ಸಾಲ ಮನ್ನಾ ಬಿಜೆಪಿ ಹೋರಾಟದ ಫಲ: ಜಿತೇಂದ್ರ ಎಸ್ ಕೊಟ್ಟಾರಿ

Spread the love

ಸಾಲ ಮನ್ನಾ ಬಿಜೆಪಿ ಹೋರಾಟದ ಫಲ: ಜಿತೇಂದ್ರ ಎಸ್ ಕೊಟ್ಟಾರಿ

ಮಂಗಳೂರು : ರಾಜ್ಯದಲ್ಲಿ ರೈತರ ಸಾಲದ ಸಮಸ್ಯೆಯನ್ನು ಚೆನ್ನಾಗಿ ಅರಿತಿರುವ ಬಾ.ಜ.ಪಾರ್ಟಿ ರೈತರ ಸಾಲ ಮನ್ನಾ ಮಾಡಿ ರಾಜ್ಯದಲ್ಲಿ ನಡೆಯುವ ರೈತರ ಆತ್ಮಹತ್ಯೆಗಳನ್ನು ಶಾಶ್ವತ ಇತಿಶ್ರೀ ಹಾಡಬೇಕೆಂದು ಕಳೆದ ನಾಲ್ಕು ವರ್ಷಗಳಿಂದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪರ ನೇತ್ರತ್ವದಲ್ಲಿ ನಿರಂತರ ಹೋರಾಟಗಳನ್ನು ರಾಜ್ಯ ಸರಕಾರದ ವಿರುದ್ದ ನಡೆಸಿದೆ.
ಇದರ ಮುಂದಿನ ಬಾಗವಾಗಿ ವಿಧಾನಸೌದದ ಎದುರುಗಡೆ ಅಮರಣಾಂತ ಉಪವಾಸವನ್ನು ಮಾಡುವುದಾಗಿ ರಾಜ್ಯಾಧ್ಯಕ್ಷರು ಘೋಷಿಸಿರುವಾಗ ಈ ಎಲ್ಲಾ ಹೋರಾಟಕ್ಕೆ ಮಣಿದು ರಾಜ್ಯ ಸರಕಾರ ರಾಜ್ಯದ ರೈತರ ಸಾಲದಲ್ಲಿ 50,000 ರೂಪಾಯಿಗಳಷ್ಟು ಮನ್ನಾ ಮಾಡುವ ನಿರ್ಧಾರವನ್ನು ಜಿಲ್ಲಾ ಬಾ.ಜ.ಪಾರ್ಟಿ ಸ್ವಾಗತಿಸುತ್ತದೆ.
ದೇಶದ ಬೇರೆ ಬೇರೆ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲಮನ್ನಾ ಮಾಡಿರುವಾಗ, ಅತ್ಯಂತ ಹೆಚ್ಚು ರೈತರ ಆತ್ಮಹತ್ಯೆಗಳು ನಡೆದ ಈ ರಾಜ್ಯದಲ್ಲಿ ರೈತರ ಸಾಲವನ್ನು ಪೂರ್ತಿಯಾಗಿ ಮನ್ನಾ ಮಾಡುವಂತೆ ಜಿಲ್ಲಾ ಬಿಜೆಪಿ ಆಗ್ರಹಿಸುತ್ತದೆ.
ಈಗಾಗಲೇ ಘೋಷಣೆಯಾದ ಸಾಲ ಮನ್ನಾದ ಮೊತ್ತವನ್ನು ರೈತರ ಖಾತೆಗೆ ವರ್ಗಾಹಿಸಿ ಯೋಜನೆಯನ್ನು ಕೂಡಲೇ ಕಾರ್ಯಗತಗೊಳಿಸಬೇಕೆಂದು ಜಿಲ್ಲಾ ವಕ್ತಾರ ಜಿತೇಂದ್ರ ಎಸ್ ಕೊಟ್ಟಾರಿ ಸರಕಾರವನ್ನು ಆಗ್ರಹಿಸುತ್ತದೆ.


Spread the love