ಸಾಯಲು ಮನಸ್ಸಿದ್ದವರು ಸಂಘ ಪರಿವಾರ ಸೇರಿ; ಕಾರ್ಪೋರೇಟರ್ ಪ್ರತಿಭಾ ಕುಳಾಯಿ ವಿವಾದತ್ಮಕ ಹೇಳಿಕೆ

Spread the love

ಸಾಯಲು ಮನಸ್ಸಿದ್ದವರು ಸಂಘ ಪರಿವಾರ ಸೇರಿ; ಕಾರ್ಪೋರೇಟರ್ ಪ್ರತಿಭಾ ಕುಳಾಯಿ ವಿವಾದತ್ಮಕ ಹೇಳಿಕೆ

ಉಡುಪಿ: ಯಾರಿಗೆಲ್ಲ ಸಾಯಲು ಮನಸ್ಸಿದೆ ಅವರು ಸಂಘ ಪರಿವಾರ ಸೇರಿ,ದುಡಿಯಲು ಮನಸ್ಸಿಲ್ಲದವರು ಸಂಘ ಪರಿವಾರ ಸೇರಿ ಎಂದು ಮಂಗಳೂರು ಸುರತ್ಕಲ್ ಕಾರ್ಪೋರೇಟರ್ ಪ್ರತಿಭಾ ಕುಲಾಯಿ ವಿವಾದಾತ್ಮಕ ಭಾಷಣ ಮಾಡಿದ್ದಾರೆ.

ಕೆಲದಿನಗಳ ಹಿಂದೆ ಕಾರ್ಕಳದ ಬಿ.ಜೆ.ಪಿ ಶಾಸಕ ಸುನೀಲ್ ಕುಮಾರ್ ವಿರುದ್ದ ಕಾರ್ಕಳದಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯೊಂದರಲ್ಲಿ ಪ್ರತಿಭಾ ಕುಳಾಯಿ ತುಳುವಿನಲ್ಲಿ ಈ ಭಾಷಣ ಮಾಡಿದ್ದಾರೆ. ಈ ಭಾಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತಿಚೇಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಕಾಟಿಪಳ್ಳದ ದೀಪಕ್ ರಾವ್ ಏರಿಯಾದ ಕಾರ್ಪೋರೇಟರ್ ಆಗಿರುವ ಪ್ರತಿಭಾ ಕುಳಾಯಿ ದೀಪಕ್ ರಾವ್ ಕೊಲೆಯಾದಾಗಲು ಹಿಂದೂಸಂಘಟನೆಗಳು ಕೋಟಿಗಟ್ಟಲೆ ಸಂಗ್ರಹ ಮಾಡಿದಾರೆ ಆದ್ರೆ ದೀಪಕ್ ರಾವ್ ಮನೆಯವರಿಗೆ ಇವತ್ತಿನವರೆಗೆ ಒಂದು ರುಪಾಯಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ತುಳುವಿನಲ್ಲಿ ಭಾಷಣ ಮಾಡಿರುವ ಅವರ ಭಾಷಣದ ಕನ್ನಡ ಸಾರಾಂಶ ಹೀಗಿದೆ.

ಮರ್ಡರ್ ಮಾಡಿ ಬಂದ್ರೆ ಸಾಕು ಜೈಲಿನಲ್ಲಿ ನಿಮಗೆ ಎಷ್ಟು ಬೇಕಾದ್ರೂ ಅನ್ನ ಸಿಗುತ್ತದೆ,ಧರ್ಮಾರ್ಥ ನಿಮಗೆ ಜೈಲಿನಲ್ಲಿ ಅನ್ನ ಸಿಗುತ್ತದೆ ನಂತ್ರ ಸಂಘ ಪರಿವಾರದವರು ಜೈಲಿಗೆ ಇಣುಕಿ ನೋಡಲು ಹೋಗುದಿಲ್ಲ ಎಂದು ಹೇಳಿದ್ದಾರೆ. ಯಾರಾದ್ರೂ ಹಿಂದುಗಳು ಸತ್ರೆ ಸಾಕು ವಾಟ್ಸ್ ಅಪ್,ಫೇಸ್ ಬುಕ್ ನಲ್ಲಿ ಸತ್ತವರ ಬಗ್ಗೆ ಪ್ರಚಾರ ಮಾಡ್ತಾರೆ,ಇಷ್ಟು ಕೋಟಿ ಸಂಗ್ರಹ ಆಗಿದೆ ಅಷ್ಟು ಕೋಟಿ ಸಂಗ್ರಹ ಆಯ್ತು ಅಂತಾರೆ ಆದ್ರೆ ಮನೆಯವರಿಗೆ ಒಂದು ರುಪಾಯಿ ಸಿಕ್ಕಿಲ್ಲ, ಶರತ್ ಮಡಿವಾಳ ತಂದೆಯೇ ಹೇಳಿಕೆ ಕೊಟ್ಟಿದ್ದಾರೆ ಎಲ್ರೂ ಬಂದು ಹೋದ್ರು ಯಾರೂ ಏನೂ ಮಾಡಿಲ್ಲ ಅಂದಿದಾರೆ ಎಂದು ಹೇಳಿದ್ದಾರೆ. ಹಿಂದೂ ಸತ್ತರೆ ಹಿಂದೂಪರ ಸಂಘಟನೆಗಳು ಸಂಭ್ರಮಿಸುತ್ತವೆ ಹಲವಾರು ಹಿಂದೂಗಳನ್ನು ಇವರೇ ಕೊಂದಿದ್ದಾರೆ, ನಾನು ಕೂಡಾ ಹಿಂದು,ನನ್ನ ಬಣ್ಣ ಕೂಡಾ ಕೇಸರಿಯೇ ಬಿಜೆಪಿ ಯವರು ಕೇಸರಿಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಆಕ್ರೋಶದ ಮಾತನ್ನಾಡಿದ್ದಾರೆ.


Spread the love