂಗ್ ಮಾಡುತ್ತಿರುವುದನ್ನು ತಾನು ಜಿಲ್ಲಾ ಎಸ್ಪಿಯವರ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಂಸದರು ಮಾತು ಉಳಿಸಿಕೊಳ್ಳಲಿ
ನವಯುಗ ನಿರ್ಮಾಣ ಕಂಪೆನಯು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಸ್ಥಳೀಯ ವಾಹನಗಳ ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತ ಅನುಮತಿ ನೀಡಬಾರದು ನಾವು ಈ ಬಗ್ಗ ರಾಜಿ ಮಾಡಿಕೊಳ್ಳುವುದಿಲ್ಲ. ಉಭಯ ಜಿಲ್ಲೆಯ ಸಂಸದರು ಜನತೆಗೆ ನೀಡಿದ ಮಾತನ್ನು ಉಳಿಸಿಕೊಳ್ಳಲಿ ನವಯುಗ ನಿರ್ಮಾಣ ಕಂಪೆನಿಯೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಹಿಂದಿನ ಸಭೆಗಳಲ್ಲಿ ಕೊಟ್ಟಿರುವ ಮಾತುಗಳನ್ನು ಪಾಲಿಸಲಿ ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಉಭಯ ಜಿಲ್ಲೆಗಳ ಟೋಲ್ ಗೇಟ್ ಹೋರಾಟಗಾರರ ಸಮಿತಿ ಎಚ್ಚರಿಸಿದೆ


Spread the love

Exit mobile version