ಮಂಗಳೂರು: ಸಮಾಜದಲ್ಲಿ ಯಾರೇ ಸಾಮಾರಸ್ಯ ಹಾಳು ಮಾಡುವ ಕೆಲಸ ಮಾಡಿದರೂ ಕೂಡ ಅದನ್ನು ವಿರೋಧಿಸಿ ಧಿಕ್ಕರಿಸಬೇಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಮುಡಿಪು ಸಂತ ಜೋಸೆಫ್ ವಾಜ್ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಸಭೆಯನ್ನುದ್ದೇಶಿಸಿ ಮಾತನಾಡಿದರು. ಎಲ್ಲಾ ಧರ್ಮವು ಮಾನವನ ಕಲ್ಯಾಣಕ್ಕಾಗಿ ಇದೆ. ರಾಜ್ಯ ಸರ್ಕಾರವು ಸರ್ವಧರ್ಮ ಸಮನ್ವಯತೆ, ಪರಸ್ಪರ ಸಹಬಾಳ್ವೆಗೆ ಒತ್ತು ನೀಡುವ ಸರ್ಕಾರವಾಗಿದೆ. ಹಾಗಾಗಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತಿದ್ದು ಎಲ್ಲಾ ಧರ್ಮದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಎಲ್ಲರೂ ಒಂದಾಗಿ ಬೆಳವಣಿಗೆ ಹೊಂದಿದಾಗ ಮಾತ್ರ ಕರ್ನಾಟಕದ ಸಮಗ್ರ ಅಭಿವೃದ್ದಿ ಸಾಧ್ಯ ಎಂದರು.
More Photos
ಕೈಸ್ತ ಅಭಿವದ್ಧಿ ಮಂಡಳಿಯನ್ನು ನಿಗಮ ಮಾಡಿ:
ಮಂಗಳೂರು ಧರ್ಮ ಪ್ರಾಂತ್ಯದ ಅಲೋಶೀಯಸ್ ಪೌಲ್ ಡಿಸೋಜಾ ಮಾತನಾಡಿ, ಕೈಸ್ತ ಅಭಿವೃದ್ದಿ ನಿಗಮವನ್ನು ಕೈಸ್ತ ಅಭಿವೃದ್ಧಿ ನಿಗಮ ಮಾಡುವಂತೆ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ 135 ವರ್ಷಗಳಿಂದ ಆಸ್ಥಿತ್ವದಲ್ಲಿದ್ದು ಸ್ವತಂತ್ರ ವಿಶ್ವವಿದ್ಯಾನಿಯಕ್ಕೆ ಅರ್ಹವಾಗಿರುವುದರಿಂದ ಸರ್ಕಾರದಿಂದ ನಿರಪೇಕ್ಷಣಾ ಅರ್ಜಿ ನೀಡುವಂತೆ ಕೋರಿದರು.
ಇದೇ ಸಂದರ್ಭ ಸರ್ಕಾರ ವತಿಯಿಂದ 25 ಲಕ್ಷ ರೂ ಧನ ಸಹಾಯದ ಚೆಕ್ಕನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಧರ್ಮಗುರುಗಳಿಗೆ ವಿತರಿಸಿದರು. ಮುಡಿಪು ಸಂತ ಜೋಸೆಫ್ ವಾಜ್ ಕ್ಷೇತ್ರದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಶಾಲು ಹೊದಿಸಿ ನೆನೆಪಿನ ಕಾಣಿಕೆ ನೀಡಲಾಯಿತು.
ಮುಡಿಪು ಸಂತ ಜೋಸೆಫ್ ವಾಜ್ ಕ್ಷೇತ್ರದ ನಿರ್ದೇಶಕ, ಧರ್ಮ ಗುರು ಗ್ರೇಗರಿ ಡಿಸೋಜಾ ಕ್ಷೇತ್ರದ ಪರಿಚಯವನ್ನು ಮಾಡಿ ಕೊಟ್ಟರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್, ನಗರಾಭಿವೃದ್ದಿ ಸಚಿ ವಿನಯ್ ಕುಮಾರ್ ಸೊರಕೆ, ಅರಣ್ಯ ಸಚಿವ ರಮಾನಾಥ ರೈ, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.