Home Mangalorean News Kannada News ಸಾಮಾಜಿಕ ಜಾಲತಾಣಗಳಲ್ಲಿ ಯೇಸುಕ್ರಿಸ್ತರ ಬಗ್ಗೆ ಅವಮಾನ – ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಖಂಡನೆ

ಸಾಮಾಜಿಕ ಜಾಲತಾಣಗಳಲ್ಲಿ ಯೇಸುಕ್ರಿಸ್ತರ ಬಗ್ಗೆ ಅವಮಾನ – ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಖಂಡನೆ

Spread the love

ಸಾಮಾಜಿಕ ಜಾಲತಾಣಗಳಲ್ಲಿ ಯೇಸುಕ್ರಿಸ್ತರ ಬಗ್ಗೆ ಅವಮಾನ – ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಖಂಡನೆ

ಉಡುಪಿ : ಸಾಮಾಜಿಕ ಜಾಲತಾಣಗಳಲ್ಲಿ ಯೇಸು ಕ್ರಿಸ್ತರ ಬಗ್ಗೆ ಅವಮಾನ ಮಾಡಿರುವುದಕ್ಕೆ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಗ್ರಹಿಸಿದೆ.

ವಿಶ್ವದಾದ್ಯಂತ ಕ್ರೈಸ್ತ ಸಮುದಾಯವು ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬವನ್ನು ಬಹಳ ಶ್ರದ್ಧೇ ಭಕ್ತಿಯಿಂದ ಆಚರಿಸಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಭು ಏಸುಕ್ರಿಸ್ತರನ್ನು ಹಾಗೂ ಧರ್ಮಭಗಿನಿಯರನ್ನು ನಿಂದಿಸಿದ ಪೋಸ್ಟ್ ವೈರಲ್ ಆಗುತ್ತಿದೆ. ಶ್ರೀ ರವೀಂದ್ರ ಗೌಡ ಪಾಟೀಲ ಎಂಬಾತ ಪ್ರಭು ಏಸುಕ್ರಿಸ್ತನ ಭಾವಚಿತ್ರದೊಂದಿಗೆ ಅಶ್ಲೀಲವಾದ ಅರೆನಗ್ನ ಮಹಿಳೆಯ ಚಿತ್ರವನ್ನು ಲಗತ್ತೀಸಿ ಆಕೆಯ ಮುಖದ ಭಾಗಕ್ಕೆ ಕ್ರೈಸ್ತ ಸನ್ಯಾಸಿಯ ಮುಖವನ್ನು ಕತ್ತರಿಸಿ ಒಂದು ಚಿತ್ರ ಹಾಗೂ ಇನ್ನೊಂದರಲ್ಲಿ ಕ್ರೈಸ್ತ ಸನ್ಯಾಸಿನಿರಿಬ್ಬರು ಪ್ರಭು ಏಸುಕ್ರಿಸ್ತರನ್ನು ಮಾದಕವಾಗಿ ಆಲಂಗಿಸಿರುವಂತೆ ವ್ಯಕ್ತವಾಗಿರುವ ಎಡಿಟ್ ಮಾಡಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.

ಇದರಿಂದ ಇಡೀ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲದೆ ಸಮಾಜದ ಸಾಮಾರಸ್ಯವನ್ನು ಕದಡುವ ಹುನ್ನಾರ ಇದರಲ್ಲಿದೆ. ಆದುದರಿಂದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದನ್ನು ತೀವ್ರವಾಗಿ ಖಂಡಿಸುತ್ತದೆ ಹಾಗೂ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಂಡು, ಇಂತಹ ಘಟನೆಗಳು ಪುನರಾವರ್ತನೆಯಾಗದೆ ಮಾಡಲು ಆಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಧರ್ಮಪ್ರಾಂತ್ಯದ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಒತ್ತಾಯಿಸಿದ್ದಾರೆ.


Spread the love

Exit mobile version