Home Mangalorean News Kannada News ಸಾಮಾಜಿಕ ತಾಣಗಳಲ್ಲಿ ಧಾರ್ಮಿಕ ಅವಹೇಳನಕಾರಿ ಸಂದೇಶ ಕ್ರಮಕ್ಕೆ ಮುಸ್ಲಿಮ್ ಲೇಖಕರ ಸಂಘ ಒತ್ತಾಯ

ಸಾಮಾಜಿಕ ತಾಣಗಳಲ್ಲಿ ಧಾರ್ಮಿಕ ಅವಹೇಳನಕಾರಿ ಸಂದೇಶ ಕ್ರಮಕ್ಕೆ ಮುಸ್ಲಿಮ್ ಲೇಖಕರ ಸಂಘ ಒತ್ತಾಯ

Spread the love

ಸಾಮಾಜಿಕ ತಾಣಗಳಲ್ಲಿ ಧಾರ್ಮಿಕ ಅವಹೇಳನಕಾರಿ ಸಂದೇಶ ಕ್ರಮಕ್ಕೆ ಮುಸ್ಲಿಮ್ ಲೇಖಕರ ಸಂಘ ಒತ್ತಾಯ

ಮಂಗಳೂರು: ವಾಟ್ಸಾಪ್ ಮತ್ತು ಫೇಸ್‍ಬುಕ್…..ನಂತಹ ಸಾಮಾಜಿಕ ತಾಣಗಳಲ್ಲಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಂಘರ್ಷಗಳಿಗೆ ಪ್ರಚೋದನೆ ನೀಡುವ ಸಂದೇಶ, ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಇತ್ತೀಚೆಗೆ ಹಿಂದೂ ದೇವತೆಗಳನ್ನು ಅಶ್ಲೀಲ ಮತ್ತು ಅವಹೇಳನಕಾರಿಯಾಗಿ ಫೇಸ್‍ಬುಕ್‍ನಲ್ಲಿ ಹಾಕಲಾಗಿರುವುದನ್ನು ಮುಸ್ಲಿಮ್ ಲೇಖಕರ ಸಂಘ ತೀವ್ರವಾಗಿ ಖಂಡಿಸುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಕೂಲಂಕುಶ ತನಿಖೆ ನಡೆಸಿ, ಅಪರಾಧಿಯ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಹಾಗೂ ‘ಸೈಬರ್ ಕ್ರೈಮ್ ಬ್ರಾಂಚ್’ ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಅವಹೇಳನಕಾರಿ/ಪ್ರಚೋದನಕಾರಿ ಸಂದೇಶ, ಚಿತ್ರಗಳ ಬಗ್ಗೆ ಸಕ್ರೀಯ ನಿಗಾ ವಹಿಸಿ, ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳುವುದರ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ರವರನ್ನು ಭೇಟಿ ಮಾಡಿದ ಮುಸ್ಲಿಮ್ ಲೇಖಕರ ಸಂಘದ ನಿಯೋಗ ಇಂದು ಒತ್ತಾಯಿಸಿದೆ.

ನಿಯೋಗದಲ್ಲಿ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಹೆಚ್., ಜೊತೆ ಕಾರ್ಯದರ್ಶಿ ಮುಹಮ್ಮದ್ ಮುಹ್ಸಿನ್, ಸದಸ್ಯರಾದ ಬಿ. ಎ. ಸಲೀಮ್ ಬೋಳಂಗಡಿ ಮತ್ತು ಶಬ್ಬೀರ್ ಅಹ್ಮದ್ ಇದ್ದರು.


Spread the love

Exit mobile version