ಸಾಧನೆಗೆ ಅಂಧತ್ವ, ಧರ್ಮ ಎಂದೂ ಅಡ್ಡಿಯಾಗಿಲ್ಲ; ಮೆಹಬೂಬ್ ಸಾಬ್

Spread the love

ಸಾಧನೆಗೆ ಅಂಧತ್ವ, ಧರ್ಮ ಎಂದೂ ಅಡ್ಡಿಯಾಗಿಲ್ಲ; ಮೆಹಬೂಬ್ ಸಾಬ್

ಉಡುಪಿ:ಸಂಗೀತಗಾರನಾಗಿರದಿದ್ದರೆ ಇಂದು ನಾನೆಲ್ಲೋ ಭಿಕ್ಷೆ ಬೇಡಬೇಕಿತ್ತು ಆದರೆ ಇಂದು ಇದೇ ಸಂಗೀತ ನನಗೆ ಸಮಾಜದಲ್ಲಿ ಒಂದು ಗುರುತು ಕೊಡುವುದರೊಂದಿಗೆ ಲಕ್ಷಾಂತರ ಜನರಿಗೆ ನನ್ನನ್ನು ಪರಿಚಯಿಸಿದೆ ಎಂದು ಹುಟ್ಟು ಅಂಧ ಗಾಯಕ ಸರಿಗಮಪ ರಿಯಾಲಿಟಿ ಷೋ ರನ್ನರ್ ಅಪ್ ಪ್ರಶಸ್ತಿ ವಿಜೇತ ಮೆಹಬೂಬ್ ಸಾಬ್ ಅವರು ಹೇಳಿದರು.

ಅವರು ಶುಕ್ರವಾರ ಉಡುಪಿ ಪ್ರೆಸ್ ಕ್ಲಬ್ ವತಿಯಿಂದ ಕತ್ತಲೆಕೋಣೆ ಚಿತ್ರ ತಂಡ ಜಂಟಿಯಾಗಿ ಆಯೋಜಿಸಿ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು. ಕೂಲಿ ಕೆಲಸ ಮಾಡುತ್ತಿದ್ದ ತನ್ನ ಕುಟುಂಬಕ್ಕೆ ಸಂಗೀತ ಆಧಾರವಾಗಿದೆ. ಚಿಕ್ಕಂದಿನಲ್ಲಿ ರೇಡಿಯೊದಲ್ಲಿ ಹಾಡು ಕೇಳುತ್ತಾ ನಾನೂ ಗಾಯಕನಾಗಬೇಕು ಎಂದು ಆಸೆಪಟ್ಟಿದ್ದೆ. ಚಿಕ್ಕಪ್ಪನ ಸಲಹೆಯಂತೆ ತಂದೆ ನನ್ನನ್ನು 8ನೇ ವಯಸ್ಸಿನಲ್ಲಿ ಗದಗದ ಪುಟ್ಟರಾಜ ಗವಾಯಿ ಗುರುಗಳ ಆಶ್ರಮಕ್ಕೆ ಸೇರಿಸಿದರು. ಅಲ್ಲಿ ಹಿಂದೂಸ್ಥಾನಿ ಸಂಗೀತ ಕಲಿತೆ ಜೊತೆಗೆ ಬ್ರೈಲ್ ಲಿಪಿಯಲ್ಲಿ ಶಿಕ್ಷಣ ಪಡೆದು ಶೆ. 72 ಅಂಕದೊಂದಿಗೆ ಹತ್ತನೇ ತರಗತಿ ಕಲಿತಿದ್ದು ಪಿಯುಸಿ ಪರಿಕ್ಷೆ ಬರೆದಿದ್ದು ಇನ್ನಷೇ ಫಲಿತಾಂಶ ಬರಬೇಕಿದೆ. ಮುಂದೆ ಸಂಗೀತ ದಲ್ಲಿಯೇ ಪದವಿ, ಸ್ನಾತಕೋತ್ತರ ಪದವಿ ಪಡೆಯುವ ಆಸೆಯಿದೆ ಎಂದರು.

ಸಿನಿಮಾ ಹಾಡುಗಳನ್ನು ಕೇಳುತ್ತಾ ಶಾಸ್ತ್ರೀಯ ಸಂಗೀತ ಕಲಿತ ನನಗೆ ಸಿನಿಮಾಗಳಲ್ಲಿ ಹಾಡಬೇಕು ಎಂಬ ಆಸೆ ಇತ್ತು. ಝೀ ಟಿವಿ ವಾಹಿನಿ ಸರಿಗಮಪ ರಿಯಾಲಿಟಿ ಶೋನಿಂದಾಗಿ ನನ್ನ ಆಸೆ ಈಡೆರಿತು. ಕತ್ತಲೆ ಕೋಣೆ ಸಿನೇಮಾ ನನೆ ಪ್ರಥಮ ಅವಕಾಶವನ್ನು ನೀಡಿದ್ದು ಅದಕ್ಕಾಗಿ ನಿರ್ದೇಶಕರಿಗೆ ನಾನು ಚಿರರುಣಿಯಾಗಿದ್ದೇನೆ ಎಂದರು.

ಅಂಧತ್ವ ಆಗಲಿ ಅಥವಾ ನನ್ನ ಧರ್ಮವಾಗಿ ಎಂದೂ ನನ್ನ ಸಂಗೀತಕ್ಕೆ ಅಡ್ಡಿಯಾಗಿಲ್ಲ ಎನ್ನುವ ಮೆಹಬೂಬ್ ಸಾಬ್ ಮುಂದೆ ಸಂಗೀತ ಶಾಲೆಯೊಂದನ್ನು ತೆರೆಯಬೇಕು ಅದರಲ್ಲಿ ಸಾಮಾನ್ಯರ ಜೊತೆಗೆ ತನ್ನಂತಹ ಅಂಧರಿಗೆ ಅಥವಾ ಬೇರೆ ವಿಕಲಾಂಗರಿಗೆ ಸಂಗೀತ ಕಲಿಸಬೇಕು ಎಂಬ ಕನಸಿದೆ ಎಂದರು.

ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ ಮೆಧಿಹಧಿಬೂಧಿಬ್ ಆಕಸ್ಮಿಕವಾಗಿ ಸರಿಗಮಪ ಸೀಸನ್-13ರಲ್ಲಿ ಪಾಲ್ಗೊಂಡು ರನ್ನರ್ ಅಪ್ ಸ್ಥಾನ ಗಿಟ್ಟಿಸಿದ್ದಾರೆ. ಮೆಹಬೂಬ್ ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಪಿಂಜಾರ ಸಮಾಜದ ಶರೀಫ್ ಮತ್ತು ರಜೀಯಾ ಬೇಗಂ ದಂಪತಿ ಪುತ್ರ. 28 ವರ್ಷದ ಈತನಿಗೆ ಒಬ್ಬ ಸಹೋದರ, ಇಬ್ಬರು ಸಹೋದರಿ ಇದ್ದಾರೆ. ತಂದೆ ಕೂಲಿ ಕೆಲಸ ಮಾಡಿ ಕುಟುಂಬ ಸಲಹುತ್ತಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ರೇಡಿಯೋದಲ್ಲಿ ಬರುತ್ತಿದ್ದ ಹಾಡುಗಳನ್ನ ಕೇಳಿ ಹಾಡುತ್ತಿದ್ದೆ. ನನ್ನ ದನಿ ಚೆನ್ನಾಗಿದೆ ಎಂದು ಪೋಷಕರು, ಗ್ರಾಮಸ್ಥರು ಹುರಿದುಂಬಿಸುತ್ತಿದ್ದರು. ಒಂಬತ್ತು ವರ್ಷವಿದ್ದಾಗ ದೊಡ್ಡಪ್ಪ ನನ್ನನ್ನು ದಾವಣಗೆರೆ ವೀರೇಶ್ವರ ಪುಣ್ಯಾಶ್ರಮಕ್ಕೆ ಸಂಗೀತ ಕಲಿಯಲು ಕಳಿಸಿಕೊಟ್ಟರು. ಆರಂಭದಲ್ಲಿ ರಾಮಲಿಂಗ ಎಂಬ ಶಿಕ್ಷ ಕರು ಸಂಗೀತ ಕಲಿಸುತ್ತಾ ಸ್ಫೂರ್ತಿ ತುಂಬುತ್ತಿದ್ದರು.

ಈ ಹಿಂದೆ ಇನ್ನೊಂದು ಮನರಂಜನಾ ವಾಹಿನಿಯ ಸಂಗೀತ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದೆ. ಆದರೆ, ಮುಂದೊಂದು ದಿನ ಸರಿಗಮಪ ಸೀಸನ್ನಲ್ಲಿ ರನ್ನರ್ ಅಪ್ ಆಗುತ್ತೇನೆಂದು ಊಹಿಸಿರಲಿಲ್ಲ.

ಶಿವಮೊಗ್ಗದಲ್ಲಿ ಸರಿಗಮಪ ಸೀಜನ್ 13ರ ಆಡಿಷನ್ ಇದೆ, ಅರ್ಜಿ ಹಾಕು ಎಂದು ಗೆಳೆಯರು ಹೇಳಿದ್ದರು, ಹಾಕಿದ್ದೆ. ಆಡಿಷನ್ಗೆ ನಾಲ್ಕು ಸಾವಿರ ಸ್ಪರ್ಧಿಗಳು ಬಂದಿದ್ದರು. ಅಲ್ಲಿ ಆಯ್ಕೆಯಾದ 30 ಜನರಲ್ಲಿ ನನ್ನ ಹೆಸರು ಇತ್ತು. ನಂತರ ನಡೆದ ಮೆಗಾ ಆಡಿಷನ್ನಲ್ಲೂ ಸೆಲೆಕ್ಟ್ ಆದೆ. ಇಲ್ಲಿ 17 ಜನ ಸ್ಪರ್ಧಿಗಳು ಇದ್ದರು. ಆದರೆ, ನಾನೊಬ್ಬ ಅಂಧ. ನಾನು ಹೇಗೆ ಇವರೊಂದಿಗೆ ಸ್ಪರ್ಧಿಸಲಿ ಎಂಬ ಕೀಳರಿಮೆ ಇತ್ತು. ನನ್ನ ಆತಂಕ ದೂರ ಮಾಡಲು ಸಂಗೀತ ನಿರ್ದೇಶಕರು, ತೀರ್ಪುಗಾರರು ಧೈರ್ಯ ತುಂಬಿದರು. ಪ್ರತಿ ಹಾಡಿಗೂ ಐದಾರು ಸಲ ರಿಹರ್ಸಲ್ ಮಾಡಿಸುತ್ತಿದ್ದರು. ಆಗಾಗ ನನಗೆ ಧ್ವನಿ ಸಮಸ್ಯೆ ಆಗುತ್ತಿತ್ತು. ಕೆಲ ಬಾರಿ ರಾಗ ತಪ್ಪುತ್ತಿದ್ದೆ. ಪುನಃ ಸರಿಪಡಿಸಿಕೊಂಡು ಯಶಸ್ವಿಯಾಗಿ ಹಾಡುತ್ತಿದ್ದೆ. ಹೀಗಾಗಿ, ಫೈನಲ್ ರೌಂಡ್ನಲ್ಲಿ ಆಯ್ಕೆಯಾದೆ.

ಸಂಗೀತ ಕ್ಷೇತ್ರದಲ್ಲಿ ನಾನಿನ್ನೂ ಚಿಕ್ಕವ. ನಾನು ಕಲಿಯಬೇಕಾದ್ದು ಸಾಕಷ್ಟಿಧಿದೆ. ಸಂಗೀತ ಶಿಕ್ಷ ಕನಾಗುವ ಆಸೆ ಮೊದಲಿನಿಂದಲೂ ಇದೆ. ಜತೆಗೆ, ಸಿನಿಮಾ ರಂಗದಲ್ಲೂ ನನ್ನ ದನಿ ಪರಿಚಯಿಸುವ ಆಸೆಗೆ ಇದೀಗ ವೇದಿಕೆ ಸಿಕ್ಕಿದೆ.

ಆಶ್ರಮದಲ್ಲಿ ಬೆಳಗಿನ ಜಾವ 4 ಗಂಟೆಗೆ ಎದ್ದು ಎರಡು ತಾಸು ಸಂಗೀತ ಅಭ್ಯಾಸ ಮಾಡುತ್ತಿದ್ದೆ. ಪಂಚಾಕ್ಷ ರಿ ಗವಾಯಿ, ಪಂಡಿತ ಪುಟ್ಟರಾಜ ಗವಾಯಿ ಮತ್ತು ಸಂಗೀತ ಶಿಕ್ಷ ಕರೇ ನನಗೆ ಸ್ಫ್ಪೂರ್ತಿ. ಇದು ಸಂಗೀತದ ಆಸಕ್ತಿ ಹೆಚ್ಚಿಸಿತು. ಸಂಗೀತವೇ ನನ್ನ ಉಸಿರು. ಇದರ ಮೂಲಕ ಜಗತ್ತನ್ನು ಕಾಣುತ್ತಿದ್ದೇನೆ. ನಾನು ಸಾಧಿಸುವುದು ಬಹಳ ಇದೆ ಎಂದರು.

ಇದೇ ವೇಳೆ ಮೆಹಬುಬ್ ಸಾಬ್ ಮತ್ತು ಕತ್ತಲೆಕೋಣೆ ಚಿತ್ರತಂಡದ ನಿರ್ದೇಶಕ ಪತ್ರಕರ್ತ ಸಂದೇಶ್ ಶೆಟ್ಟಿ ಆಜ್ರಿ ಅವರನ್ನು ಪ್ರೆಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರೆಸ್ ಕ್ಲಬ್ ಸಹ ಸಂಚಾಲಕ ಅನೀಶ್ ಡಿ’ಸೋಜಾ, ಸುಭಾಶ್ಚಂದ್ರ ವಾಗ್ಳೆ. ಕತ್ತಲೆ ಕೋಣೆ ಚಿತ್ರದ ರತಿಕ್ ಮುರ್ಡೇಶ್ವರ್ ವೇದಿಕೆಯಲ್ಲಿದ್ದರು. ಪತ್ರಕರ್ತ ಶಶಿಧರ ಮಾಸ್ತಿಬೈಲ್ ಕಾರ್ಯಕ್ರಮ ನಿರೂಪಿಸಿದರು.


Spread the love
1 Comment
Inline Feedbacks
View all comments
6 years ago

Congratulations to Mehboob Saheb. I am still waiting to hear another Mohammed Rafi in my lifetime. Hope we will be lucky to have someone like Radi. I was lucky to hear Radi Saab live at Bangalore in 1978. I also have heard Kishore Kumar live. No one can really match such huge talent. Kumar Sanu sounds so ordinary when compared to Kishore. Again Sonu Nigam is just an imitation of Radi but not as melodious. If you like to hear variations in a song, listen to ‘aisa na go ke inn waadiyon mein, by Rafi from the movie Aakhri Dao.… Read more »