ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆಗೆ ಪ್ರಚೋದನೆ; ಇಬ್ಬರು ಮಹಿಳೆಯರ ಬಂಧನ
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಇಬ್ಬರನ್ನು ಮಹಿಳೆಯರನ್ನು ಬಂದರು ಠಾಣೆಯ ಪೋಲಿಸರು ಬುಧವಾರ ನಗರದ ಕ್ಸಂಲಾಕ್ಜೆ ಟವರ್ ಬಳಿ ಬಂಧಿಸಿದ್ದಾರೆ. ಬಂಧಿತ ಮಹಿಳೆಯರನ್ನು ಪ್ರಿಯಾ (26) ಹಾಗೂ ಮಧು (30) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 16 ರಂದು ಬಸ್ಸಿನಲ್ಲಿ ತೆರಳುತ್ತಿರುವ ಮಹಿಳೆಯೋರ್ವರು ಲೇಡಿಗೋಷನ್ ಬಳಿಯಿಂದ ಕರೆ ಮಾಡಿ ಲೇಡಿಗೋಷನ್ ಭಾಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮ್ಯಾಂಗಲೋರಿಯನ್ ಪ್ರತಿನಿಧಿಗೆ ದೂರು ನೀಡಿದ್ದರು. ನಗರದ ಕ್ಲಾಕ್ ಟವರ್ ಬಳಿ ಬಹಿರಂಗವಾಗಿ ವೇಶ್ಯಾವಾಟಿಕೆ ನಡೆಯುತ್ತಿರುವುದರಿಂದ ಮರ್ಯಾದಸ್ಥ ಮಹಿಳೆಯರಿಗೆ ತಿರುಗಾಡುವುದು ಕಷ್ಟವಾಗಿದೆ. ಹಲವಾರು ಮಹಿಳೆಯರು ರಸ್ತೆಯಲ್ಲಿ ಬಹಿರಂಗವಾಗಿ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆಕೆ ದೂರಿಕೊಂಡಿದ್ದರು.
ಮಹಿಳೆಯರು ಕ್ಲಾಕ್ ಟವರ್ ಬಳಿಯ ಬಟ್ಟೆಯಂಗಡಿಯೊಂದರಲ್ಲಿ ಕುಳಿತು ರಸ್ತೆಯಲ್ಲಿ ಹಾದುಹೋಗುವ ಮಹಿಳೆಯರನ್ನು ವೇಶ್ಯಾವಾಟಿಕೆ ಕರೆಯುತ್ತಿದ್ದು, ಕಪ್ಪು ಬಟ್ಟೆಯ ಶಾಲನ್ನು ಹಾಕಿಕೊಂಡಿರುವ ಮಹಿಳೆ ಸದಾ ಫೋನಿನಲ್ಲಿ ಮಾತನಾಡುತ್ತಾಳೆ ಮತ್ತು ಆಕೆಯೇ ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಲಸವನ್ನು ಮಾಡುತ್ತಿರುವ ಕುರಿತು ಮಾಹಿತಿಯನ್ನು ನೀಡಿದ್ದರು.
ಮಹಿಳೆಯ ದೂರಿನಂತೆ ಮ್ಯಾಂಗಲೋರಿಯನ್ ತಂಡ ಬುಧವಾರ ಸಂಜೆ ಕ್ಲಾಕ್ ಟವರ್ ಬಳಿ ತೆರಳಿ ದೂರಿನ ಸತ್ಯಾಸತ್ಯತೆ ಅರಿಯುವ ಸಲುವಾಗಿ ತೆರಳಿದಾಗ ಮಹಿಳೆ ನೀಡಿದ ಮಾಹಿತಿ ಸತ್ಯವಾಗಿತ್ತು. ಕಪ್ಪು ಶಾಲನ್ನು ಹಾಕಿಕೊಂಡ ಮಹಿಳೆ ಬಹಿರಂಗವಾಗಿ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿರುವುದು ಕಂಡು ಬಂದಿದ್ದು, ಕೂಡಲೇ ಈ ಮಾಹಿತಿಯನ್ನು ಪೋಲಿಸರಿಗೆ ನೀಡಲಾಯಿತು. ಮಾಹಿತಿ ಲಭಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಬಂದರೂ ಪೋಲಿಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದು, ಅವರಿಗೆ ಸಹಕರಿಸುತ್ತಿದ್ದ ಒರ್ವ ಪುರಷ ಹಾಗೂ ಇತರ ತಂಡ ಸ್ಥಳದಿಂದ ಪರಾರಿಯಾಗಿದೆ.
ಬಂಧಿತರನ್ನು ಹೆಚ್ಚಿನ ತನಿಖೆಗಾಗಿ ಬಂದರು ಠಾಣೆಗೆ ಕರೆದೊಯ್ಯಲಾಗಿದೆ.
ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಅವರು ಕ್ಲಾಕ್ ಟವರ್ ಪ್ರದೇಶದಲ್ಲಿ ನಡೆಯುತ್ತಿರುವ ಇಂತಹ ಅಕ್ರಮ ಚಟುವಟಿಕೆಯ ಕುರಿತು ಮಾಹಿತಿ ಇರಲಿಲ್ಲ. ಇನ್ನು ಮುಂದೆ ಈ ಕುರಿತು ಹೆಚ್ಚಿನ ಮುಂಜಾಗ್ರತೆ ವಹಿಸುತ್ತೇವೆ. ಅಪರಾಧವನ್ನು ತಡೆಯುವಲ್ಲಿ ಪೋಲಿಸರು ಸದಾ ಎಚ್ಚರದಿಂದ ಇರಬೇಕಾಗಿದೆ. ನಗರದಲ್ಲಿ ನಡೆಯುತ್ತಿರುವ ಇಂತಹ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕಲು ಸಾರ್ವಜನಿಕರ ಸಹಕಾರವೂ ಬೇಕಾಗುತ್ತದೆ ಎಂದರು.