ಸಾಕ್ಚ್ಯಚಿತ್ರಗಳ ಗುಣಮಟ್ಟ ಅತ್ಯುಚ್ಛ ಮಟ್ಟಕೇರಿದೆ: ಆ್ಯಡಮ್ ಕ್ಲಾಫಮ್
ಮಂಗಳೂರು: ಸಾಕ್ಚ್ಯಚಿತ್ರಗಳ ಗುಣಮಟ್ಟ ಅತ್ಯುಚ್ಛ ಮಟ್ಟಕೇರಿದೆ. ಅತ್ಯುತ್ತಮ ಗುಣಮಟ್ಟದ ಕ್ಯಾಮಾರಗಳನ್ನು ಬಳಸಿ ಶಬ್ದಗಳನ್ನು ಸೆರೆಹಿಡಿಯುವ ಮೂಲಕ ನೈಜತೆಯನ್ನು ಕಾಪಾಡಿಕೊಳ್ಳುವ ಸವಾಲು ಎದುರಾಗಿದೆ ಎಂದು ಲಂಡನ್ನಿನ ಪ್ರತಿಷ್ಠಿತ ಬಿಬಿಸಿ ಟೆಲಿವಿಷನ್ನಲ್ಲಿ ಸಾಕ್ಷ್ಯಚಿತ್ರ ವಿಭಾಗದ ಹಿರಿಯ ಕಾರ್ಯನಿರ್ವಾಹಕ ನಿರ್ಮಾಪಕರಾಗಿ 20 ವರ್ಷ ಸೇವೆ ಸಲ್ಲಿಸಿದ ಆ್ಯಡಮ್ ಕ್ಲಾಫಮ್ ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಫೆಬ್ರವರಿ 20 ರಂದು ಸಿಪಿಇ ಸಹಯೋಗದಲ್ಲಿ ಕಾಲೇಜಿನ ಪತ್ರಕೋದ್ಯಮ ವಿಭಾಗ ಆಯೋಜಿಸಿದ್ದ ಸಾಕ್ಷ್ಯಚಿತ್ರ ನಿರ್ಮಾಣದ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಾಕ್ಷ್ಯಚಿತ್ರದ ವ್ಯಾಖ್ಯಾನ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಹೆಚ್ಚಿನ ಸಾಕ್ಷ್ಯಚಿತ್ರ ನಿರ್ಮಾಪಕರು ಅಂದಾಜು 30 ನಿಮಿಷಗಳ ಅವಧಿಯಲ್ಲಿ ತಮ್ಮ ಕಲ್ಪನೆಯನ್ನು ಪ್ರಸ್ತುತಪಡಿಸುತ್ತಾರೆ ಕೆಲವೊಮ್ಮೆ ವಿಷಯಕ್ಕೆ ಅನುಗುಣವಾಗಿ 50 ನಿಮಿಷಗಳವರೆಗೂ ವಿಸ್ತರಿಸಬಹುದು ಎಂದು ಅವರು ಪರಿಣಾಮಕಾರಿ ಸಾಕ್ಷ್ಯಚಿತ್ರವೊಂದನ್ನು ಪ್ರದರ್ಶಿಸುವ ಮೂಲಕ ಸಾಧರಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ ಉದಯಕುಮಾರ್ ಇಂದಿನ ಮಾಧ್ಯಮಗಳು ಜನರ ಹಾದಿ ತಪ್ಪಿಸುತ್ತಿವೆ. ಹಾಗಾಗಿ ಜನರು ಯೋಚನಾಶಕ್ತಿಯನ್ನು ಬಳಸಿಕೊಳ್ಳಬೇಕಿದೆ ಎಂದರು. ಇದೇ ವೇಳೆ ಗಣ್ಯರು ಸಾಮಾಜಿಕ ಮಾಧ್ಯಮಗಳ ಅಪಾಯದ ಬಗ್ಗೆ ಮಾತನಾಡಿದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ ಗಣಪತಿ ಗೌಡ ಅತಿಥಿಗಳನ್ನು ಸ್ವಾಗತಿಸಿದರು. ಸಿಪಿಇ ಸಂಯೋಜಕಿ ಡ ಲತಾ ಎ ಪಂಡಿತ್, ಆಂಗ್ಲ ವಿಭಾಗದ ಪಟ್ಟಾಭಿರಾಯ ಸೋಮಯಾಜಿ, ಪತ್ರಕರ್ತ ತಾರಾನಾಥ್, ರಮೇಶ್ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಮಹಾಂತೇಶ್ ಹಿರೇಮಠ್, ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರಾವ್ಯ ನಿರೂಪಿಸಿದರು. ಆಶಾಲತಾ ಧನ್ಯವಾದ ಸಮರ್ಪಿಸಿದರು.