Home Mangalorean News Kannada News ಸರಗಳ್ಳತನದ ಆರೋಪಿಯ ಬಂಧನ

ಸರಗಳ್ಳತನದ ಆರೋಪಿಯ ಬಂಧನ

Spread the love

ಸರಗಳ್ಳತನದ ಆರೋಪಿಯ ಬಂಧನ

ಮಂಗಳೂರು: ಕಳ್ಳತನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮತ್ತು ಕಳ್ಳತನ ನಡೆಸುವ ಚಾರಿತ್ರ ಪಟ್ಟಿಯ ಆರೋಪಿಯನ್ನು ಉಳ್ಳಾಲ ಪೋಲಿಸರು ಬಂಧಿಸಿದ್ದಾರೆ.

ಬಂಧಿತನನ್ನು ಉಳ್ಳಾಲ ನಿವಾಸಿ ರಮೀಝ್ ಯಾನೆ ಲೆಮನ್ ಟೀ ರಮೀಝ್ (26) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತ ಮೇರೆಗೆ ಪ್ರಕರಣದ ತನಿಖಾಧಿಕಾರಿ ಉಳ್ಳಾಲ ಠಾಣಾ ಪೋಲಿಸ್ ನಿರೀಕ್ಷಕರಾದ ಗೋಪಿಕೃಷ್ನ ಕೆ ಆರ್ ಉಳ್ಳಾಲ ಮಾಸ್ತಿಕಟ್ಟೆ ಎಂಬಲ್ಲಿ ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯಿಂದ 16ಗ್ರಾಂ ತೂಕದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಚಿನ್ನದ ಸರದ ಅಂದಾಜು ರೂ 50000 ಆಗಿರುತ್ತದೆ.

2017 ಡಿಸೆಂಬರ್ 1 ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಸುಭಾಷ್ ನಗರದ ನಿವಾಸಿ ಪುಷ್ಪ ರೆಡ್ಡಿ ಎಂಬವರು ಮನೆಯಲ್ಲಿ ಒಬ್ಬರೇ ಇದ್ದಾಗ ಆರೋಪಿ ಮನೆಯೊಳಗೆ ನುಗ್ಗಿ ಫಿರ್ಯಾದಿದಾರರನ್ನು ಹೆದರಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿ ತಲೆಮರೆಸಿಕೊಂಡಿದ್ದು ಈ ಪ್ರಕರಣದಲ್ಲಿ ಈಗಾಗಲೇ ಇಗಾಗಲೇ ಒರ್ವ ಆರೋಪಿಯನ್ನು ಬಂಧಿಸಿದ್ದು ಆರೋಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ. ಪ್ರಕರಣದ ತನಿಖೆಯನ್ನು ಠಾಣಾ ಪಿಐ ಗೋಪಿಕೃಷ್ಣ ಕೈಗೊಂಡಿದ್ದಾರೆ.


Spread the love

Exit mobile version