ಸಹೋದರತ್ವಕ್ಕಾಗಿ ‘ಹಲವಾರು ಧರ್ಮ: ಒಂದು ಭಾರತ’ಎಸ್ಐಓದಿಂದ ಮ್ಯಾರಥಾನ್
ಬಂಟ್ವಾಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್ಐಓ) ಬಂಟ್ವಾಳ ತಾಲೂಕು ವತಿಯಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೋರ್ವರಲ್ಲಿ ಸಹೋದರತೆಯ ಭಾವನೆಯನ್ನು ಮೂಡಿಸಲು ‘ಹಲವಾರು ಧರ್ಮ: ಒಂದು ಭಾರತ’ ಎಂಬ ವಾರ್ಷಿಕ ಅಭಿಯಾನದ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದಲ್ಲಿ 5ರಿಂದ 10ನೇ ತರಗತಿಯ ಮಕ್ಕಳಿಗಾಗಿ ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ನಲ್ಲಿರುವ ಪೊಳಲಿ ದ್ವಾರದಿಂದ ಬಿ.ಸಿ.ರೋಡ್ ರೈಲು ನಿಲ್ದಾಣದವರೆಗೆ ಮೇ 14 ಆದಿತ್ಯವಾರ ಬೆಳಗ್ಗೆ 7.30ಕ್ಕೆ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಭೂಷಣ್ ಗುಲಾಬ್ ರಾವ್ ಬೋರಸೆ, ಗೂಡಿನಬಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ, ಬಂಟ್ವಾಳ ಬಾರ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷರು ಹಾಗೂ ವಕೀಲರಾದ ಜಯರಾಮ್ ರೈ, ಎಸ್ ಐ ಓ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ದಾನಿಶ್ ಪಾಣೆಮಂಗಳೂರು, ಎಸ್ ಐ ಓ ಜಿಲ್ಲಾಧ್ಯಕ್ಷರಾದ ತಲ್ಹಾ ಇಸ್ಮಾಯೀಲ್ ಭಾಗವಹಿಸಲಿದ್ದಾರೆ.
5ರಿಂದ 10ನೇ ತರಗತಿಯ ಮಕ್ಕಳಿಗಾಗಿ ಆಯೋಜಿಸಲಾಗಿರುವ ಓಪನ್ ಮ್ಯಾರಥಾನ್ ನಲ್ಲಿ ವಿಜೇತರಾಗುವವರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನವಾಗಿ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು ಎಂದು ಎಸ್ಐಓ ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ತಮೀಝ್ ಅಲಿ ಕಾರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.