ಸಾಧ್ಯತಾ ಪತ್ರದಿಂದ ಸ್ವಾವಲಂಬಿಗಳಾಗಿ- ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ಹಲವು ವರ್ಷಗಳಿಂದ ಮಾಲೀಕರ ಮೀನುಗಾರಿಕಾ ದೋಣಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೀನುಗಾರಿಕಾ ಯುವಕರು ಸಾಧ್ಯತಾ ಪತ್ರದಿಂದ ಸ್ವಾವಲಂಬಿಗಳಾಗಲಿದ್ದಾರೆ ಎಂದು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಬುಧವಾರ ಉಡುಪಿಯ ಲಯನ್ಸ್ ಭವನದಲ್ಲಿ, ಉಡುಪಿ ವಿಧಾನಸಭಾ ಕ್ಷೇತ್ರದ ಮೀನುಗಾರರಿಗೆ ಹೊಸ ಯಾಂತ್ರೀಕೃತ ದೋಣಿ ನಿರ್ಮಾಣದ ಸಾಧ್ಯತಾ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಸಾದ್ಯತಾ ಪತ್ರ ಪಡೆಯುವಲ್ಲಿ ಸುಮಾರು 10 ವರ್ಷಗಳಿಂದ ತೊಂದರೆಗಳಿದ್ದು, ಇದರಿಂದಾಗಿ ಬೇರೆಯವರ ಹೆಸರಿನಲ್ಲಿ ಲಕ್ಷಾಂತರ ರೂ ಬಂಡವಾಳ ಹೂಡಿ , ಮೀನುಗಾರಿಕಾ ನೆಡಸಬೇಕಾಗಿತ್ತು, ತಾವು ಸಚಿವರಾದ ಮೇಲೆ ಈ ಸಮಸ್ಯೆಗಳನ್ನು ಗಮನಿಸಿ, ಹೊಸ ಸಾಧ್ಯತಾ ಪತ್ರಗಳನ್ನು ವಿತರಿಸಲಾಗುತ್ತಿದ್ದು, ಈಗಾಗಲೇ ಅಕ್ರಮ ಸಕ್ರಮ ದಲ್ಲಿ 91 ಮಂದಿಗೆ ಸಾಧ್ಯತಾ ಪತ್ರ ವಿತರಿಸಲಾಗಿದೆ, ನವೆಂಬರ್ 2016 ರ ವರೆಗೆ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಸಾಧ್ಯತಾ ಪತ್ರಗಳನ್ನು ವಿತರಿಸಲಾಗುತ್ತಿದ್ದು, ಮೀನುಗಾರಿಕಾ ದೋಣಿಗಳಿಗೆ ಸಂಬಂದಿಸಿದಂತೆ ಎಲ್ಲಾ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಇಟ್ಟುಕೊಳ್ಳುವಚಿತೆ ತಿಳಿಸಿದ ಸಚಿವರು, ಮೀನುಗಾರಿಕೆಗೆ ತೆರಳುವಾಗ ಅಗತ್ಯವಿರುವ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗುವಚಿತೆ ಹಾಗೂ ಸಮುದ್ರದಲ್ಲಿ ಕಾನೂನುಗಳನ್ನು ಪಾಲಿಸುವಚಿತೆ ಮೀನುಗಾರರಿಗೆ ಸಚಿವರು ತಿಳಿಸಿದರು.
ಒಟ್ಟು 186 ಮಂದಿಗೆ ಸಚಿವರು ಸಾಧ್ಯತಾ ಪತ್ರಗಳನ್ನು ವಿತರಿಸಿದರು.
ಸತೀಶ್ ಅಮಿನ್ ಪಡುಕೆರೆ ಉಪಸ್ಥಿತರಿದ್ದರು. ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಾಶ್ರ್ವನಾಥ್ ಸ್ವಾಗತಿಸಿ, ವಂದಿಸಿದರು.