ಸಾಂತ್ಯಾರು ಮಠ ಜೀರ್ಣೋದ್ಧಾರ ಕುರಿತು ಚಿಂತನಾ ಸಭೆ

Spread the love

ಸಾಂತ್ಯಾರು ಮಠ ಜೀರ್ಣೋದ್ಧಾರ ಕುರಿತು ಚಿಂತನಾ ಸಭೆ

ಉಡುಪಿ: ಪೆರ್ಡೂರು ಸಮೀಪದ ಸಾಂತ್ಯಾರು ಮಠವು ಉಡುಪಿ ಶೀರೂರು ಮಠದ ಶಾಖಾ ಮಠವಾಗಿದ್ದು ಇಲ್ಲಿ ಶ್ರೀ ಗೋಪಾಲಕೃಷ್ಣ ಮುಖ್ಯ ಪ್ರಾಣ ಹಾಗೂ ಶಕ್ತಿದೇವತೆಗಳ ಸಾನ್ನಿದ್ಧ್ಯಗಳ ಆರಾಧನೆಯು ನಡೆಯಲ್ಪಡುತ್ತಿತ್ತು.
ಕಾಲಾಂತರದಲ್ಲಿ ಇಲ್ಲಿ ನಡೆಯುತ್ತಿದ್ದ ಧಾರ್ಮಿಕ ವಿಧಿ-ವಿಧಾನಗಳು ಸ್ಥಗಿತಗೊಂಡಿದ್ದು ಪ್ರಸ್ತುತ ಮಠವು ಜೀರ್ಣಾವಸ್ಥೆಯಲ್ಲಿದೆ. ಈ ಮಠವನ್ನು ಜೀರ್ಣೋದ್ಧಾರಗೊಳಿಸಿ ಧಾರ್ಮಿಕ ಆಚರಣೆಗಳನ್ನು ಪುನಃ ಪ್ರಾರಂಭಿಸುವ ಬಗ್ಗೆ, ಮಠದ ಭಕ್ತರು, ಹನುಮಜ್ಜಯಂತಿಯ ಪರ್ವಕಾಲವಾದ 19ನೇ ಏಪ್ರಿಲ್ 2019ರಂದು ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶೀರೂರು ಮೂಲ ಮಠದಲ್ಲಿ ಸಭೆಯನ್ನು ನಡೆಸಿದರು.

ಸಾಂತ್ಯಾರು ಮಠದಲ್ಲಿರುವ ಮುಖ್ಯಪ್ರಾಣ ದೇವರ ವಿಗ್ರಹವು ಅತಿ ಪ್ರಾಚಿನವಾಗಿದ್ದು ಅತ್ಯಂತ ಆಕರ್ಷಕವಾಗಿಯೂ ಇದೆ. ಶ್ರೀ ಮಠದಲ್ಲಿ ನಡೆಯುತ್ತಿದ್ದ ಧಾರ್ಮಿಕ ಆಚರಣೆಗಳನ್ನು ಮುಂದುವರೆಸುವ ಬಗ್ಗೆ ಊರ ಪ್ರಮುಖರು ತೀರ್ಮಾನಿಸಿದರು.ಸಾಂತ್ಯಾರು ಮಠದ ಪುನಶ್ಚೇತನ ಕಾರ್ಯಗಳಿಗೆ ತಮ್ಮೆಲ್ಲರ ಸಹಮತ ಇದ್ದು ತಾವೆಲ್ಲರೂ ಪೂರ್ಣ ಸಹಕಾರ ನೀಡುವುದಾಗಿ ಊರಿನ ಭಕ್ತರು ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸೋದೆ ಶ್ರೀಪಾದರು ಸಭಿಕರನ್ನು ಉದ್ದೇಶಿಸಿ ಆಶೀರ್ವಚಿಸಿದರು.

ಸಭೆಯಲ್ಲಿ ಸೋದೆ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ, ರತ್ನಕುಮಾರ್, ಶೀರೂರು ಮೂಲ ಮಠದ ಸುಬ್ರಹ್ಮಣ್ಯ ಭಟ್, ಊರ ಪ್ರಮುಖರಾದ ನಂದಕುಮಾರ್, ಸಂಜೀವ, ಪೆÇಂಕು ಪೂಜಾರಿ, ಪ್ರವೀಣ್, ಗಣೇಶ್ ನಾಯಕ್, ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು.


Spread the love